ಈ ಫೋಟೋದಲ್ಲಿ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ? ಬೇಕಾದರೆ ಫೋಟೋ Zoom ಮಾಡಿ ನೋಡಬಹುದು!
ಯಾವುದೇ ಒಂದು ವಸ್ತು ಅಥವಾ ಚಿತ್ರವನ್ನು ಪ್ರತಿಯೊಂದು ವ್ಯಕ್ತಿಯು ನೋಡುವ ದೃಷ್ಟಿಕೋನವು ಭಿನ್ನವಾಗಿರುತ್ತದೆ. ಅದು ಆತನ ನೋಡುವ ನಿರೀಕ್ಷಣಾತ್ಮಕ ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತದೆ.
ಒಂದು ವೇಳೆ ನನ್ನ ದೃಷ್ಟಿಯೇ ಎಲ್ಲರಿಗಿಂತ ತೀಕ್ಷ್ಣವಾಗಿದೆ ಎಂದು ಅನಿಸುತ್ತಿದ್ದರೆ ನಿಮ್ಮ ಕಣ್ಣಿಗೆ ಒಂದು ಚಾಲೆಂಜ್ ಈ ಚಿತ್ರದಲ್ಲಿದೆ.
ನಿಮ್ಮ ಕಣ್ಣುಗಳು ಎಷ್ಟೊಂದು ಸೂಕ್ಷ್ಮದೃಷ್ಟಿಯನ್ನು ಗ್ರಹಿಸುತ್ತವೆ ಎಂದು ತಿಳಿದುಕೊಳ್ಳಲು ಈ ಫೋಟೋ ಪಜಲ್ ಒಂದು ಒಳ್ಳೆಯ ಟೆಸ್ಟ್ ಆಗಬಹುದು. ಯಾರ ಜೊತೆಗೆ ಕಾಂಪಿಟೇಶನ್ ಗೆ ತಿಳಿಯದೆ ನಿಮ್ಮ ಕಣ್ಣುಗಳನ್ನು ನೀವೇ ಈ ಪಜಲ್ ಮುಖಾಂತರ ಟೆಸ್ಟ್ ಮಾಡಿಕೊಳ್ಳಬಹುದು.
ವ್ಯಕ್ತಿಯು ಸಹಜವಾಗಿ ತನ್ನಲ್ಲಿರುವ ಬುದ್ಧಿಶಕ್ತಿಯನ್ನು ಕೆಲವೊಮ್ಮೆ ಪದಬಂಧ, ಸುಡೊಕು ಹೀಗೆ ಅನೇಕ ರೀತಿಯ ಆಟಗಳನ್ನು ಆಡುವಾಗ ಓರೆಗೆ ಹಚ್ಚುತ್ತಿರುತ್ತಾನೆ.
