ಅಬ್ಬಾ! ಒಂದು ಲಕ್ಷದ ನೋಟನ್ನು ಮುದ್ರಿಸಲಿದೆ ಈ ದೇಶ, ಆದರೆ ಅದರಲ್ಲಿ ಕೇವಲ ಅರ್ಧ ಕಿಲೋ ಅಕ್ಕಿ ಮಾತ್ರ ಖರೀದಿಸಲು ಸಾಧ್ಯ!

ಜಗತ್ತಿನ ಅನೇಕ ದೇಶಗಳಲ್ಲಿ ಆರ್ಥಿಕ ಸಮಸ್ಯೆಗಳು ತಾಂಡವ ಆಡುತ್ತಿವೆ. ಹಲವು ದೇಶಗಳು ಇಂತಹ ಪರಿಸ್ಥಿತಿಯಿಂದ ಹೊರ ಬರಲು ಅನೇಕ ಯೋಜನೆಗಳನ್ನು, ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿವೆ‌. ಈ ನಿಟ್ಟಿನಲ್ಲಿ ಅಮೆರಿಕಾದ ವೆನೆಜುವೆಲಾದಲ್ಲಿ ಅಲ್ಲಿನ ಸರ್ಕಾರ ತೆಗೆದುಕೊಂಡಿರುವ ಕ್ರಮ ಅಥವಾ ಮಾಡಿರುವ ಒಂದು ನಿರ್ಧಾರವು ಈಗ ಜಗತ್ತಿನ ಗಮನವನ್ನು ಸೆಳೆಯುತ್ತಿದೆ.‌ ವೆನೆಜುವೆಲಾದಲ್ಲಿ ಎದುರಾಗಿರುವ ಈ
ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸಲು ಅಲ್ಲಿ ನೂರು, ಸಾವಿರ ಅಲ್ಲಾ, ಬದಲಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ನೋಟು ಮುದ್ರಿಸಲಿದೆಯಂತೆ. ಆದರೆ ಈ ಒಂದು ಲಕ್ಷದ ನೋಟಿನಿಂದ ಕೇವಲ ಎರಡು ಕೆಜಿ ಆಲೂಗಡ್ಡೆ ಅಥವಾ ಅರ್ಧ ಕೆಜಿ ಅಕ್ಕಿಯನ್ನು ಮಾತ್ರ ಖರೀದಿಸಬಹುದಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಅಲ್ಲಿ ನಿರಂತರವಾಗಿ ಕುಸಿಯುತ್ತಿರುವ ಆರ್ಥಿಕತೆ ಮತ್ತು ಕರೆನ್ಸಿ ಮೌಲ್ಯ ಕೂಡಾ ಕುಸಿಯುತ್ತಿರುವುದು ಎನ್ನಲಾಗಿದೆ.

ವೆನೆಜುವೆಲಾ ಹಿಂದೊಮ್ಮೆ ತನ್ನ ತೈಲ ನಿಕ್ಷೇಗಳಿಂದಾಗಿ ಹೊರ ತೆಗೆದ ತೈಲವನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಅಧಿಕ ಲಾಭವನ್ನು ಪಡೆಯುವ ಮೂಲಕ, ತನ್ನ ತೈಲ ವ್ಯಾಪಾರ ಹಾಗೂ ವ್ಯವಹಾರಗಳಿಂದಾಗಿ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ ಇಂದು ಅಲ್ಲಿ ಆರ್ಥಿಕ ಬಿಕ್ಕಟ್ಟು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವೆನಿಜುವೆಲಾ ಅತ್ಯಂತ ಕೆ ಟ್ಟ ದಿನಗಳನ್ನು ನೋಡುವಂತಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಜನರು ಹಸಿವಿನಿಂದ ಸಾಯುವಂತಾಗಿದೆ. ಹಣದುಬ್ಬರವು ಹೆಚ್ಚಿ ಬೆಲೆಗಳು ಗಗನವನ್ನು ಮುಟ್ಟಿದೆ‌, ಜನ ಈರುಳ್ಳಿ, ಆಲೂಗಡ್ಡೆ ಯಂತಹ ವಸ್ತುಗಳನ್ನು ಕೊಳ್ಳಲು ಜನರು ಬ್ಯಾಗ್ ಗಳ ತುಂಬಾ ಹಣವನ್ನು ತುಂಬಿಸಿಕೊಂಡು ಹೋಗುವ ಪರಿಸ್ಥಿತಿ ಉದ್ಭವಿಸಿದೆ.‌

ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ದೊಡ್ಡ ಮೊತ್ತದ ಮೌಲ್ಯವುಳ್ಳ ನೋಟುಗಳನ್ನು ಮುದ್ರಿಸಲು ಸರ್ಕಾರವು ನಿರ್ಣಯವನ್ನು ಮಾಡಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಹಣದುಬ್ಬರವನ್ನು ನಿಭಾಯಿಸಲು ದೊಡ್ಡ ಮೊತ್ತದ ಮೌಲ್ಯ ಇರುವ ನೋಟುಗಳ ಮುದ್ರಣಕ್ಕೆ ಮುಂದಾಗಿದೆ. ಬ್ಲೂಮ್ ಬರ್ಗ್ ವರದಿಯ ಅನ್ವಯ ವೆನಿಜುವೆಲಾದಲ್ಲಿ ಉಂಟಾಗಿರುವ ಅಪಾರವಾದ ಅಪಮೌಲ್ಯೀಕರಣದಿಂದಾಗಿ ಈಗ ದೊಡ್ಡ ಮೌಲ್ಯದ ನೋಟುಗಳ ಮುದ್ರಣ ಮಾಡಲಾಗುತ್ತಿದೆ.

ಇದರಲ್ಲಿ ಲಕ್ಷ ಬೊಲಿವರ್( ಸ್ಥಳೀಯ ಕರೆನ್ಸಿ) ನೋಟಗಳು ಕೂಡಾ ಸೇರಿದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ಸೆಕ್ಯುರಿಟಿ ಪೇಪರನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಕಸ್ಟಮ್ಸ್ ನಿಂದ ಈ ಬಗ್ಗೆ ಮಾಹಿತಿಯು ಹೊರ ಬಂದಿದೆ ಎನ್ನಲಾಗಿದೆ. ‌ ಸರ್ಕಾರ ಈಗ ಒಂದು ಲಕ್ಷದ ನೋಟುಗಳನ್ನು ಮುದ್ರಣ ಮಾಡಿದರೂ ಕೂಡಾ‌ ಅದರ ಮೌಲ್ಯ ಮಾತ್ರ ಕೇವಲ 0.23 ಡಾಲರ್ ಗಳಾಗಿರುತ್ತದೆ ಎನ್ನಲಾಗಿದ್ದು ಜನರ ಸಮಸ್ಯೆಗಳೇನು ಇದರಿಂದ ಕಡಿಮೆಯಾಗುವುದಿಲ್ಲ ಎನ್ನಲಾಗಿದೆ. ಈ ಹಣದಲ್ಲಿ ಎರಡು ಕಿಲೋ ಆಲೂಗಡ್ಡೆ ಅಥವಾ ಅರ್ಧ ಕಿಲೋ ಅಕ್ಕಿ ಮಾತ್ರ ಖರೀದಿಸಬಹುದು.

ಶ್ರೀಮಂತ ರಾಷ್ಟ್ರಕ್ಕೆ ಇಂತಹ ಪರಿಸ್ಥಿತಿ ಏಕೆ ಬಂತು ಎನ್ನವುದಾದರೆ ಒಂದು ಕೊರೊನಾ ಹೊ ಡೆ ತ, ತೈಲ ಮಾರಾಟದಿಂದ ಬಂದ ಹಣವು ಮುಗಿದಿರುವುದು, ಭ್ರ ಷ್ಟಾ ಚಾರ ನಿಯಂತ್ರಣವು ಸಾಧ್ಯವಾಗದೇ ಕೈ ಮೀರಿ ಹೋಗಿರುವುದು ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ವೆನೆಜುವೆಲಾ ದಲ್ಲಿ 20% ರಷ್ಟು ಆರ್ಥಿಕ ಕುಸಿತವಾಗಲಿದ್ದು, ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಲಿದೆ ಎಂದಿದ್ದಾರೆ ಆರ್ಥಿಕ ತಜ್ಞರು. ಪ್ರಸ್ತುತ ವೆನೆಜುವೆಲಾದಲ್ಲಿ 700,000 ಜನರಿಗೆ ದಿನದ ಎರಡು ಹೊತ್ತಿನ ಊಟ ಸಿಗುವುದು ಕೂಡ ಕಷ್ಟವಾಗಿದೆ ಎನ್ನಲಾಗಿದೆ.