OMG! ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಬುಲೆಟ್ ಟ್ರೇನ್ ಮಂಗಮಾಯ! ಎದೆ ಡವಡವ ಎನ್ನುವ Viral Video ಒಮ್ಮೆ ನೋಡಿ!

ಕಣ್ಣುಗಳು ಮುಚ್ಚಿ ತೆರೆಯುವಷ್ಟರಲ್ಲಿಯೇ ಬುಲೆಟ್ ಟ್ರೈನ್ ಮಂಗಮಾಯ! ಎದೆ ಸಹಿತ ಡವಡವ ಎನ್ನುವ ಅದ್ಭುತ ವಿಡಿಯೋ!

ಸೋಶಿಯಲ್ ಮೀಡಿಯಾದಲ್ಲಿ ಅದ್ಭುತ ಹಾಗೂ ಆಶ್ಚರ್ಯದಿಂದ ಕೂಡಿದ ವಿಡಿಯೋ ಸದ್ಯ ಸಖತ್ತಾಗಿ ವೈರಲ್ ಆಗುತ್ತಿದೆ. ಹಾಗೆ ದಿನಂಪ್ರತಿ ಅನೇಕ ವಿಡಿಯೋಗಳು ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಲೇ ಇರುತ್ತವೆ. ಆದರೆ ಈ ವಿಡಿಯೋ ನಿಜಕ್ಕೂ ಭಯ, ಅದ್ಭುತ, ಮತ್ತು ಆಶ್ಚರ್ಯದಿಂದ ಕೂಡಿದೆ. ಇದು ನೋಡಿದರೆ ಹೃದಯವು ದಡದಡ ಎನ್ನದೇ ಇರಲಾರದು.

ಭಾರತದ ಮೊಟ್ಟಮೊದಲ ಬುಲೆಟ್ ಟ್ರೈನ್ ಪುಣೆ-ಮುಂಬೈ ಮಧ್ಯದಲ್ಲಿ ಆಗುವುದಿತ್ತು. ಆದರೆ ಸರಕಾರಗಳು ಬದಲಾಗುತ್ತಿದ್ದಂತೆ ಈ ಬುಲೆಟ್ ಟ್ರೈನಿನ ಮಾರ್ಗವನ್ನು ಸಹಿತ ಬದಲಾಯಿಸಿ ಈಗ ಮುಂಬೈ ಮತ್ತು ಅಹಮದಾಬಾದ್ ನಡುವೆ ಮಾಡುವ ಸುದ್ದಿಗಳು ಬಂದವು. ಈ ವಾದವು ಸದ್ಯಕ್ಕೆ ರಾಜಕೀಯ ಪಟಲದ ಮೇಲೆ ನಡೆದಿದೆ, ಇರಲಿ. ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಮಾತ್ರ ಬುಲೆಟ್ ಟ್ರೈನಿಗೆ ಸಂಬಂಧಪಟ್ಟದ್ದಾಗಿದೆ.

ವ್ಯಕ್ತಿ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿಯೇ ಸ್ಟೇಷನ್ ಒಂದರಿಂದ ಬುಲೆಟ್ ಟ್ರೈನ್ ಹಾಯ್ದು ಹೋದ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಬುಲೆಟ್ ಟ್ರೈನಿನ ಸ್ಪೀಡ್ ಏನಿರುತ್ತೆ ಎಂಬುದನ್ನು ವಿಡಿಯೋದಿಂದ ನಮಗೆ ಗೊತ್ತಾಗುತ್ತೆ. ಉದ್ದನೆಯ ಈ ಬುಲೆಟ್ ಟ್ರೈನ್ ನೋಡುನೋಡುವಷ್ಟರಲ್ಲಿ ಮಂಗಮಾಯವಾಗಿದೆ. ಅಷ್ಟೇ ಅಲ್ಲ ಸುತ್ತಮುತ್ತಲಿನ ಪರಿಸರವು ಸಹಿತ ನಡುಗಿ ಹೋಗಿದೆ. ಸರಿಯಾಗಿ ಸೂಕ್ಷ್ಮವಾಗಿ ನಿರೀಕ್ಷಿಸಿ ನೋಡಿದರೆ, 2 ರಿಂದ ಬರೀ 3 ಸೆಕೆಂಡುಗಳಲ್ಲಿಯೇ ಬುಲೆಟ್ ಟ್ರೈನ್ ಅಗೋಚರವಾಗಿಬಿಟ್ಟಿದೆ.

ಈ ವಿಡಿಯೋವನ್ನು ಅಕ್ಟೋಬರ್ 2 ರಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಎಲ್ಲಿಯದು ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಆದರೆ ಸದ್ಯ ಈ ವಿಡಿಯೋ ಮಾತ್ರ ತುಂಬಾ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

ಭಾರತದಲ್ಲಿಯೂ ಸಹ ಬುಲೆಟ್ ಟ್ರೈನನ್ನು ಓಡಿಸಬೇಕೆಂದು ಪ್ರಧಾನಮಂತ್ರಿಯವರ ಕನಸಾಗಿದೆ. ಇದಕ್ಕಾಗಿ ಮುಂಬಯಿ-ಅಹಮದಾಬಾದ್ ಮಾರ್ಗವು ನಿಶ್ಚಿತವಾಗಿದೆ. ಇದಕ್ಕಾಗಿ ಸರ್ಕಾರ ಟೆಂಡರ್ ಸಹ ಬಿಡುಗಡೆ ಮಾಡಿದೆ. ಈ ಒಂದು ದೊಡ್ಡ ಪ್ರೊಜೆಕ್ಟ್ ಸಲುವಾಗಿ ಹಲವಾರು ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬರುತ್ತಿವೆ. ಇದರಲ್ಲಿ ರೈತರ ಜಮೀನು ಹೋಗುವುದರಿಂದ ರೈತರ ಜೊತೆಗೆ ರಾಜಕಾರಣಿಗಳು ಸಹ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಮೋದಿ ಸರಕಾರವು ತಾನು ಕಂಡ ಈ ಕನಸನ್ನು ಯಾವ ರೀತಿ ಪೂರ್ಣ ಮಾಡುತ್ತದೋ ಕಾದು ನೋಡಬೇಕಾಗಿದೆ.