ಈ ಚಿತ್ರದಲ್ಲಿ ಅಡಗಿರುವ ಹುಡುಗಿಯನ್ನು ಶೋಧಿಸುವ ಚಾಲೆಂಜ್ ಸ್ವೀಕರಿಸುತ್ತೀರಾ? ಫೋಟೋ ಜೂಮ್ ಮಾಡಿ ನೋಡಬಹುದು.

ವ್ಯಕ್ತಿಯ ಮನಸ್ಸು ಚಿಂತೆ, ಖಿನ್ನತೆಗೆ ಅಥವಾ ನಿರುತ್ಸಾಹಕ್ಕೆ ಒಳಗಾದಾಗ ಮನುಷ್ಯ ಆಟಗಳ ಕಡೆಗೆ ಗಮನ ಕೊಡಬೇಕು. ಆಟಗಳಿಂದ ಮನುಷ್ಯನಿಗೆ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಅನೇಕ ರೀತಿಯ ಲಾಭಗಳಾಗುತ್ತವೆ. ಆಟಗಳು ಮನುಷ್ಯನಿಗೆ ಮಾನಸಿಕ ದೌರ್ಬಲ್ಯದಿಂದ ಹೊರಗೆ ತರಲು ಸಹಾಯ ಮಾಡುತ್ತದೆ.

ಯಾವುದೇ ರೀತಿಯ ಆಟಗಳು ವ್ಯಕ್ತಿಗೆ ಮನೋರಂಜನೆಯನ್ನು ನೀಡುತ್ತವೆ. ಮನೋರಂಜನೆಯಿಂದ ಮನುಷ್ಯ ಚಿಂತೆಯಿಂದ ಮುಕ್ತನಾಗಲು ಸಹಾಯವಾಗುತ್ತದೆ. ಮಿತ್ರರೇ ಆಟಗಳಲ್ಲಿ ಅನೇಕ ಪ್ರಕಾರಗಳಿವೆ. ಇಲ್ಲಿ ನಿಮಗಾಗಿ ಒಂದು ಫೋಟೋ ಪಜಲ್ ಗೇಮ್ ಅನ್ನು ತಂದಿದ್ದೇವೆ. ಈ ಫೋಟೋನಲ್ಲಿ ಒಬ್ಬಳೇ ಒಬ್ಬಳು ಹುಡುಗಿ ಕುಳಿತಿದ್ದಾಳೆ. ಆ ಹುಡುಗಿಯನ್ನು ಶೋಧಿಸುವ ಕೆಲಸ ನಿಮಗೆ ಮಾಡಬೇಕಾಗಿದೆ.

ನಾವು ದಿನಾಲು ಅನೇಕ ಆಟಗಳನ್ನು, ಸುಡೊಕು ಅಥವಾ ಪದಬಂಧಗಳನ್ನು ವೃತ ಪತ್ರಗಳಲ್ಲಿ ಬೀಡಿಸುತ್ತಲೇ ಇರುತ್ತೆವೆ. ಇದರಿಂದ ನಮಗೆ ಅರಿಯದೆ ನಮ್ಮ ಮನಸ್ಸು ಏಕಾಗ್ರತೆಯಲ್ಲಿ ಲೀನವಾಗಿರುತ್ತದೆ. ಮತ್ತು ಅಂತಹ ಕಠಿಣವಾದ ಆಟಗಳನ್ನು ಪರಿಪೂರ್ಣವಾಗಿ ಬಿಡಿಸಿ ತೀರಬೇಕು ಎಂಬ ಛಲ ನಮ್ಮಲ್ಲಿ ಹುಟ್ಟುತ್ತದೆ. ಈಗ ಈ ಫೋಟೋ ಪಜಲ್ ಸಹಿತ ಇಂಥದೇ ಒಂದು ಟೈಮ್ ಪಾಸ್ ಆಟವಾಗಿದೆ. ಈ ಆಟವನ್ನು ಆಡಲು ನಿಮಗೆ ಬೇಕು ಸ್ವಲ್ಪ ಸಮಯ ಹಾಗೂ ನಿಮ್ಮ ಕಣ್ಣುಗಳು. ಕಣ್ಣುಗಳೆಂದರೆ ಬರೀ ಕಣ್ಣುಗಳಲ್ಲ ತೀಕ್ಷ್ಣವಾದ ಶೋಧಿಸುವ ಕಣ್ಣುಗಳು.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಶೇಷ ಫೋಟೋ ವೈರಲ್ ಆಗುತ್ತಿದೆ. ಇದೇ ಫೋಟೋವನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಈ ಸುಂದರವಾದ ನಿಸರ್ಗ ಚಿತ್ರದಲ್ಲಿ ಒಬ್ಬಳು ಹುಡುಗಿ ಅಡಗಿ ಕುಳಿತಿದ್ದಾಳೆ. ಅಂದರೆ ಅವಳು ಸಹಜವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದಕ್ಕಾಗಿ ಅವಳು ಎಲ್ಲಿದ್ದಾಳೆ ಎಂದು ಶೋಧಿಸಿ ಹೇಳುವ ಚಾಲೆಂಜ್ ನಿಮಗಿದೆ. ಇಲ್ಲಿಯವರೆಗೆ ಇದನ್ನು ಶೋಧಿಸುವುದು ತುಂಬಾ ಕಷ್ಟದ ಕೆಲಸವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಇದನ್ನು ಶೋಧಿಸುವ ಪ್ರಮಾಣವು ನೂರರಲ್ಲಿ ಬರೀ ಒಬ್ಬರು ಮಾತ್ರ.

