ಗಾಳ ಹಾಕಿ ಮೀನು ಹಿಡಿದಂತೆ ಪಕ್ಷಿಗಳ ಮುಂದೆ ಮಾಂಸದ ತುಂಡು ಎಸೆದು ಚಾಣಾಕ್ಷತನದಿಂದ ಪಕ್ಷಿಯನ್ನು ಹಿಡಿದ ವೆಲ್ ಮೀನು! ನೋಡಿ ಈ Video!

ನಾವು ಮನುಷ್ಯರು ಮಾತನಾಡುವಾಗ ಅನೇಕ ಸಂಧರ್ಭಗಳಲ್ಲಿ ಪ್ರಾಣಿಗಳಿಗೆ ಪಾಪ ಬುದ್ಧಿ ಕಡಿಮೆ, ಅಮಾಯಕ ಪ್ರಾಣಿಗಳು ಅವು ಎಂದು ಕರುಣೆ ಯನ್ನು ತೋರಿಸ್ತೇವೆ. ಆದರೆ ನಾವು ಹೇಳೋ ಮಾತು ನಿಜಾನಾ? ನಿಜಕ್ಕೂ ಪ್ರಾಣಿಗಳಿಗೆ ಬುದ್ದಿ ಇಲ್ಲವೇ? ಅನ್ನೋದಾದ್ರೆ ಕೆಲವೊಂದು ವಿಷಯಗಳಲ್ಲಿ ಹೌದು ಪ್ರಾಣಿಗಳಿಗೆ ನಿಜಕ್ಕೂ ಬುದ್ಧಿ ಕಡಿಮೆ ಅಂತಾನೇ ಹೇಳಬಹುದು. ಹಾಗಿಲ್ಲದೇ ಇದ್ದಿದ್ದರೆ ಅವನ್ನು ಮನುಷ್ಯ ಪಳಗಿಸಿ ತಾನು ಹೇಳಿದ ಹಾಗೆ ಕೇಳೋ ಹಾಗೇ ಮಾಡೋದು ಕಷ್ಟವೇ ಆಗಿರ್ತಿತ್ತು ಅಲ್ವಾ? ಹಾಗಂದ ಮಾತ್ರಕ್ಕೆ ಅವು ಸಂಪೂರ್ಣವಾಗಿ ಬುದ್ಧಿ ಇಲ್ಲದೇ ಇರೋ ಜೀವಿಗಳಂತೂ ಅಲ್ಲವೇ ಅಲ್ಲ ಎಂದು ಕೂಡಾ ಬಹಳ ಸ್ಪಷ್ಟವಾಗಿ, ಯಾವುದೇ ಅನುಮಾನ ಕೂಡಾ ಇಲ್ಲದೇ ಹೇಳಬಹುದು.

ಈಗ ಸಾಮಾನ್ಯವಾಗಿಯೇ ನೋಡಿ ನಮ್ಮ ಮನೆಗಳಲ್ಲಿ ನಾವು ಸಾಕಿರೋ ಪ್ರಾಣಿಗಳಿಗೆ ನಾವು ಪ್ರತ್ಯೇಕವಾಗಿ ಪಾಠವನ್ನು ಮಾಡದೇ ಹೋದರೂ ಕೂಡಾ ಅವು ನಮ್ಮ ದೈನಂದಿನ ಚಟುವಟಿಕೆಗಳನ್ನು ಗಮನಿಸಿ ತಮಗೆ ತಾವೇ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಂಡು, ರೂಢಿ ಮಾಡಿಕೊಂಡು ಬದುಕುವುದನ್ನು ನಾವು ನೋಡಿದ್ದೇವೆ. ಅವುಗಳಿಗೆ ಬುದ್ದಿ ಇರುವುದರಿಂದಲೇ ತಾನೇ ಅವು ಯಾರ ಸಹಾಯ ಕೂಡಾ ಯಾಚಿಸದೇ ಸರಳ ವಿಷಯಗಳನ್ನು ಬಹಳ ಸಲೀಸಾಗಿ ಅಭ್ಯಾಸವನ್ನು ಮಾಡಿಕೊಂಡಿರುವುದು. ಹೀಗೆ ಬೇರೆ ಬೇರೆ ಪ್ರಾಣಿಗಳು ಕೂಡಾ ತಮ್ಮ ಸುತ್ತ ಮುತ್ತ ನಡೆಯುವ ಚಟುವಟಿಕೆಗಳನ್ನು ಗಮನಿಸಿ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಂಡಿರುತ್ತವೆ.

