OMG! ಮರದ ಬೊಡ್ಡೆಯೊಳಗೆ ತಲೆ ಸಿಲುಕಿಸಿಕೊಂಡ ಹಸು! ಆಮೇಲೆ… ಮೈ ಝಲ್ ಎನಿಸುವ Video ಒಮ್ಮೆ ನೋಡಿ!
ಮನುಷ್ಯ ತನಗೆ ಯಾವುದರಿಂದ ತೊಂದರೆಯಾಗಬಹುದು ಎಂದು ನೋಡಿ ಊಹೆ ಮಾಡಬಲ್ಲ, ಅಲ್ಲದೇ ಯಾವುದಾದರೂ ಕಾರ್ಯ ಮಾಡುವಾಗ ಬಹಳ ಎಚ್ಚರಿಕೆಯಿಂದ ಕೂಡಾ ಮಾಡುವನು. ಆದರೆ ಅದರ ಹೊರತಾಗಿಯೂ ಕೂಡಾ ಕೆಲವೊಮ್ಮೆ ತೊಂದರೆಯಲ್ಲಿ ಸಿಲುಕಿಕೊಳ್ಳುವನು ಅದರಿಂದ ಪಾರಾಗಲು ಹರ ಸಾಹಸ ಪಡುವನು ಹಾಗೂ ಕೆಲವೊಮ್ಮೆ ಬೇರೆಯವರ ಸಹಾಯವನ್ನು ಯಾಚಿಸಿ ಸಿಲುಕಿರುವ ಸಂಕಷ್ಟದಿಂದ ಹೊರ ಬರುವ ಪ್ರಯತ್ನವನ್ನು ಮಾಡುವನು. ಆದರೆ ಇಂತಹ ತೊಂದರೆ ಅಥವಾ ಸಂಕಷ್ಟದಲ್ಲಿ ಮೂಗ ಜೀವಿಗಳು ಸಿಲುಕಿದರೆ ನಿಜಕ್ಕೂ ಅವುಗಳ ಪಾಡು ಹೇಳ ತೀರಲಾಗದು. ಆಗ ಅವುಗಳ ರಕ್ಷಣೆ ಎನ್ನುವುದು ಕೂಡಾ ಕೆಲವು ಸಂದರ್ಭಗಳಲ್ಲಿ ಸಾಧ್ಯವಾಗದೇ ಹೋಗಬಹುದು.
ಸಹಜವಾಗಿಯೇ ಪ್ರಾಣಿಗಳಿಗೆ ಆಲೋಚನೆ ಅಥವಾ ತೊಂದರೆಯ ಬಗ್ಗೆ ಅಷ್ಟಾಗಿ ಅವಗಾಹನೆ ಇಲ್ಲದ ಕಾರಣ ಅವು ಅ ಪಾ ಯಗಳಲ್ಲಿ ಸಿಲುಕಿಕೊಂಡು ಬಿಡುತ್ತವೆ. ಅವು ತಮ್ಮ ವೇದನೆಯನ್ನು ಯಾರಿಗೂ ಹೇಳಿಕೊಳ್ಳಲು ಕೂಡಾ ಸಾಧ್ಯವಾಗುವುದಿಲ್ಲ. ಆಗ ಸುತ್ತ ಮುತ್ತಲಲ್ಲಿ ಯಾರಾದರೂ ಇದ್ದರೆ ಅವುಗಳನ್ನು ರಕ್ಷಣೆ ಮಾಡುವರು. ಇಲ್ಲವಾದರೆ ಏನಾಗಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಸೋಶಿಯಲ್ ಮೀಡಿಯಾ ದಲ್ಲಿ ಇಂತಹುದೊಂದು ವೀಡಿಯೋ ವೈರಲ್ ಆಗಿದ್ದು, ಅನಿರೀಕ್ಷಿತ ಅ ಪಾಯದಲ್ಲಿ ಸಿಕ್ಕಿಕೊಂಡ ಹಸುವೊಂದನ್ನು ರಕ್ಷಣೆ ಮಾಡಿರುವ ವೀಡಿಯೋ ಲಕ್ಷಾಂತರ ಜನರಿಂದ ವೀಕ್ಷಣೆ ಮಾಡಲ್ಪಟ್ಟಿದೆ.
