ರಾತ್ರಿ ಮಲಗುವ ಮುಂಚೆ ತಪ್ಪದೆ ತಿನ್ನಿ ಲವಂಗ; ಒಂದಲ್ಲ ಅನೇಕ ಸಮಸ್ಯೆಗಳಿಗೆ ಸಿಗುವುದು ಪರಿಹಾರ!

ಆಯುರ್ವೇದದಲ್ಲಿ ಲವಂಗ ಈ ಮಸಾಲೆ ಪದಾರ್ಥಕ್ಕೆ ತುಂಬಾ ಮಹತ್ವವಿದೆ. ಇದರ ತೈಲವನ್ನು ಪ್ರಾಚೀನ ಕಾಲದಿಂದಲೂ ಗಾಯಗಳಿಗಾಗಿ ಆಂಟಿಸೆಪ್ಟಿಕ್ ರೀತಿಯಲ್ಲಿ ಉಪಯೋಗವನ್ನು ಮಾಡುತ್ತಾರೆ. ಇನ್ನು ಆಹಾರದ ವಿಷಯಕ್ಕೆ ಬಂದಾಗ ಇದರ ಕೆಲಸ ಬಹಳಷ್ಟಿದೆ. ಆಹಾರದಲ್ಲಿ ಇದನ್ನು ಉಪಯೋಗಿಸುವುದರಿಂದ ಆಹಾರಕ್ಕೆ ಒಂದು ವಿಶೇಷ ರುಚಿ ಪ್ರಾಪ್ತವಾಗುತ್ತದೆ.

ಲವಂಗವನ್ನು ಆಹಾರದಲ್ಲಿ ಅಥವಾ ಹಾಗೆಯೇ ಉಪಯೋಗಿಸುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳು ಆಗುತ್ತವೆ. ಲವಂಗ ದಲ್ಲಿರುವ ಒಳ್ಳೆಯ ಗುಣಧರ್ಮಗಳು ಯಾವವು ನೋಡಿ.

ಲವಂಗ ದಲ್ಲಿ ಯುಜೆನಾಲ್ ಇರುತ್ತದೆ ಅದು ಸಾಯಿನಸ್ ಮತ್ತು ಹಲ್ಲು ನೋವಿಗೆ ಸಂಬಂಧಿಸಿದ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲವಂಗ ಬಿಸಿ ಪದಾರ್ಥ ವಾಗಿರುವುದರಿಂದ ಇದು ಶೀತ ಮತ್ತು ಚಳಿಗೆ ಪ್ರಯೋಜನಕಾರಿಯಾಗಿದೆ. ಮಲಗುವ ಮುನ್ನ ಒಂದು ಅಥವಾ ಎರಡು ಲವಂಗವನ್ನು ಇಲ್ಲವೆ ಲವಂಗದ ಎಣ್ಣೆಯನ್ನು ಸೇವಿಸುವುದರಿಂದ, ಹೊಟ್ಟೆ ತಲೆ ಗಂಟಲು ಮತ್ತು ಶರೀರದ ಯಾವುದೇ ಭಾಗದ ನೋವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ. ಲವಂಗದ ಸೇವನೆಯಿಂದ ಇನ್ನು ಯಾವ ಯಾವ ಲಾಭಗಳು ಆಗುತ್ತದೆ ಎಂಬುದನ್ನು ಇಲ್ಲಿ ನೋಡಿ.

ಹಲ್ಲು ನೋವು:- ಹಲ್ಲು ನೋವಿನ ಶಮನಕ್ಕಾಗಿ ಲವಂಗವನ್ನು ಉಪಯೋಗಿಸುವುದು ತುಂಬಾ ಲಾಭದಾಯಕವಾಗಿದೆ. ಟೂತ್ಪೇಸ್ಟ್ ಗಳಲ್ಲಿ ಹೆಚ್ಚಾಗಿ ಲವಂಗವನ್ನು ಇದೇ ಕಾರಣಕ್ಕಾಗಿ ಉಪಯೋಗಿಸುತ್ತಾರೆ. ಹಲ್ಲು ನೋವಿದ್ದಾಗ ಲವಂಗವನ್ನು ಬಾಯಿಯಲ್ಲಿ ಹಿಡಿಯುವುದರಿಂದ ಹಲ್ಲು ನೋವು ಶಮನವಾಗುತ್ತದೆ. ಈ ನೋವಿನಿಂದ ಒಸಡುಗಳು ಊದಿಕೊಂಡಿದ್ದರೆ ಲವಂಗದ ತೈಲದಿಂದ ಮೆತ್ತಗೆ ಮಸಾಜ್ ಮಾಡಿದಾಗ ವಸಡುಗಳ ನೋವು ಶಮನವಾಗುವುದು.