ಅದರಲ್ಲೂ ಕೆಲವು ಜೀವಿಗಳಂತೂ ಸಿಕ್ಕಾಪಟ್ಟೆ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿದರೆ ಅದನ್ನು ನಾವು ನೋಡಿದರೆ,ಅಬ್ಬಾ!!! ಏನಿದು ನಿಜಾನಾ? ಅಂತ ಬೆರಗಾಗುವುದು ಮಾತ್ರ ಖಂಡಿತ. ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ‌. ಇದರಲ್ಲಿ ನಮಗೆ ಒಂದು ಕಿಲ್ಲರ್ ವೇಲ್ ಹಕ್ಕಿಗಳನ್ನು ಬೇಟೆ ಆಡೋದಿಕ್ಕೆ ಯಾವ ರೀತಿ ಜಾಲವನ್ನು ಹೆಣೆದು, ಆಸೆ ತೋರಿಸಿ , ತನ್ನ ಬೇಟೆಯನ್ನು ಮಾಡುತ್ತೆ ಅನ್ನೋದನ್ನು ನೋಡಿದಾಗ ಒಂದು ಕ್ಷಣ ಆ ವೇಲ್ ನ ಚಾಣಾಕ್ಷತನಕ್ಕೆ ವಾರೆವ್ಹಾ ಅನ್ನಲೇಬೇಕು ಅನಿಸದೇ ಇರಲಾರದು.

ವೈರಲ್ ಆಗಿರೋ ವೀಡಿಯೋದಲ್ಲಿ ಯಾವುದೋ ಒಂದು ವೇಲ್ ಗಳ ಸಂಗ್ರಹಾಲಯದಲ್ಲಿ ಇರುವ ಕಿಲ್ಲರ್ ವೇಲ್ ತೊಟ್ಟಿಯಂತಿರುವ ನಿರ್ಮಾಣದ ಅಂಚಿನಲ್ಲಿ ಕೆಲವು ಹಕ್ಕಿಗಳು ಕುಳಿತಿರುವುದನ್ನು ನೋಡಿ ಅಮಾಯಕನಂತೆ ಅಲ್ಲಿಗೆ ಬಂದಿದೆ. ತನ್ನ ಬಾಯಿಂದ ಮಾಂಸದ ತುಂಡನ್ನು ಹೊರ ತೆಗೆದು ಅವುಗಳ ಮುಂದೆ ಉಗುಳಿದೆ. ಮೀನಿಗೆ ಗಾಳ ಹಾಕಿದಂತೆ, ಈ ಬೃಹತ್ ಮೀನು ಹಕ್ಕಿಗಳಿಗೆ ಮಾಂಸದ ತುಂಡು ಹಾಕಿದೆ. ಹಕ್ಕಿಗಳು ಕೆಲ ಕಾಲ ಅದನ್ನು ನೋಡಿ ಸುಮ್ಮನಾಗಿವೆಯೇ ಹೊರತು ಯಾವುದೂ ಆ ಮಾಂಸದ ತುಂಡಿನ ಕಡೆ ಹೋಗಿಲ್ಲ. ಆದರೆ ಒಂದು ಪಾ ಪದ ಹಕ್ಕಿ ಅದರ ಕಡೆಗೆ ಆಸೆಯಿಂದ ಬಂದ ಕೂಡಲೇ ವೇಲ್ ಅದನ್ನು ಹಿಡಿದು ನೀರೊಳಗೆ ಹೋಗಿದೆ.

ವಿಡಿಯೋ ನೋಡಿ

ಅಕ್ಟೋಬರ್ ಮೂರರಂದು ಶೇರ್ ಆದ ಈ ವೀಡಿಯೋ ಈಗಾಗಲೇ ನಲ್ವತ್ತು ಲಕ್ಷ ಮೀರಿದ ವೀಕ್ಷಣೆ ಪಡೆದಿದ್ದು, ಹನ್ನೆರಡು ಸಾವಿರ ದಾಟಿದ ಲೈಕ್ಸ್ ಪಡೆದಿದೆ. ವೀಡಿಯೋ ನೋಡಿದವರು ವೇಲ್ ನ ಬುದ್ದಿಮತ್ತೆಗೆ ಅಪಾರವಾದ ಮೆಚ್ಚುಗೆ ಸೂಚಿಸಿದರೆ, ಕೆಲವರು ಇವು ಬೇರೆ ಮೀನುಗಳಿಗಿಂತ ಬಹಳ ಚಾಲಾಕಿ ಎಂದಿದ್ದಾರೆ. ಮತ್ತೆ ಕೆಲವರು ವೇಲ್ ನ ಬಲೆಗೆ ಬಿದ್ದ ಹಕ್ಕಿಯ ಬಗ್ಗೆ ಅಯ್ಯೋ ಪಾಪ ಎಂದಿದ್ದಾರೆ.