ಬಿಜೆಪಿಯ MLA ಟಿಕೆಟ್ ಕೊಡಿಸಿ ಎಂದ ಅಭಿಮಾನಿ; ಸಖತ್ ಉತ್ತರ ಕೊಟ್ಟ ಸೋನು ಸೂದ್! ಟ್ವಿಟ್ ವೈರಲ್

ಕಳೆದ ನಾಲ್ಕಾರು ತಿಂಗಳಿಂದ ಸೋನು ಸೂದ್ ಅವರು ನಿಜವಾದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಚಲನಚಿತ್ರಗಳಲ್ಲಿ ಯಾವತ್ತು ಖಳನಟನ ಪಾತ್ರಗಳಲ್ಲಿ ಕಾಣಿಸಿಕೊಂಡ ಸೋನು ಸೂದ್ ಅವರು ನಿಜ ಜೀವನದಲ್ಲಿ ಮಾತ್ರ ಮಾನವತೆಯ ಮುಖವನ್ನು ಹೊತ್ತ ರಿಯಲ್ ಹೀರೋ ಆಗಿದ್ದಾರೆ.

ಕಳೆದ ನಾಲ್ಕಾರು ತಿಂಗಳಿಂದ ಸೋನು ಸೂದ್ ಅವರು ದೀನರ ದುರ್ಬಲರ ಹಾಗೂ ಕಷ್ಟದಲ್ಲಿರುವವರಿಗೆ ಅನೇಕರ ಅಸಂಖ್ಯ ಸಮಸ್ಯೆಗಳನ್ನು ಚಾಚೂತಪ್ಪದೆ ಮತ್ತು ತಮ್ಮ ಕೈಲಾದ ಹಾಗೆ ಬಿಡಿಸುತ್ತ ಬಂದಿದ್ದಾರೆ, ಮತ್ತು ಇನ್ನೂ ಬಿಡಿಸುತ್ತಲೇ ಇದ್ದಾರೆ. ಸಹಾಯ ಬೇಡಿ ಬಂದ ಯಾರಿಗೂ ಸಹಿತ ಅವರು ಬೇಜಾರು ಮಾಡಿಲ್ಲ. ಪ್ರತಿಯೊಬ್ಬರಿಗೂ ಯಾವುದಾದರೂ ರೀತಿಯಲ್ಲಿ ಅವರು ಸ್ಪಂದಿಸುತ್ತಲೇ ಬಂದಿದ್ದಾರೆ.

ಸಹಾಯ ಮಾಡುವವರನ್ನು ಕಂಡರೆ ಕೆಲವರು ಇಲ್ಲದ ಸಲ್ಲದ ಬೇಡಿಕೆಗಳನ್ನು ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ. ಯಾಕೆಂದರೆ ಸೋನು ಸೂದ್ ಅವರಿಗೆ ಇಲ್ಲಿಯವರೆಗೆ ಚಿತ್ರವಿಚಿತ್ರವಾದ ವಸ್ತುಗಳ ಬೇಡಿಕೆಗಳನ್ನು ಸಹ ಜನರು ಮಾಡಿದ್ದಾರೆ. ಇದರಲ್ಲಿ ಮೊಬೈಲ್, ಫೋನ್, ಆಟಿಕೆ ಸಾಮಾನುಗಳು ಹೀಗೆ ಅನೇಕ ರೀತಿಯ ವಸ್ತುಗಳ ಡಿಮಾಂಡ್ ಅನವಶ್ಯಕವಾಗಿ ಮಾಡುತ್ತಲೇ ಇದ್ದಾರೆ. ಈಗ ಹೊಸದಾಗಿ ಒಬ್ಬ ಯೂಸರ್ ಟ್ವಿಟರ್ ನಲ್ಲಿ ಮುಂಬರುವ ಬಿಹಾರ್ ವಿಧಾನಸಭೆಗೆ ಬಿಜೆಪಿಯ ಕಡೆಯಿಂದ ಚುನಾವಣೆಗೆ ನಿಲ್ಲಲು ಎಂಎಲ್ಎ ಟಿಕೆಟ್ ಸಹಿತ ಬೇಡಿದ್ದಾನೆ.

ಟ್ವಿಟರ್ನಲ್ಲಿ ಸೋನು ಸೂದ್ ಅವರಿಗೆ ಒಬ್ಬನು ಹೀಗೆ ಕೇಳಿದ್ದಾನೆ. ನನಗೆ ಜನರ ಸೇವೆಯನ್ನು ಮಾಡುವುದಿದೆ. ಅದಕ್ಕಾಗಿ ಮುಂಬರುವ ಬಿಹಾರದ ಚುನಾವಣೆಯಲ್ಲಿ ಭಾಗಲ್ಪುರ್ ಮತಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಟಿಕೆಟ್ ಬೇಕಾಗಿದೆ. ನನ್ನ ಆಸೆಯನ್ನು ಪೂರ್ಣಗೊಳಿಸಿ ಎಂದು ವಿನಂತಿಸಿದ್ದಾನೆ.

ಇದಕ್ಕೆ ಸೋನ ಸೂದ್ ಅವರು ಆ ಯೂಸರ್ ಗೆ ತುಂಬ ಮಾರ್ಮಿಕವಾಗಿ ಉತ್ತರವನ್ನು ಕೊಟ್ಟಿದ್ದಾರೆ. ಈ ಉತ್ತರವು ಸಖತ್ ವೈರಲ್ ಆಗಿದೆ.

ತಮ್ಮ ಉತ್ತರದಲ್ಲಿ ಸೋನು ಸೂದ್ ಹೀಗೆ ಹೇಳಿದ್ದಾರೆ. ಅಣ್ಣ ಬಸ್ಸು, ಟ್ರೈನ್ ಮತ್ತು ವಿಮಾನ್ ಟಿಕೆಟ್ಗಳು ಹೊರತಾಗಿ ನನಗೆ ಬೇರೆ ಯಾವ ಟಿಕೆಟ್ ಕೊಡಿಸಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಸೋನು ಸೂದ್ ಅವರ ಈ ಮಾರ್ಮಿಕ ಉತ್ತರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅದರ ಜೊತೆಗೆ ಯೂಜರ್ ಗಳು ಸಹಿತ ತಮ್ಮ ಬೇರೆ ಬೇರೆ ಪ್ರತಿಕ್ರಿಯೆಗಳನ್ನು ಕಮೆಂಟ್ ಮಾಡ್ತಾ ಇದ್ದಾರೆ.