ಕೆಮ್ಮು:- ಕೆಮ್ಮು ಮತ್ತು ಬಾಯಿಯ ದುರ್ಗಂಧಕ್ಕೆ ಲವಂಗವು ರಾಮಬಾಣ ಔಷಧಿಯಾಗಿದೆ. ನಿಯಮಿತವಾಗಿ ಲವಂಗದ ಉಪಯೋಗ ಮಾಡುವುದರಿಂದ ಕೆಮ್ಮು ಮತ್ತು ದುರ್ಗಂಧ ದೂರವಾಗುವುದು. ಲವಂಗವನ್ನು ಊಟದಲ್ಲಿ ಅಥವಾ ಸೋಪಿನ ಜೊತೆಗೂ ತಿನ್ನಬಹುದು.

ತಲೆನೋವು:- ಹೊಟ್ಟೆ ನೋವಿನ ವ್ಯತಿರಿಕ್ತವಾಗಿ ತಲೆನೋವನ್ನು ಕಡಿಮೆ ಮಾಡಲು ಸಹಿತ ಲವಂಗದ ಉಪಯೋಗವಾಗುವುದು. ತಲೆನೋವನ್ನು ಕಡಿಮೆ ಕಡಿಮೆಮಾಡಿಕೊಳ್ಳಲು ಪೆನ್ ಕಿಲ್ಲರ್ ಔಷಧೀಯ ಬದಲಾಗಿ ಎರಡು ಲವಂಗಗಳನ್ನು ಉಗುರುಬೆಚ್ಚಗಿನ ನೀರಿನ ಜೊತೆಗೆ ತೆಗೆದುಕೊಂಡರೆ ಸ್ವಲ್ಪ ಸಮಯದಲ್ಲಿ ತಲೆನೋವಿನಿಂದ ಮುಕ್ತಿ ಸಿಗುವುದು.

ಗಂಟಲು ಕೆರೆತ:– ವಾತಾವರಣದಲ್ಲಿಯ ಬದಲಾವಣೆಯಿಂದಾಗಿ ಅಥವಾ ಚಳಿಯಿಂದಾಗಿ ಮತ್ತು ಎಣ್ಣೆಯ ಆಹಾರ ಪದಾರ್ಥಗಳ ಸೇವನೆಯಿಂದ ಗಂಟಲಿನಲ್ಲಿ ಅವಾಗವಾಗ ಕೆರೆತ ಶುರುವಾಗುವುದು. ಆಗ ಲವಂಗವನ್ನು ಬಾಯಿಯಲ್ಲಿ ಹಿಡಿಯುವುದರಿಂದ ಗಂಟಲು ಕೆರೆತ ಅಥವಾ ಗಂಟಲು ನೋವಿನಿಂದ ಮುಕ್ತಿ ಸಿಗುವುದು.

ಮೊಡವೆಗಳಿಂದ ಮುಕ್ತಿ:- ಮುಖದ ಮೇಲೆ ಕಂಡುಬರುವ ಮೊಡವೆಗಳು, ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಗಳ ನಿರ್ಮೂಲನೆಗೆ ಲವಂಗದ ಉಪಯೋಗವನ್ನು ಮಾಡಲು ಬರುತ್ತದೆ. ಇದರ ಸಲುವಾಗಿ ನೀವು ನಿಮ್ಮ ತ್ವಚೆಗೆ ಅನುಗುಣವಾಗಿ ಉಪಯೋಗಿಸಿ ಕೊಳ್ಳುತ್ತಿರುವ ಫೇಸ್ ಪ್ಯಾಕ್ ನಲ್ಲಿ ಎರಡು ಹನಿ ಲವಂಗದ ಎಣ್ಣೆಯನ್ನು ಮಿಶ್ರಣಮಾಡಿ ವಾರದಲ್ಲಿ ಎರಡು ಸಲ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಮುಖದ ಮೇಲಿನ ಮೊಡವೆಗಳು ದೂರಾಗುವವು.