ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ‘ಇಂತಹ’ ಮಾರಕ ಕಾಯಿಲೆಗಳಿಂದಲೂ ಆಗಬಹುದು ಬಚಾವ್!
ಆಯುರ್ವೇದದಲ್ಲಿ ಮಸಾಲೆಗಳಿಗೆ ಅತ್ಯಮೂಲ್ಯವಾದ ಸ್ಥಾನವಿದೆ. ಪ್ರತಿಯೊಂದು ಮಸಾಲೆ ಪದಾರ್ಥಗಳ ಯೋಗ್ಯ ಉಪಯೋಗ ಮನುಷ್ಯನ ಜೀವಕ್ಕೆ ಸಂಜೀವಿನಿಯ ಕೆಲಸ ಮಾಡುತ್ತದೆ. ನಮ್ಮ ಆಹಾರದಲ್ಲಿ ಯಾವುದೇ ರೂಪದಲ್ಲಿ ಬೆಳ್ಳುಳ್ಳಿಯ ಉಪಯೋಗ ಮಾಡಿಯೇ ಮಾಡುತ್ತೇವೆ. ಇದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಆಗುತ್ತವೆ. ಇನ್ನು ಈ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ದಿನಾಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಕೆಲವೊಂದು ಲಾಭಗಳನ್ನು ನಾವಿಲ್ಲಿ ನಮೂದಿಸಿದ್ದೇವೆ ನೋಡಿ ಅವು ಯಾವವು ಅಂತ.
- ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ತಿನ್ನುವುದರಿಂದ ಪಚನ ಕ್ರಿಯೆಯಲ್ಲಿ ಸುಧಾರಣೆಯಾಗುವುದರ ಜೊತೆಗೆ ಹಸಿವು ಸಹಿತ ಚೆನ್ನಾಗಿ ಹೆಚ್ಚಿಸುತ್ತದೆ.
- ಶೀತ ಮತ್ತು ಕೆಮ್ಮಿನಿಂದ ಮುಕ್ತಿ:- ಶೀತ, ಕೆಮ್ಮು, ದಮ್ಮು, ಮತ್ತು ನಿಮೋನಿಯಾ ಬ್ರಾಂಕೈಟಿಸ್ ದಂತಹ ಉಪಚಾರಗಳಲ್ಲಿ ಬೆಳ್ಳುಳ್ಳಿಯ ಸೇವನೆ ತುಂಬಾ ಲಾಭದಾಯಕವಾಗುತ್ತದೆ.
- ಹಾಯ್ ಬಿಪಿಯಿಂದ ಮುಕ್ತಿ:- ಖಾಲಿ ಹೊಟ್ಟೆಯಲ್ಲಿ ಒಂದೆರಡು ಬೆಳ್ಳುಳ್ಳಿಯ ಹೆಸರುಗಳನ್ನು ತಿನ್ನುವುದರಿಂದ ಹಾಯ್ ಬಿಪಿಯಿಂದ ಆರಾಮ ದೊರೆಯುವುದು. ವಾಸ್ತವಿಕವಾಗಿ ಬೆಳ್ಳುಳ್ಳಿ ಇದು ದೇಹದಲ್ಲಿಯ ರಕ್ತಪರಿಚಲನೆಯ ಕ್ರಿಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹಾಯ್ ಬಿಪಿಯಿಂದ ಬಳಲುವವರಿಗೆ ಬೆಳ್ಳುಳ್ಳಿ ತಿನ್ನುವ ಸಲಹೆಯನ್ನು ನೀಡಲಾಗುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು:– ಬೆಳ್ಳುಳ್ಳಿಯಲ್ಲಿ ಆಲಿಸಿನ್ ಹೆಸರಿನ ಪದಾರ್ಥವು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಶೀತ ಮತ್ತು ಕೆಮ್ಮು ಇವೆರಡನ್ನು ನಿಯಂತ್ರಣದಲ್ಲಿಡುತ್ತದೆ. ರೋಗನಿರೋಧಕ ಶಕ್ತಿಯು ಚೆನ್ನಾಗಿದ್ದರೆ ಅನೇಕ ರೋಗಗಳಿಂದ ದೂರವಿರಲು ಸಾಧ್ಯವಿದೆ.
