‘ಛೈಯಾ‌ ಛೈಯಾ’ ಹಾಡಿಗೆ ಭರ್ಜರಿ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಾಶ್ರೀ ವರ್ಮಾ; ಡಾನ್ಸ್ ನೋಡಿ ಫ್ಯಾನ್ಸ್ ಫುಲ್ ಖುಷ್! ನೋಡಿ ಈ Video!

ಜನಪ್ರಿಯ ಯೂಟ್ಯೂಬರ್ ಹಾಗೂ ಡ್ಯಾನ್ಸರ್ ಕೂಡಾ ಆಗಿರುವ ಧನಾಶ್ರೀ ವರ್ಮಾ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿದ್ದಾರೆ. ಭಾರತೀಯ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಅವರ ಭಾವೀ ಪತ್ನಿ ಆಗಿರುವ ಧನಾಶ್ರೀ ವರ್ಮಾ ಅವರ ಡಾನ್ಸ್ ವೀಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಆದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿವೆ. ಧನಾಶ್ರೀ ವರ್ಮಾ ವೃತ್ತಿಯಲ್ಲಿ ಒಬ್ಬ ಡಾಕ್ಟರ್ ಆಗಿದ್ದರೂ, ಕೊರಿಯೋಗ್ರಫರ್ ಆಗಿ ಆಕೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಧನಾಶ್ರೀ ವರ್ಮಾ ಅವರ ಹೊಸ ವೀಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ.‌

ಧನಾಶ್ರೀ ವರ್ಮಾ ಈ ಬಾರಿ ಡಾನ್ಸ್ ಮಾಡಲು ಆರಿಸಿಕೊಂಡ ಹಾಡು ಕೂಡಾ ದಶಕಗಳ ಹಿಂದೆ ದೇಶದಾದ್ಯಂತ ಒಂದು ಸಂಚಲನವನ್ನು ಹುಟ್ಟಿಸಿದಂತಹ ಹಾಡು. ಆ ಹಾಡು ದಿಲ್ ಸೇ ಸಿನಿಮಾ ಚಲ್ ಚೆಯ್ಯಾ ಚೆಯ್ಯಾ ಹಾಡು. ಅಂದು ಆ ಸಿನಿಮಾದಲ್ಲಿ ಚಲಿಸುತ್ತಿರುವ ರೈಲಿನ ಮೇಲೆ ಬಾಲಿವುಡ್ ನ ಬಾದ್ ಶಾ ಕಿಂಗ್ ಖಾನ್ ಶಾರೂಖ್ ಖಾನ್ ಮತ್ತು ನಟಿ ಮಲೈಕಾ ಅರೋರಾ ಖಾನ್ ಹಾಕಿದ ಸ್ಟೆಟ್ ಗಳು ಹಾಗೂ ಹಾಡು ನೋಡುಗರನ್ನು ಹಾಗೂ ಕೇಳುಗರನ್ನು ಕೂಡಾ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು ಎಂದೇ ಹೇಳಬೇಕು.‌

ಇಂದು ಆ ಹಾಡು ಹಲವರಿಗೆ ಪರಿಚಯ ಇಲ್ಲದೇ ಇರಬಹುದು ಆದರೆ ಈಗ ಧನಾಶ್ರೀ ಅವರು ಅದೇ ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಚೆಯ್ಯಾ ಚೆಯ್ಯಾ ಹಾಡಿಗೆ ಧನಾಶ್ರೀ ಹಾಕಿರುವ ಸೂಪರ್ ಡೂಪರ್ ಸ್ಟೆಪ್ ಗಳು ಡಾನ್ಸ್ ಪ್ರಿಯರನ್ನು ಹುಚ್ಚೆದ್ದು ಕುಣಿಸುವಂತೆ ಮಾಡುತ್ತಿದೆ‌. ಅವರ ಡ್ಯಾನ್ಸ್ ಮೂವ್ ಗಳನ್ನು ನೋಡಿದ ನೆಟ್ಟಿಗರು ಧನಾಶ್ರೀ ಅವರ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ‌. ಮೆಚ್ಚುಗೆಯ ಮಳೆಯನ್ನು ಸೇರಿಸುತ್ತಾ ವೀಡಿಯೋವನ್ನು ಶೇರ್ ಮಾಡುತ್ತಾ ಸಾಗುತ್ತಿದ್ದಾರೆ .

ಧನಾಶ್ರೀ ಅವರ ಈ ಹೊಸ ವೀಡಿಯೋ ಈಗಾಗಲೇ ಹದಿನೈದು ಲಕ್ಷ ಮೀರಿದ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅವರ ಈ ಹಿಂದಿನ ವೀಡಿಯೋಗಳಂತೆ ಈ ಹೊಸ ವೀಡಿಯೋ ಕೂಡಾ ಬಹಳ ಬೇಗ ವೈರಲ್ ಆಗಿ ಸಂಚಲನವನ್ನು ಸೃಷ್ಟಿಸಿದೆ.
ಧನಾಶ್ರೀ ವರ್ಮಾ ಒಂದೊಂದು ವೀಡಿಯೋ ಕೂಡಾ ಇತ್ತೀಚಿನ ದಿನಗಳಲ್ಲಿ ಬೇರಾವ ಡಾನ್ಸರ್ ಗಳಿಗೂ ಸಿಗದಷ್ಟು ಮನ್ನಣೆ ಹಾಗೂ ಜನಪ್ರಿಯತೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಪಡೆದುಕೊಂಡು ಸಾಗುತ್ತಿದೆ. ಧನಾಶ್ರೀ ವರ್ಮಾ ಒಬ್ಬ ಕೊರಿಯೋಗ್ರಫರ್ ಹಾಗೂ ಡ್ಯಾನ್ಸರ್ ಆಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ.

ವಿಡಿಯೋ ನೋಡಿ….

ಧನಶ್ರೀ ವರ್ಮಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆಂದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ ಏಕೆಂದರೆ ಆಕೆಯು ನೃತ್ಯದೊಂದಿಗೆ ಈಗ ಒಂದು ದೊಡ್ಡ ಹೆಸರು ಹಾಗೂ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಧನಶ್ರೀ ವರ್ಮಾ ಬಹುಮುಖ ಪ್ರತಿಭಾವಂತೆಯಾಗಿದ್ದು, ಅವರೊಬ್ಬ ಯು-ಟ್ಯೂಬರ್ ಆಗಿದ್ದು, ಆಗಾಗ್ಗೆ ನೃತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಕೂಡಾ ನಡೆಸುತ್ತಾರೆ. ಇತ್ತೀಚೆಗೆ ಅವರು ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಆ ಫೋಟೋಗಳು ಕೂಡಸ, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದವು.