Viral Video: ತುಂಬಾ ಜಾಣತನದಿಂದ ಮೀನಿನ ಬೇ ಟೆಯಾಡಿದ ಕೊಕ್ಕರೆ! 99 ಲಕ್ಷ ಜನರು ನೋಡಿದ ವೈರಲ್ Video!

ಬೇ ಟೆಯಾಡುವುದು ಒಂದು ಕಲೆ ಹಾಗೂ ಅದೊಂದು ವಿದ್ಯೆ ಕೂಡಾ ಆಗಿತ್ತು ಪ್ರಾಚೀನ ಕಾಲದಲ್ಲಿ. ಈಗ ಬೇ ಟೆ ಆಡೋಕೆ ಹೋದ್ರೆ ಜೈ ಲಿನ ಕಂಬಿಗಳ ಹಿಂದೆ ಕೂರಬೇಕಾಗುವುದು‌. ಆದರೆ ಕಾಡಿನಲ್ಲಿ, ಪ್ರಕೃತಿ ನಡುವೆ ಇರುವ ಜನರಿಗೆ ಮತ್ತು ಪ್ರಾಣಿಗಳಿಗೆ ಬೇ ಟೆ ಅನಿವಾರ್ಯ. ಅದರಲ್ಲೂ ಪ್ರಾಣಿಗಳ ಜೀವನ ನಡೆಯುವುದೇ ಬೇ ಟೆಯಿಂದ. ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಬೇ ಟೆಯಾಡುವುದನ್ನು ಪ್ರಕೃತಿಯೇ ಕಲಿಸಿ ಬಿಡುತ್ತದೆ. ಹಕ್ಕಿಗಳು ಆಗಸದಲ್ಲಿ ಹಾರುತ್ತಲೇ ನೀರ ಮೇಲೆ ಬಂದು ಮೀನುಗಳನ್ನು ಹಿಡಿದು ಹೋಗುವ ಚಾಕಚಕ್ಯತೆ ಹೊಂದಿದ್ದರೆ, ಹದ್ದು ಬಹಳ ಎತ್ತರದಿಂದ ಕೂಡಾ ತನ್ನ ಬೇ ಟೆಯನ್ನು ಗುರುತಿಸಿ, ವೇಗವಾಗಿ ಹಾರಿ ಬಂದು ತನ್ನ ಬಿಗಿಯಾದ ಹಿಡಿತದಲ್ಲಿ ತನ್ನ ಬೇ ಟೆಯನ್ನು ಹಿಡಿದು ಕೆಲವೇ ಕ್ಷಣಗಳಲ್ಲಿ ಹಾರಿ ಹೋಗುವ ಕುಶಲಮತಿಯಾಗಿರುತ್ತದೆ.

ಹುಲಿ, ಸಿಂಹ ಹಾಗೂ ಚಿರತೆಗಳಂತಹ ಪ್ರಾಣಿಗಳಾದರೆ ತಮ್ಮ ಬೇ ಟೆಗೆ ಹೊಂಚು ಹಾಕಿ, ಸಾವಧಾನವಾಗಿ ಅಡಗಿ ಕೂತು, ಸರಿಯಾದ ಸಮಯ ನೋಡಿ ಬೇ ಟೆಯನ್ನು ತಪ್ಪಿಸಿಕೊಂಡು ಹೋಗದ ಹಾಗೆ ಹಿಡಿದು ಬಿಡುತ್ತದೆ‌. ಹೀಗೆ ಒಂದೊಂದು ಜೀವಿಯೂ ಕೂಡಾ ತನ್ನದೇ ಆದ ವಿಧಾನದಲ್ಲಿ ಬೇ ಟೆಯನ್ನು ಆಡುತ್ತವೆ. ಆದರೆ ಇಲ್ಲಿ ಯಾವುದೇ ಜೀವಿಗೆ ಆಗಲಿ ಅದರಲ್ಲೂ ವಿಶೇಷವಾಗಿ ಭೂಮಿಯ ಮೇಲೆ ಬೇ ಟೆಯಾಡುವಾಗ ಮುಖ್ಯವಾಗಿ ಪ್ರಾಣಿಗಳಿಗೆ ಬೇಕಿರುವುದು ತಾಳ್ಮೆ. ಬೇ ಟೆಯನ್ನು ಹಿಡಿಯಲು ಅವು ತೋರುವ ತಾಳ್ಮೆ ಹಾಗೂ ಉಪಯೋಗ ಮಾಡುವ ಬುದ್ಧಿ ಶಕ್ತಿ ನಿಜಕ್ಕೂ ಕೆಲವೊಮ್ಮೆ ಅಮೋಘ ಎನಿಸುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ಅಮೋಘ ಎನಿಸುವ, ನೋಡುತ್ತಿದ್ದರೆ ಕೆಲವೊಮ್ಮೆ ನಮ್ಮಲ್ಲೊಂದು ಪುಳಕವನ್ನು ಹುಟ್ಟಿಸುವ ಹಾಗೂ ರೋಚಕ ಎನಿಸುವ ಬೇ ಟೆಯ ಆಟದ ವೀಡಿಯೋ ವೈರಲ್ ಆಗಿದೆ‌. ಈ ವೀಡಿಯೋ ಯಾವ ಮಟ್ಟಕ್ಕೆ ಆಸಕ್ತಿಕರವಾಗಿದೆಯೆಂದರೆ ಶೇರ್ ಆದ ಮೂರೇ ವಾರಗಳಲ್ಲಿ 99 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದ್ದು, ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್ ಗಳನ್ನು ಪಡೆದು ಸಾಗುತ್ತಿದೆ‌. ಹಾಗಾದರೆ ಈ ವೀಡಿಯೋದಲ್ಲಿ ಅಂತಹ ರೋಚಕವಾದ ಬೇ ಟೆ ಏನಿದೆ ಅಂತೀರಾ? ಖಂಡಿತವಾಗಿ ಇದೆ. ಕೊಕ್ಕರೆಯೊಂದು ಬಹಳ ತಾಳ್ಮೆಯಿಂದ ಒಂದು ಕ್ಯಾಟ್ ಫಿಶ್ ಅನ್ನು ಹಿಡಿದ ವೀಡಿಯೋ ಇದು.

