ಒಂದು ಸಮಯದಲ್ಲಿ ಮ್ಯಾಗಿ ತಿಂದು ದಿನಗಳನ್ನು ದೂಡಿದ ಈ ಕ್ರಿಕೆಟರ್ ನ ಕೈಯಲ್ಲಿ ಈಗ ಒಂದು ಕೋಟಿ ರೂಪಾಯಿಯ ಗಡಿಯಾರವಿದೆ.

ಯಾರ ಅದೃಷ್ಟ ಯಾವಾಗ ಬದಲಾಗುತ್ತದೆ ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ಅದೃಷ್ಟವು ತನ್ನಂತಾನೇ ಎಂದು ಬದಲಾಗುವುದಿಲ್ಲ. ಅದಕ್ಕೆ ಪ್ರಯತ್ನದ ಜೊತೆಯು ಸಹಿತ ಬೇಕೇ ಬೇಕು.

ಯಾರ ಅದೃಷ್ಟದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ವಿಚಾರ ಮಾಡುತ್ತಿದ್ದೀರಾ. ಹಾಗಾದರೆ ಹೇಳುತ್ತೇವೆ ನೋಡಿ. ಅದೃಷ್ಟ ಮತ್ತು ಯಶಸ್ಸಿಗಾಗಿ ಮಾಡಿದ ಹೋರಾಟ ಅಥವಾ ಪ್ರಯತ್ನದ ಒಳ್ಳೆಯ ಉದಾಹರಣೆಯೆಂದರೆ ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿಯ ಪ್ರಮುಖ ಆಟಗಾರರಾದ ಪಾಂಡ್ಯ ಬ್ರದರ್ಸ್ ಗಳು.

ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಬ್ರದರ್ಸ್ ಗಳು ತುಂಬಾ ಪ್ರತಿಕೂಲ ಪರಿಸ್ಥಿತಿಯಲ್ಲಿ ಬೆಳೆದು ದೊಡ್ಡವರಾದ ಸಹೋದರರು. ಈ ಇಬ್ಬರ ಕಡೆಗೆ ಎರಡು ಹೊತ್ತಿನ ಊಟ ಮಾಡಲು ಬೇಕಾಗುವ ಹಣವೂ ಇರುತ್ತಿರಲಿಲ್ಲ. ಹಸಿವಾದ ಸಮಯದಲ್ಲಿ ಎಷ್ಟೋ ಬಾರಿ ಅಂಗಡಿಯಲ್ಲಿ ಐದು ರೂಪಾಯಿಗೆ ಸಿಗುವ ಮ್ಯಾಗಿ ಯನ್ನು ತಿಂದು ದಿನಗಳನ್ನು ದೂರಿದ್ದಾರೆ.

2016 ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಈ ವೃತ್ತ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಜೀವನದ ಭೂತಕಾಲದ ಅನೇಕ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಹೀಗೂ ಹೇಳಿದ್ದುಂಟು, ಆ ಸಮಯದಲ್ಲಿ ದೊರೆಯುತ್ತಿರುವ 5 ರೂಪಾಯಿಯ ಮ್ಯಾಗಿಯು ಅವರಿಗೆ ಊಟ ಮತ್ತು ಉಪಹಾರ ಎಲ್ಲವೂ ಅದೇ ಆಗಿತ್ತಂತೆ. ಈ ದಿನಚರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಒಂದೇ ರೀತಿಯಲ್ಲಿ ವರ್ಷಪೂರ್ತಿ ಅಂದರೆ 365 ದಿವಸಗಳವರೆಗೆ ನಡೆದೇ ಇರುತ್ತಿತ್ತಂತೆ. ಆ ಸಂದರ್ಶನದಲ್ಲಿ ಹೇಳಿದ ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಇಬ್ಬರು ಸಹೋದರರು ದಿನಪೂರ್ತಿ ಆಟದ ಮೈದಾನದಲ್ಲಿ ಬಿದ್ದುಕೊಂಡಿರುತ್ತಿದ್ದರು. ಇದಕ್ಕೆ ಕಾರಣ ಹೊರಗೆ ಅನೇಕ ಜನರಿಂದ ಎರವಲು ಹಣವನ್ನು ಪಡೆದುಕೊಂಡಿದ್ದರು. ಆಗ 10 ರೂಪಾಯಿಗಳನ್ನು ಬಿಡಿ 5 ರೂಪಾಯಿಗಳು ಸಿಕ್ಕರೂ ನಮಗೆ ತುಂಬಾ ಖುಷಿಯಾಗುತ್ತಿತ್ತು. ಹಾರ್ದಿಕ್ ಪಾಂಡ್ಯ ಅವರು ಹೇಳುವ ಪ್ರಕಾರ, ಇವರು ತುಂಬಾ ಸಾಲ ಮಾಡಿಕೊಂಡಿದ್ದರಂತೆ. ಇವರ ಗಳಿಸುವ ಹಣ ಆಗ ಸಾಲ ಕೊಡಲು ಸಹಿತ ಕಡಿಮೆ ಬೀಳುತ್ತಿತ್ತು.

ಆದರೆ ಪ್ರಯತ್ನ ಮತ್ತು ಅದೃಷ್ಟದ ಬಲದಿಂದ ಹಣ ಈಗ ಇವರ ಕೈಯಲ್ಲಿ ಆಡುತ್ತಿದೆ. ಸದ್ಯ ಹಾರ್ದಿಕ್ ಪಾಂಡ್ಯ ಅವರು ತಮ್ಮ ಕೈಯಲ್ಲಿ ಒಂದು ಕೋಟಿ ರೂಪಾಯಿಯ ರೋಲೆಕ್ಸ್ ಕಂಪನಿಯ ಗಡಿಯಾರವಿದೆ. ಐಷಾರಾಮಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳಿಂದ ಪರೀಪೂರ್ಣರಾಗಿದ್ದಾರೆ. 11 ಅಕ್ಟೋಬರ್ ಇದು ಹಾರ್ದಿಕ್ ