ಶಾಹರೂಖ್ ಖಾನ್ ಒಂದು ವರ್ಷಕ್ಕೆ ಮಾಡುವ ಸಂಪಾದನೆ ಎಷ್ಟು ಗೊತ್ತಾ? ಅಚ್ಚರಿ ಪಡುವಿರಿ!

ಮಧ್ಯಮ ವರ್ಗದ ಕುಟುಂಬದಿಂದ ಮೇಲೆಬಂದು ಬಾಲಿವುಡ್ನಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದ ರೊಮೆಂಟಿಕ್ ಹೀರೋ ಶಾರುಖ್ ಖಾನ್ ಇಂದು ಯಶಸ್ವಿ ನಾಯಕರಾಗಿ ಮೆರೆಯುತ್ತಿದ್ದಾರೆ. ತಮ್ಮ ಅಭಿನಯದ ಜೋರಿನಿಂದ ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಶಾರುಖ್ ಖಾನ್ ಅವರು ಉಚ್ಚ ದರ್ಜೆಯ ಜೀವನಶೈಲಿಯನ್ನು ಇಷ್ಟ ಪಡುತ್ತಾರೆ. ಹೀಗಾಗಿ ಅವರ ಸೆಳೆತ ಪ್ರತಿಯೊಂದು ಸೌಲಭ್ಯದಿಂದ ಸುಸಜ್ಜಿತವಾದ ದುಬಾರಿಯಾದ ಮನೆ ಮತ್ತು ದುಬಾರಿಯಾದ ಕಾರುಗಳ ಕಡೆಗೆ ಹೆಚ್ಚು ಗಮನವಿರುತ್ತದೆ. ಈ ಮೇಲಿನ ಕಾರಣಗಳಿಂದಾಗಿ ಅವರ ಕಡೆಗೆ ಅನೇಕ ಕಂಪನಿಗಳ ದುಬಾರಿ ಬೆಲೆ ಹೊಂದಿರುವ ಕಾರುಗಳಿವೆ. ಇದರ ಜೊತೆಗೆ ಮುಂಬೈ, ದುಬೈ, ಹಾಗೂ ಲಂಡನ್ನಲ್ಲಿ ರಿಯಲ್ ಎಸ್ಟೇಟ್ ಹೊಂದಿದ್ದಾರೆ.

ಶಾರುಖ್ ಖಾನ್ ಅವರಿಗೆ ಭಾರತದ ಕೆಲವೇ ಯಶಸ್ವಿ ನಾಯಕರುಗಳಲ್ಲಿ ಗಣನೆ ಮಾಡಲಾಗುತ್ತದೆ. ಅವರು ರೆಡ್ ಚಿಲಿ ಎಂಟರ್ಟೈನ್ಮೆಂಟ್ ಮತ್ತು ಡ್ರೀಮ್ಸ್ ಅನ್ಲಿಮಿಟೆಡ್ ಈ ಎರಡು ಸ್ವಂತದ ಕಂಪನಿಗಳನ್ನು ಹೊಂದಿದ್ದಾರೆ. ಮತ್ತು ಐಪಿಎಲ್ ನಲ್ಲಿ ಜೂಹಿ ಚಾವ್ಲಾ ಹಾಗೂ ಜೈ ಮೆಹತಾ ಇವರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸಹಭಾಗಿತ್ವವನ್ನು ಹೊಂದಿದ್ದಾರೆ.

ಇವರ ಬಗ್ಗೆ ಇನ್ನು ವಿಶೇಷ ಹೇಳಬೇಕಾದರೆ, ಹಾಲಿವುಡ್ ಮತ್ತು ಬಾಲಿವುಡ್ ಈ ಎರಡು ಚಿತ್ರರಂಗಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶಾರುಖ್ ಅವರು ಹಾಲಿವುಡ್ ನ ಟಾಮ್ ಕ್ರೂಸ್, ಟಾಮ್ ಹ್ಯಾಕ್ಸ್ ಮತ್ತು ಕ್ಲಿಂಟ್ ಎಸ್ಟ್ ವುಡ್ ಗಿಂತಲೂ ಶ್ರೀಮಂತರಾಗಿದ್ದಾರೆ. ಇವರು ತಮ್ಮ ಅಭಿನಯದ ಜೊತೆಗೆ ಚಿತ್ರರಂಗದಲ್ಲಿ ಒಳ್ಳೆಯ ಸೂತ್ರ ಸಂಚಲನಕ್ಕಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಜೊತೆಗೆ ಕೆಲವು ಸಾಮಾಜಿಕ ಜವಾಬ್ದಾರಿಗಳನ್ನು ಸಹಿತ ನಿರ್ವಹಿಸುತ್ತಾರೆ.

ಇಂಥ ಕಿಂಗ್ ಖಾನ್ ಶಾರುಖ್ ಅವರ ನೆಟ್ವರ್ಥ 800 ಮಿಲಿಯನ್ ಡಾಲರ್ ಇದೆ. ಇವರ ವಾರ್ಷಿಕ ಆದಾಯ ಸುಮಾರು 38 ಮಿಲಿಯನ್ ಡಾಲರ್ ದಷ್ಟು ಆಗುತ್ತದೆ. ಸದ್ಯ ಶಾರುಖ್ ಅವರು ಚಲನಚಿತ್ರರಂಗದಲ್ಲಿ ಮೊದಲಿನಷ್ಟು ಆಕ್ಟಿವ್ ಆಗಿಲ್ಲ. ಆದರೂ ಸಹಿತ ಅವರು ಅಭಿನಯಿಸುವ ಪ್ರತಿ ಚಿತ್ರಕ್ಕೆ 50 ಅಥವಾ 60 ಕೋಟಿ ರೂಪಾಯಿಗಳಷ್ಟು ಫೀಸ್ ತೆಗೆದುಕೊಳ್ಳುತ್ತಾರೆ. ಇದೆಲ್ಲದರ ಹೊರತಾಗಿ ಅನೇಕ ದೊಡ್ಡ ದೊಡ್ಡ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಕಂಪನಿಗಳಿಂದಲೂ ಸಾಕಷ್ಟು ಹಣ ಬರುತ್ತದೆ.

ಇವರ ಗಳಿಕೆಯ ಮುಖ್ಯ ಮಾರ್ಗ ಚಲನಚಿತ್ರವಾಗಿದೆ. ವಾಹನಗಳ ವಿಷಯಕ್ಕೆ ಬಂದಾಗ ಇವರ ಹತ್ತಿರ 12 ಕೋಟಿ ರೂಪಾಯಿಗಳ ಬುಗಾಟಿ ಕಾರು ಇದೆ. ಇದರ ಹೊರತಾಗಿ ಇನ್ನಿತರ ದುಬಾರಿ ಕಾರುಗಳಾದ ಬಿಎಂಡಬ್ಲ್ಯೂ 7 ಸೀರೀಸ್, ಬಿ ಎಂ ಡಬ್ಲ್ಯೂ 6 ಸೀರೀಸ್, ಮಿತ್ಸುಬಿಷಿ ಪಾಜೇರೋ, ಆಡಿ Ā ಸಿಕ್ಸ್, ಲ್ಯಾಂಡ್ ಕ್ರೂಸರ್, ರೋಲ್ಸ್ ರಾಯಲ್ ಡ್ರಾಪ್ ಹೆಡ್ ಕೂಪ್ ನಂತಹ ಗಾಡಿಗಳನ್ನು ಹೊಂದಿದ್ದಾರೆ.