Viral Video: ಎತ್ತಿನ ದಾ”ಳಿಯಿಂದ ಅಜ್ಜಿಯ ಜೀವ ಉಳಿಸಿದ ಬಾಲಕ; ಬಾಲಕನ ಸಾಹಸ ಮೆಚ್ಚಿದ ಜನ!

ಹರಿಯಾಣದ ಶೂಟರ್ ಅಜ್ಜಿ ಎಂದೇ ಜನಪ್ರಿಯರಾಗಿರುವವರ ಚಂದ್ರೋ ತೋಮರ್ ಅವರು‌. ಈಕೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಟ್ವಿಟರ್ ನಲ್ಲಿ ಆಕೆ ಸಂಚಲನ ಸೃಷ್ಟಿಸಿರುವ ವಿಷಯಗಳ ಕುರಿತಾಗಿ ತನ್ನ ಅಭಿಪ್ರಾಯವನ್ನು ಹಾಗೂ ತನ್ನ ಪ್ರತಿಕ್ರಿಯೆಗಳನ್ನು ಬಹಳ ದಿಟ್ಟವಾಗಿ ಇಡುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾರೆ ಈ ಅಜ್ಜಿ. ಕೆಲವೇ ದಿನಗಳ ಹಿಂದೆ ಶೂಟರ್ ಅಜ್ಜಿ ಒಂದು ವಿಡಿಯೋವನ್ನು ತಮ್ಮ ಟ್ವಿಟರ್ ನ ಖಾತೆಯಲ್ಲಿ ಹಂಚಿಕೊಂಡಿದ್ದು ಆ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ವೈರಲ್ ಆಗುತ್ತಾ ಸಾಗಿದೆ ಹಾಗೂ ನೋಡುಗರು ಕೂಡಾ ಅದನ್ನು ಮೆಚ್ಚಿ ಶೇರ್ ಮಾಡುತ್ತಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ದಿಟ್ಟನೆನಿಸಿದ ಬಾಲಕನೊಬ್ಬ ತನ್ನ ಅಜ್ಜಿಯ ಮೇಲೆ ಧಾ ಳಿ ಇಡಲು ಬಂದ ಒಂದು ಎತ್ತಿನಿಂದ ತನ್ನ ಅಜ್ಜಿಯನ್ನು ಕಾಪಾಡಲು ಅ ಪಾ ಯವನ್ನು ಕೂಡಾ ಲೆಕ್ಕಿಸಿದ, ಅಜ್ಜಿಯ ರಕ್ಷಣೆ ಮಾಡಲು ಹೋಗಿರುವ ಅಪರೂಪದ ದೃಶ್ಯವು ಸೆರೆಯಾಗಿದೆ. ತನ್ನ ಅಜ್ಜಿಯನ್ನು ಕಾಪಾಡಲು ಬಾಲಕನು ಮಾಡಿರುವ ಸಾಹಸವು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ‌. ಇಂಟರ್ನೆಟ್ ನಲ್ಲಿ ಬಾಲಕನ ಈ ಹೋ ರಾಟದ ವೀಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ.
ವೀಡಿಯೋದಲ್ಲಿ ನೋಡಿದಾಗ ಒಂದು ಗಲ್ಲಿಯ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದು ಹೋಗುವಾಗ ಎಲ್ಲಿಂದಲೋ ಬಂದ ಒಂದು ಭಯ ಹುಟ್ಟಿಸುವ ಎತ್ತು ಆ ಮಹಿಳೆಯ ಮೇಲೆ ಆ ಕ್ರ ಮಣವನ್ನು ಮಾಡಲು ಮುಂದಾಗಿದೆ‌.

