ರಾಮಾಯಣದ ಒಂದು ಎಪಿಸೋಡ್ ಗೆ ಖರ್ಚಾಗುವ ಹಣ ಎಷ್ಟು?& ದೂರದರ್ಶನವು ಆಗ ಗಳಿಸಿದ್ದೆಷ್ಟು?
ಕೊರೊನಾದ ಈ ಲಾಕ್ ಡಾವುನ್ ಸಂದರ್ಭದಲ್ಲಿ 80 ರ ದಶಕದ ಸುಪ್ರಸಿದ್ಧ ಧಾರಾವಾಹಿ ಮತ್ತು ಜನಮೆಚ್ಚುಗೆಗೆ ಪಾತ್ರವಾದ ಪೌರಾಣಿಕ ಕಥೆಯಾಧಾರಿಸಿದ ರಾಮಾಯಣ ಮತ್ತೊಮ್ಮೆ ಜನರ ಅಭಿಲಾಷೆಗೆ ಹಾಗೂ ಆಗಿನ ವಿವಿಧ ಸುಂದರ ಸವಿನೆನಪಿಗೆ ಕಾರಣವಾಗಿದೆ.
ರಾಮಾನಂದ ಸಾಗರ ರಚಿತ ಪೌರಾಣಿಕ ಕಥನ ಹೊಂದಿದ ರಾಮಾಯಣ 80 ರ ದಶಕದಲ್ಲಿ TRP ಯ ಅನೇಕ ದಾಖಲೆಗಳನ್ನು ನಾಶ ಮಾಡಿ ಹೊಸ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿತು.

ಇಂಥ ಅದ್ದೂರಿ ಬಜೆಟ್ ನಲ್ಲಿ ತಯಾರಾದ ರಾಮಾಯಣದ ಒಂದು ಭಾಗ ಅಥವಾ ಎಪಿಸೋಡ್ ತಯಾರಿಸಲು ಒಟ್ಟು 9 ಲಕ್ಷ ₹ ಗಳಷ್ಟು ಹಣ ಖರ್ಚಾಗುತ್ತಿತ್ತಂತೆ.
ಇನ್ನೂ ಸ್ವಾರಸ್ಯಕರ ವಿಷಯವೇನೆಂದರೆ BBC ರಿಪೋರ್ಟ್ ಪ್ರಕಾರ ಆ ವೇಳೆ 6.5 ಮಿಲಿಯನ್ ಜನ ಏಕಕಾಲಕ್ಕೆ ವೀಕ್ಷಿಸುವ tv ಸೀರಿಯಲ್ ಇದಾಗಿತ್ತಂತೆ.
ಇನ್ನು ಶೂಟಿಂಗ್ ಕಾಲಾವಧಿಯ ವಿಚಾರಕ್ಕೆ ಬಂದರೆ ರಾಮಾಯಣದ ಪೂರ್ಣ ಶೂಟ್ ಮಾಡಲು 550 ದಿನಗಳು ಹಿಡಿದಿದ್ದವು.

ಆ ಸಮಯದಲ್ಲಿ ರಾಮಾಣವು ದೂರದರ್ಶನಕ್ಕೆ ಬಂಗಾರದ ಮೊಟ್ಟೆಯನ್ನಿಡುವ ಕೋಳಿಯಾಗಿಯೇ ಪರಿಣಮಿಸಿತು.ಯಾಕೆಂದರೆ ದೂರದರ್ಶನಕ್ಕೆ ಒಂದು ಎಪಿಸೋಡ್ ಪ್ರಸಾರಣೆಯಿಂದ 40 ಲಕ್ಷ ₹ ಗಳ ವರೆಗೆ ಆದಾಯವಾಗುತ್ತಿತ್ತು.
ಇಂಥ ಮಹಾ ಧಾರಾವಾಹಿ ರಾಮಾಯಣವನ್ನು ಪೂರ್ಣಗೊಳಿಸಲು ಒಟ್ಟು 9 ಕೋಟಿ ₹ ಗಳು ವೆಚ್ಚವಾಯಿತು.