ವೀಡಿಯೋದಲ್ಲಿ ನೋಡಿದಾಗ ಒಂದು ಹಸು ಮರವೊಂದರ ಬೊಡ್ಡೆಯೊಳಗೆ ಯಾವ ಕಾರಣಕ್ಕೆ ತಲೆಯನ್ನು ಇಟ್ಟಿತ್ತೋ ಗೊತ್ತಿಲ್ಲ ಆದರೆ ತಲೆ ಇಟ್ಟ ಮೇಲೆ ಮತ್ತೆ ಹೊರ ತೆಗೆಯಲಾರದೆ ಅದರ ತಲೆ ಮರದೊಳಗೆ ಸಿಕ್ಕಿ ಹಾಕಿಕೊಂಡಿದೆ. ಹಸು ತನ್ನ ತಲೆಯನ್ನು ಹೊರ ತೆಗೆಯಲು ಪ್ರಯತ್ನ ಪಟ್ಟಿದೆಯಾದರೂ ಅದು ಸಾಧ್ಯವಾಗಿಲ್ಲ. ಆಗ ಒಬ್ಬ ವ್ಯಕ್ತಿ ಕೊಡಲಿಯನ್ನು ತಂದು ಹಸುವಿನ ತಲೆ ಸಿಕ್ಕಿಕೊಂಡ ಮರದ ಭಾಗದ ಸ್ವಲ್ಪ ಮೇಲೆ ಕೊಡಲಿಯಿಂದ ಮರವನ್ನು ಸ್ವಲ್ಪ ಕಡಿದು ಹಸು ತಲೆಯನ್ನು ಹೊರ ತೆಗೆಯಲು ನೆರವನ್ನು ನೀಡಿದ್ದಾನೆ. ಆತ ಮರದ ಆ ಭಾಗಕ್ಕೆ ಕೊಡಲಿ ಪೆಟ್ಟು ನೀಡುವಾಗ ಹಸು ಬೆದರಿದೆ.
ಕೊಡಲಿ ಪೆಟ್ಟಿನ ಏಟುಗಳು ಎಲ್ಲಿ ತನಗೆ ಬೀಳುವುದೋ ಎನ್ನುವ ಭ ಯವೋ, ಮರಕ್ಕೆ ತಗುಲುತ್ತಿದ್ದ ಏಟಿನ ಭ ಯವೋ ಹಸು ಬೆ ದ ರುತ್ತಿರುವುದನ್ನು ನಾವು ನೋಡಬಹುದು. ಮರವನ್ನು ಕೊಡಲಿಯಿಂದ ಆ ವ್ಯಕ್ತಿ ಜಾಗರೂಕತೆಯಿಂದ ಹಸುವಿಗೆ ಪೆಟ್ಟಾಗದಂತೆ ಕತ್ತರಿಸಿದ್ದಾನೆ. ತಲೆ ಸಿಕ್ಕಿ ಹಾಕಿಕೊಂಡ ಭಾಗ ಸ್ವಲ್ಪ ಸಡಿಲವಾಗುತ್ತಿದ್ದಂತೆ ಹಸುವು ಅಲ್ಲಿಂದ ತನ್ನ ತಲೆಯನ್ನು ಹೊರಗೆ ತೆಗೆದು ಓಡಿ ಹೋಗಿದೆ. ನಿಜಕ್ಕೂ ಆ ಹಸುವಿಗೆ ಆ ಕ್ಷಣ ಮರು ಜೀವ ಬಂದಂತೆ ಇದೆ ಎಂದೇ ನಾವು ಹೇಳಬಹುದಾಗಿದೆ. ಹಸುವಿನ ಸಂಕಟ ಅರಿತು ಅದರ ರಕ್ಷಣೆಗೆ ಧಾವಿಸಿದ ವ್ಯಕ್ತಿಯನ್ನು ಕೂಡಾ ನೆಟ್ಟಿಗರು ಮೆಚ್ಚಿದ್ದಾರೆ.
ವಿಡಿಯೋ ನೋಡಿ
ವಾರದ ಹಿಂದೆಯಷ್ಟೇ ಶೇರ್ ಆಗಿರುವ ಈ ವೀಡಿಯೋ ನೋಡಿದ ನೆಟ್ಟಿಗರು ಇದನ್ನು ಅಪಾರವಾಗಿ ಮೆಚ್ಚಿದ್ದು, ಈಗಾಗಲೇ 98 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದನ್ನು ನೋಡಿದ ನಂತರ ಅನೇಕರು ಹಸುವಿನ ರಕ್ಷಣೆ ಮಾಡಿದ ವ್ಯಕ್ತಿಯನ್ನು ಹೊಗಳಿದ್ದಾನೆ. ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ, ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕು ಇದೆ, ಅದರ ಪ್ರಾಣ ಉಳಿಸಿದ ನಿಮಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಕೆಲವರು ಹಾರೈಸಿದ್ದಾರೆ. ಇಂತಹ ಕೆಲಸವನ್ನು ಮಾಡಲು ಬಹಳ ಧೈರ್ಯ ಮತ್ತು ಸಂಯಮವನ್ನು ಹೊಂದಿರಬೇಕು ಎಂದು ಕೆಲವರು ಹೇಳಿದ್ದಾರೆ.