ಹಾಗೆ ನು ಗ್ಗಿ ಬಂದ ಎತ್ತು ತನ್ನ ಕೊಂಬಿನಿಂದ ಮಹಿಳೆಯ ಮೇಲೆ ಹ ಲ್ಲೆಯನ್ನು ಮಾಡಿದೆ. ಅನಿರೀಕ್ಷಿತವಾಗಿ ಆದ ಆ ಧಾ ಳಿಯನ್ನು ಊಹಿಸಿರದ ಮಹಿಳೆ ಎತ್ತು ಮಾಡಿದ ಧಾ ಳಿ ಗೆ ಕೆಳಗೆ ಬಿದ್ದಿದ್ದಾರೆ. ಈ ಘಟನೆ ನಡೆದ ಕೂಡಲೇ ಅಲ್ಲಿದ್ದ ಪುಟ್ಟ ಬಾಲಕನು ತನ್ನ ಅಜ್ಜಿಯನ್ನು ಎತ್ತಿನಿಂದ ಕಾಪಾಡಲು ಭಯ ಪಡದೇ ಎತ್ತಿನ ಭಯವನ್ನು ಬಿಟ್ಟು ಅಜ್ಜಿಯ ಕಡೆ ಓಡಿ ಬಂದಿದ್ದಾನೆ. ಆತನನ್ನು ನೋಡಿದ ಎತ್ತು ಆತನ ಮೇಲೆ ಧಾ ಳಿ ಮಾಡಲು ಮುಂದಾಗಿದೆ. ತನ್ನ ತಲೆಯಿಂದ ಆತನನ್ನು ಕೂಡಾ ಹೊ ಡೆ ದು ಬೀಳಿಸಿದೆ ಎತ್ತು. ಆದರೂ ಬಾಲಕ ಅಲ್ಲಿಂದ ಓಡಿ ಹೋಗಿಲ್ಲ. ಬದಲಾಗಿ ಅಜ್ಜಿಯ ಬಳಿ ಹೋಗಿ ಅಜ್ಜಿಯನ್ನು ಮೇಲೆ ಎತ್ತಿದ್ದಾನೆ.

ಆತ ಅಜ್ಜಿಯನ್ನು ಮೇಲೆ ಎತ್ತುವ ವೇಳೆಗೆ ಎತ್ತು ಮತ್ತೊಮ್ಮೆ ಅವರ ಮೇಲೆ ಆ ಕ್ರ ಮಣ ಮಾಡಲು ನೋಡಿದೆ‌. ಆ ವೇಳೆಗೆ ಆ ರಸ್ತೆಯಲ್ಲಿ ಒಬ್ಬರು ಅದನ್ನು ಓಡಿಸಲು ಕೋಲು ಹಿಡಿದು ಬಂದರಾದರೂ ಆ ಎತ್ತಿನ ಭೀ ಕ ರತೆ ನೋಡಿ ಅವರು ಹಿಂದೆ ಹೋಗಿದ್ದಾರೆ‌. ಎತ್ತು ಮತ್ತೊಮ್ಮೆ ಅಜ್ಜಿ ಹಾಗೂ ಬಾಲಕನನ್ನು ಹೊಡೆದು ಬೀಳಿಸಿದೆ‌. ಆದರೆ ಬಾಲಕ ಮಾತ್ರ ಅಜ್ಜಿಯನ್ನು ಬಿಟ್ಟು ಹೋಗಿಲ್ಲ‌. ಇಂತಹ ವೀಡಿಯೋ ಬಿಡುಗಡೆ ಮಾಡಿರುವ ಶೂಟರ್ ಅಜ್ಜಿ ಚಂದ್ರೋ ತೋಮರ್ ಅವರು ತನ್ನ ಅಜ್ಜಿ ಮೇಲಿನ ಅಪಾರವಾದ ಪ್ರೇಮದಿಂದ ಪ್ರಾಣದ ಹಂಗು ತೊರೆದು ಆ ಎತ್ತನ್ನು ಎದುರಿಸಿದ ಬಾಲಕನಿಗೆ ಗೌರವ ಸಿಗಬೇಕು ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿ..

ಈ ವೀಡಿಯೋ ವನ್ನು ಈಗಾಗಲೇ 6 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 59 ಸಾವಿರ ಲೈಕ್ಸ್ ಗಳು ಹಾಗೂ 13 ಸಾವಿರ ರೀಟ್ವೀಟ್ ಗಳು ಆಗಿವೆ‌. ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಬಾಲಕನ ಸಾಹಸವನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರು ಎತ್ತುಗಳನ್ನು ಈ ರೀತಿ ರಸ್ತೆಯಲ್ಲಿ ಬಿಡಬಾರದು ಎಂದಿದ್ದಾರೆ. ಇನ್ನೂ ಕೆಲವರು ಅಜ್ಜಿಯ ಪರಿಸ್ಥಿತಿ ನೋಡಿ ದಯೆ ತೋರಿದ್ದಾರೆ. ಕೆಲವರು ಇಲ್ಲೂ ಕೂಡಾ ಧರ್ಮದ ಹೆಸರನ್ನು ಬಳಸಿ ಸುಖಾಸುಮ್ಮನೆ ಏನೋ ಒಂದು ಹೇಳಬೇಕು ಎನ್ನುವಂತೆ ಕಾಮೆಂಟ್ ಅನ್ನು ಮಾಡಿದ್ದಾರೆ.