ಇಂತಹ ಆಟಗಳನ್ನು ಆಡುತ್ತಿರುವಾಗ ಕೆಲವೊಮ್ಮೆ ಕೆಲವೊಂದು ಪ್ರಶ್ನೆಗಳು ವ್ಯಕ್ತಿಗೆ ಸವಾಲಾಗಿ ನಿಲ್ಲುತ್ತದೆ. ಅಂತ ಸವಾಲುಗಳನ್ನು ಎದುರಿಸಲು ಅಥವಾ ಅವುಗಳಿಗೆ ಉತ್ತರವನ್ನು ಶೋಧಿಸಿಯೇ ತೀರಬೇಕು ಎಂಬ ಹಠ ನಿರ್ಮಾಣವಾಗುತ್ತದೆ. ಇದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ ಇನ್ನು ಕೆಲವರು ಪ್ರಯತ್ನ ಮಾಡಿ ನಂತರ ಸಂಯಮವನ್ನು ಕಳೆದುಕೊಂಡು ಹಾಗೆ ಬಿಟ್ಟು ಬಿಡುತ್ತಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಕಣ್ಣುಗಳಿಗೆ ಸವಾಲೆಸೆಯುವ ಚಿತ್ರ ಒಂದು ತುಂಬಾ ವೈರಲ್ ಆಗುತ್ತಿದೆ. ಕೆಲವು ದಿವಸಗಳ ಮೊದಲು ಒಬ್ಬ ಯೂಸರ್ ಈ ಫೋಟೋವನ್ನು ರೆಡಿಟ್ ಮೇಲೆ ಅಪ್ಲೋಡ್ ಮಾಡಿದ್ದಾನೆ. ಮತ್ತು ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ ತೆಗೆಯಲು ಸಾಧ್ಯವೇ ಎಂದು ಪ್ರಶ್ನೆ ಹಾಕಿದ್ದಾನೆ. ಈ ಚಿತ್ರ ಅಸಂಖ್ಯ ಜನರ ತಲೆ ಅಲ್ಲ ಕಣ್ಣುಗಳನ್ನು ತಿನ್ನುತ್ತಿದೆ. ಹಾಗಾದರೆ ನಿಮ್ಮ ಕಣ್ಣುಗಳು ಎಷ್ಟು ತೀಕ್ಷ್ಣವಾಗಿವೆ ಎಂಬುದನ್ನು ತಿಳಿದುಕೊಳ್ಳಲು ನೀವೂ ಒಂದು ಕೈ ನೋಡಿಯೇಬೇಡಿ.

ಮಿತ್ರರೇ ನೀವು ಈ ಚಿತ್ರದಲ್ಲಿಯ ಬೆಕ್ಕನ್ನು ಹುಡುಕಿ ಹುಡುಕಿ ಸಾಕಾದರೆ ಮತ್ತು ಎಷ್ಟು ಪ್ರಯತ್ನ ಮಾಡಿದರೂ ನಿಮ್ಮ ಕಣ್ಣಿಗೆ ಬೆಕ್ಕು ಕಾಣಿಸಲಿಲ್ಲವೆಂದಾದರೆ ನಾವೇ ನಿಮಗೆ ಈ ಫೋಟೋ ಪಜಲ್ ನ ಉತ್ತರವನ್ನು ಹೇಳುತ್ತೇವೆ ನೋಡಿ. ಒಂದು ವೇಳೆ ನಾವು ಉತ್ತರ ಹೇಳುವ ಮುನ್ನವೇ ನೀವೇ ಉತ್ತರವನ್ನು ಶೋಧಿಸಿದ್ದಾದಲ್ಲಿ ನಿಮಗೆ ಅಭಿನಂದನೆಗಳು ಹಾಗೂ ನಿಮ್ಮ ಕಣ್ಣುಗಳು ತುಂಬಾ ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿವೆ ಎಂತಲೇ ಅರ್ಥ.
ಬೆಕ್ಕು ಕಟ್ಟಿಗೆಗಳ ರಾಶಿಯ ಮೇಲೆ ಮಲಗಿಕೊಂಡಿದೆ. ಕಟ್ಟಿಗೆ ಮತ್ತು ಬೆಕ್ಕಿನ ಬಣ್ಣ ಒಂದೇ ರೀತಿಯಾಗಿರುವುದರಿಂದ ಬೆಕ್ಕು ಅಷ್ಟು ಸಹಜವಾಗಿ ಯಾರ ಕಣ್ಣಿಗೂ ಕಾಣುತ್ತಿಲ್ಲ. ತುಂಬಾ ಸೂಕ್ಷ್ಮವಾಗಿ ನಿರೀಕ್ಷಿಸಿದಾಗ ಮಾತ್ರ ಬೆಕ್ಕು ಎದುರಿನ ಕಟ್ಟಿಗೆಗಳ ರಾಶಿಯ ಮೇಲೆ ಶಾಂತವಾಗಿ ಮಲಗಿಕೊಂಡಿರುವದು ಕಂಡುಬರುತ್ತದೆ, ಅಲ್ವಾ?
