Kannada Jokes- ಪತಿ ಪತ್ನಿ ವಿಚ್ಛೇದನದ ಕೇಸ್ ನಡೀತಾ ಇತ್ತು.. ಲೇಡಿ ಜಡ್ಜ್ : ಯಾಕಮ್ಮ ನೀನು ನಿನ್ನ ಗಂಡನ್ನ ಬಿಡಬೇಕು ಅಂತಾ ಇದ್ದೀಯಾ? ಮಹಿಳೆ: ಯಾಕಾ? ಒಂದು ತಿಂಗಳ ಅವನ…

ನಗುವಿಲ್ಲದೇ ಜೀವನವಿಲ್ಲ, ನಗು ನಮ್ಮ ಜೀವನದಲ್ಲಿ ಹುಮ್ಮಸ್ಸು, ನವ ಚೈತನ್ಯವನ್ನು ತರುತ್ತದೆ. ಮನಸಾರೆ ನಕ್ಕರೆ ಆರೋಗ್ಯ ವೃದ್ಧಿ ಕೂಡಾ ಖಂಡಿತ. ನಗುವೆಂಬುದು ಇತರರನ್ನು ಕೂಡಾ ಖುಷಿ ಪಡಿಸುತ್ತದೆ. ಜೀವನದಲ್ಲಿ ನಗು ಇಲ್ಲದೇ ಹೋದರೆ ಬಹು ಅಮೂಲ್ಯವಾದ ಒಂದು ಆಸ್ತಿ ನಮ್ಮಿಂದ ದೂರವಾದಂತೆ. ಎಷ್ಟೇ ಒತ್ತಡವೇ ಇದ್ದರೂ ನಮ್ಮ‌‌ ಜೀವನದಲ್ಲಿ ನಾವು ನಗುವೆಂಬ ಸಿರಿಯನ್ನು ಕಳೆದುಕೊಳ್ಳಬಾರದು. ಅಂತಹ ನಗುವಿನ ಸುಧೆಯನ್ನು ನಿಮಗೆ ನೀಡುವ ಒಂದು ಪ್ರಯತ್ನ ಈ ನಗೆ ಹನಿಗಳನ್ನು ನಿಮ್ಮ ಮುಂದೆ ಮಾಡುತ್ತಿದ್ದೇವೆ.

ಜೋಕ್ ೧.

ಹೆಂಡತಿ ಗಂಡನಿಗೆ ಫೋನ್ ನಲ್ಲಿ ನೆಟ್ ಖಾಲಿ ಆಗಿದೆ ರೀ ಚಾರ್ಜ್‌ ಮಾಡಿಸಿ ಎಂದು ಹೇಳಿದಳು. ಗಂಡ ಆನ್ಲೈನ್ ನಲ್ಲಿ ರೀಚಾರ್ಜ್ ಮಾಡಿದ. ಆಗಿನಿಂದ ಹೆಂಡತಿ ಅವನನ್ನು ಬೈತಾನೇ ಇದ್ದಾಳೆ.

ಆನ್ಲೈನ್ ನಲ್ಲಿ ಎಲ್ಲಾ ನಕಲಿ ಅಂತೇ, ನೋಡ್ರೀ ಈಗ ನೆಟ್ ಸ್ಲೋ ಆಗಿದೆ ಅಂತ…

ಜೋಕ್ ೨.

ಬೇರೆ ಬೇರೆ ದೇಶಗಳಲ್ಲಿ ಗಂಡ ಹೆಂಡತಿ ಮಲಗುವ ಮುನ್ನ ಹೆಂಡತಿಗೆ ಹೇಗೆ ಸಂಬೋಧನೆ ಮಾಡುತ್ತಾರೆಂದರೆ..

ಅಮೆರಿಕ: ಗುಡ್ ನೈಟ್ ಡಾರ್ಲಿಂಗ್
ಬ್ರಿಟನ್: ಸ್ವೀಟ್ ಡ್ರೀಮ್ಸ್ ಡಾರ್ಲಿಂಗ್
ಜಪಾನ್ : ಗುಡ್ ನೈಟ್ ಮೈ ಲವ್
ಕೆನಡಾ: ಲವ್ ಯೂ ಹನಿ, ಸ್ವೀಟ್ ಡ್ರೀಮ್ಸ್
ಭಾರತ: ಗೇಟ್ ಬೀಗ ಹಾಕಿದ್ಯಾ? ಗ್ಯಾಸ್ ಆಫ್ ಮಾಡಿದ್ಯಾ? ಹೊರಗೆ ಲೈಟ್ ಆಫ್ ಮಾಡು? ಫ್ಯಾನ್ ಹಾಕು, ಎಸಿ ಹಾಕಬೇಡ ಜಾಸ್ತಿ ಕೋಲ್ಡ್ ಆಗ್ತಿದೆ..‌ 😂😂

ಜೋಕ್ ೩

ಪತಿ ಪತ್ನಿ ವಿಚ್ಛೇದನದ ಕೇಸ್ ನಡೀತಾ ಇತ್ತು..

ಲೇಡಿ ಜಡ್ಜ್ : ಯಾಕಮ್ಮ ನೀನು ನಿನ್ನ ಗಂಡನ್ನ ಬಿಡಬೇಕು ಅಂತಾ ಇದ್ದೀಯಾ?

ಮಹಿಳೆ: ಯಾಕಾ? ಒಂದು ತಿಂಗಳ ಅವನ ಜೊತೆ ಇದ್ದು ನೋಡು, ನಿಂಗೆ ಗೊತ್ತಾಗುತ್ತೆ..