ನೀವು ಸಹಿತ ಪ್ರಯತ್ನ ಮಾಡಿ. ಒಂದು ವೇಳೆ ನಿಮ್ಮ ಕಣ್ಣಿಗೆ ಹುಡುಗಿ ಎಲ್ಲಿದ್ದಾಳೆ ಎಂಬುದು ಕಾಣಿಸಲಿಲ್ಲ ವೆಂದರೆ, ಮರಳಿ ಯತ್ನವ ಮಾಡಿ ಆಗಲಾದರೂ ಕಾಣಬಹುದು.

ಮಿತ್ರರೇ ನಿಮ್ಮ ಕಣ್ಣುಗಳು ಈ ಚಿತ್ರದಲ್ಲಿ ಹುಡುಗಿಯನ್ನು ಶೋಧಿಸಿ ದಣಿದರೆ ನಿಮಗಾಗಿ ನಾವೇ ಉತ್ತರವನ್ನು ಹೇಳುತ್ತೇವೆ ನೋಡಿ.

ಫೋಟೋವನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದರೆ ಗೊತ್ತಾಗುತ್ತೆ. ಚಿತ್ರದಲ್ಲಿ ಗೇಟ್, ಗೋಡೆ, ಗೋಡೆ ಹಿಂಬದಿಗೆ ಗಿಡಮರಗಳು, ಕಲ್ಲು ಹೀಗೆ ಅನೇಕ ವಸ್ತುಗಳು ಕಂಡುಬರುತ್ತಿವೆ. ಆದರೆ ಸ್ವಲ್ಪ ಸಂಯಮದಿಂದ ಮತ್ತು ಸೂಕ್ಷ್ಮವಾಗಿ ಗಮನಿಸಿದಾಗ ಮರದ ಬುಡಕ್ಕೆ ಒಬ್ಬಳು ಹುಡುಗಿ ಮರದ ಕಾಂಡದ ಬಣ್ಣದ ಹಾಗೆಯೇ ವಸ್ತ್ರಗಳನ್ನು ಧರಿಸಿ ಕುಳಿತಿರುವುದು ಕಂಡುಬರುತ್ತದೆ, ನೋಡಿದ್ರಾ?

ಅಲ್ಲಿ ಕುಳಿತಿರುವ ಹುಡುಗಿಯ ವಸ್ತ್ರಗಳು ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡಿರುವ ವಸ್ತ್ರಗಳನ್ನು ಇರುವುದರಿಂದ ಸಹಜವಾಗಿ ಕಣ್ಣಿಗೆ ಕಾಣುವುದಿಲ್ಲ. ಆಕೆ ಧರಿಸಿದ ಬಟ್ಟೆಯ ಬಣ್ಣವು ಮತ್ತು ಸುತ್ತಮುತ್ತಲಿನ ಪರಿಸರದ ಬಣ್ಣವು ಒಂದೇ ರೀತಿಯಾಗಿ ಮ್ಯಾಚ್ ಆಗಿರುವುದರಿಂದಲೇ ಇದು ಪಜಲ್ ಬಿಡಿಸುವವರಿಗೆ ಒಂದು ಚಾಲೆಂಜ್ ಆಗಿದೆ