- ಉದರ ಸಂಬಂಧಿತ ರೋಗಗಳ ಪ್ರತಿಬಂಧ:– ಮಲಬದ್ಧತೆ ಮತ್ತು ಅತಿಸಾರದಂತಹ ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಲು ಬೆಳ್ಳುಳ್ಳಿ ಉಪಯುಕ್ತವಾದ ಔಷಧಿಯಾಗಿದೆ. ಕುದಿಯುವ ನೀರಿನಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿದ ನಂತರ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ. ಇದರಿಂದ ಅತಿಸಾರ ಮತ್ತು ಮಲಬದ್ಧತೆಯಿಂದ ಮುಕ್ತಿ ಸಿಗುವುದು.
6) ಹೃದಯವು ನಿರೋಗಿಯಾಗಿರುವುದು:- ಬೆಳ್ಳುಳ್ಳಿಯು ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳನ್ನು ದೂರ ಮಾಡುತ್ತದೆ. ಯಾರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುತ್ತಾರೆ ಅವರ ಪಚನಕ್ರಿಯೆ ತುಂಬಾ ಚೆನ್ನಾಗಿರುತ್ತದೆ. ಇದರಿಂದ ಹೊಟ್ಟೆ ವಿಕಾರಗಳು ದೂರವಾಗುತ್ತವೆ. ತೂಕ ಕಡಿಮೆ ಮಾಡಿಕೊಳ್ಳಲು ಸಹಿತ ಬೆಳ್ಳುಳ್ಳಿಯ ಉಪಯೋಗವಾಗುತ್ತದೆ. ಬೆಳ್ಳುಳ್ಳಿಯ ಸೇವನೆಯಿಂದ ರಕ್ತವು ತಿಳಿಯಾಗಲು ಸಹಾಯವಾಗುತ್ತದೆ. ಇದರಿಂದ ಹೃದಯವಿಕಾರದ ಅಪಾಯವು ದೂರವಾಗುತ್ತದೆ.
7) ಎಲುಬುಗಳಿಗೆ ಲಾಭದಾಯಕ:- ನಮ್ಮ ಎಲಬುಗಳು ಸದೃಢವಾಗಿರಬೇಕು ಎಂದು ಎಲ್ಲರಿಗೂ ಎನಿಸುತ್ತದೆ. ಅದಕ್ಕಾಗಿ ದಿನಾಲು ಒಂದೆರಡು ಬೆಳ್ಳುಳ್ಳಿಯ ಎಸಳುಗಳನ್ನು ಹಾಗೆಯೇ ತಿನ್ನಬೇಕು. ಈ ರೀತಿಯ ಸೇವನೆಯಿಂದ ಎಲುಬುಗಳಿಗೆ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್ ನಂತಹ ಗಂಭೀರ ರೋಗಗಳಿಂದ ಮುಕ್ತವಾಗಲು ಸಾಧ್ಯ ವಾಗುತ್ತದೆ. ಇದರ ಹೊರತಾಗಿ ಬೆಳ್ಳುಳ್ಳಿಯಲ್ಲಿ ಆಂಟಿ ಇನ್ಫ್ಲೇಮೆಂಟರಿ ಗುಣ ಧರ್ಮವಿದೆ. ಹಲ್ಲು ನೋವಿಗೆ ಬೆಳ್ಳುಳ್ಳಿಯನ್ನು ಉಪಯೋಗಿಸಬಹುದು. ಹಲ್ಲುನೋವು ಆಗುವಾಗ ಬೆಳ್ಳುಳ್ಳಿಯನ್ನು ಬಿಸಿ ಮಾಡಿ ನೋವಾಗುತ್ತಿರುವ ಸ್ಥಳದಲ್ಲಿ ಇಟ್ಟಾಗ ಹಲ್ಲು ನೋವು ಕಡಿಮೆಯಾಗುವುದು.
ಮಿತ್ರರೇ, ಬೆಳ್ಳುಳ್ಳಿಗೆ ಸಂಬಂಧಿಸಿದ ಮೇಲಿನ ಎಲ್ಲ ಲಾಭದಾಯಕ ಗುಣಗಳನ್ನು ವಿವಿಧ ಮಾಧ್ಯಮಗಳಲ್ಲಿಯ ಮಾಹಿತಿಯನ್ನು ಸಂಗ್ರಹಿಸಿ ಬರೆಯಲಾಗಿದೆ. ಇವುಗಳನ್ನು ಪ್ರಯೋಗ ಮಾಡುವ ಮೊದಲು ಯಾವುದಕ್ಕೂ ಒಮ್ಮೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.