ಆ ಮಾತು ಕೇಳಿ ಜಡ್ಜ್ ಶಾಕ್……

ಜೋಕ್ ೪

ದೀಪಾವಳಿ ನಂತರ ಕೂಡಾ ಕೊರೊನಾ ಹೀಗೆ ಮುಂದುವರೆದರೆ ಬಿಲ್ಡರ್ ಗಳು ಕೊಡೋ ಜಾಹೀರಾತು, “ಟು ಬೆಡ್ ರೂಂ, ಹಾಲ್, ಕಿಚನ್ ವಿತ್ ಐಸೋಲೇಶನ್ ರೂಂ, ಆಕ್ಸಿಜನ್ ಪೈಪ್ ಅಂಡ್ ವೆಂಟಿಲೇಟರ್”

ಜೋಕ್ ೫

ಹೆಂಡತಿ ಬೆಳಿಗ್ಗೆ ಚಹಾದೊಂದಿಗೆ ಬಹಳಷ್ಟು ಮಾತ್ರೆಗಳನ್ನು ತಂದು ಗಂಡನ ಮುಂದೆ ಇಟ್ಟಳು..

ಹೆಂಡತಿ: ಈ ಚಹಾವನ್ನು ಕ್ಯಾಲ್ಪೋಲ್ ಜೊತೆ ತೆಗೆದುಕೊಳ್ಳಿ.

ಗಂಡ: ಇಲ್ಲ, ನನಗೆ ಜ್ವರ ಏನಿಲ್ಲ.

ಹೆಂಡತಿ: ಓ ಸರಿ ಈ ಡೈಜೀನ್ ತಗೊಳ್ಳಿ..

ಗಂಡ: ಇಲ್ಲ, ನನಗೆ ಆ್ಯಸಿಡಿಟಿ ಏನೂ ಆಗಿಲ್ಲ…

ಹೆಂಡತಿ: ಹೋಗಲಿ ಈ ಪುದಿನ್ ಹರ ತೆಗೊಳ್ಳಿ.

ಗಂಡ: ಹೇ ನನ್ನ ಹೊಟ್ಟೆ ತುಂಬಾ ಚೆನ್ನಾಗಿದೆ ಕಣೇ..

ಹೆಂಡತಿ: ಸರಿ ಅದೆಲ್ಲಾ ಬಿಡಿ ಕಡೇ ಕಾಂಬಿಫ್ಲೇಮ್

ತಗೊಳ್ರೀ.. ನಿಮ್ಮ ಕೈ ಕಾಲುಗಳ ನೋವು ಹೋಗುತ್ತೆ.

ಗಂಡ: ಏ ಏನಾಗಿದ್ಯೆ ನಿನಗೆ, ನನಗೆ ಏನೂ ಆಗಿಲ್ಲ ಚೆನ್ನಾಗೇ ಇದ್ದೀನಿ.

ಹೆಂಡತಿ: ವಾವ್, ಹಾಗಾದ್ರೆ ಎಲ್ಲಾ ಸರಿಯಾಗಿದ್ರೆ ಇನ್ನೂ ಯಾಕೆ ಮಲಿಗಿದ್ದೀರಾ? ಮೇಲೆದ್ದು ಮನೆ ಕ್ಲೀನ್ ಮಾಡಿ…..

ಜೋಕ್ ೬

ಪೋಲಿಸ್ : ನಿನ್ನ ಎಲ್ಲಾ ದಾಖಲೆಗಳು ಸರಿಯಾಗಿದೆ. ಆದರೆ 2000 ದಂಡ ಕಟ್ಟಲೇಬೇಕು.

ವಾಹನ ಚಾಲಕ: ಸರ್ ಎಲ್ಲಾ ದಾಖಲೆ ಸರಿ ಇದ್ರೆ ದಂಡ ಯಾಕೆ ಕಟ್ಬಬೇಕು?

ಪೋಲಿಸ್: ದಾಖಲೆ ಎಲ್ಲಾ ಸರಿ ಇದೆ. ಆದ್ರೆ ಎಲ್ಲಾ ದಾಖಲೆಗಳನ್ನು ಸೇಫಾಗಿ ಪ್ಲಾಸ್ಟಿಕ್ ಕವರ್ ಅಲ್ಲಿ ಇಟ್ಟಿದ್ಯಾ.. ಪ್ಲಾಸ್ಟಿಕ್ ಕವರ್ ಬಳಕೆ ನಿಷೇಧ ಇದೆ. ಆದರೂ ನೀನು ಬಳಸಿ ತಪ್ಪು ಮಾಡಿರೋದಕ್ಕೆ ದಂಡ ಕಟ್ಟಬೇಕು..

ವಾಹನ ಚಾಲಕನ ಬಾಯಲ್ಲಿ ಈಗ ಮಾತೇ ಇಲ್ಲ…‌

ಜೋಕ್ ೭

ಮಹಿಳೆಯರಿಗೆ ಏನು ನೆನಪಿತ್ತೋ, ಬಿಡುತ್ತೋ ಗೊತ್ತಿಲ್ಲ, ಆದರೆ ತಮ್ಮ ಮನೆಯ ಲೋಟ, ತಟ್ಟೆ ಮತ್ತು ಬಟ್ಟಲು ನೆರೆ ಹೊರೆಯ ಯಾರ ಮನೆಗೆ ಹೋಗಿದೆ, ಅವರಿನ್ನೂ ಕೊಟ್ಟಿಲ್ಲ ಅನ್ನೋದು ಚೆನ್ನಾಗಿ ನೆನಪಿರುತ್ತೆ.