ಕೊಕ್ಕರೆಯೊಂದು ಒಂದು ನೀರಿನ ಹೊಂಡದ ಬಳಿ ಬಂದು ಅದರಲ್ಲಿರುವ ಮೀನನ್ನು ನೋಡಿ ಅದನ್ನು ಹಿಡಿಯಲು ನೋಡಿದಾಗ ಮೀನು ನೀರೊಳಗೆ ಹೋಗುತ್ತದೆ‌. ಕೊಕ್ಕರೆ ಆಗ ಅಲ್ಲೇ ಕುಳಿತು ಬಹಳ ತಾಳ್ಮೆಯಿಂದ ಮೀನು ತನ್ನ ತಲೆಯನ್ನು ನೀರಿನಿಂದ ಹೊರಗೆ ಇಡಲಿ ಎಂದು ಕಾಯುತ್ತದೆ. ಮೀನು ತನ್ನ ತಲೆಯನ್ನು ಹೊರಗೆ ಇಟ್ಟ ಕೂಡಲೇ ಕೊಕ್ಕರೆ ತನ್ನ ಉದ್ದ ಕೊಕ್ಕಿನಿಂದ ಅದನ್ನು ಹಿಡಿದು ಹೊರಗೆ ಎಳೆಯುವ ಪ್ರಯತ್ನ ಮಾಡುತ್ತದೆಯಾದರೂ ಆಗುವುದಿಲ್ಲ. ಮೀನು ಕೂಡಾ ಕೊಕ್ಕರೆಯ ಕೊಕ್ಕನ್ನೇ ಕಚ್ಚಿ ಹಿಡಿಯುತ್ತದೆ‌. ಆದರೆ ಕೊಕ್ಕರೆ ಮೂರ್ನಾಲ್ಕು ಪ್ರಯತ್ನಗಳ ನಂತರ ತನ್ನ ಕೊಕ್ಕು ಹಿಡಿದ ಮೀನನ್ನು ಹೊಂಡದಿಂದ ಎಳೆದು ಹೊರ ತರುತ್ತದೆ.

ವಿಡಿಯೋ ನೋಡಿ..

ಸ್ವಲ್ಪ ಹೊತ್ತು ಕೊಕ್ಕರೆಯ ಕೊಕ್ಕನ್ನು ಹಿಡಿದು ಹೋರಾಟ ಮಾಡಿದ ಮೀನು ಕೊನೆಗೆ ನೀರಿನಿಂದ ಹೊರ ಬಂದ ಕಾರಣ ಏನೂ ಮಾಡಲಾರದೆ ತನ್ನ ಹಿಡಿತ ಬಿಟ್ಟು ನೆಲದ ಮೇಲೆ ಬಿದ್ದು ಸಾ ಯುತ್ತದೆ‌. ಈ ವೀಡಿಯೋ ಕ್ಷಣಕ್ಷಕ್ಕೂ ಕುತೂಹಲ ಕೆರಳಿಸುವಂತೆ ಇದೆ. ಇದನ್ನು ನೋಡಿದ ನೆಟ್ಟಿಗರು ಇದು ಎಲ್ಲಾ ಸೆಟಪ್, ನಕಲಿ ವೀಡಿಯೋ, ವೀಡಿಯೋ ಗಾಗಿ ಪ್ರಾಣಿಗಳಿಗೆ ತೊಂದರೆ ಕೊಟ್ಟಿದ್ದಾರೆ. ಆ ಹೊಂಡದ ಇನ್ನೊಂದು ಬದಿಯಿಂದ ಯಾರೋ ಮೀನನ್ನು ಹೊರಗೆ ನೂಕುತ್ತಿದ್ದಾರೆ ಎಂದೆಲ್ಲಾ ಅಸ ಮಾಧಾನ ಹೊರ ಹಾಕಿದ್ದಾರೆ‌. ಅನೇಕರು ತಮ್ಮ ಅ ತೃಪ್ತಿಯನ್ನು ಸೂಚಿಸಿದ್ದಾರೆ. ಆದರೆ ವೀಡಿಯೋ ಮಾತ್ರ ವೈರಲ್ ಆಗಿದೆ.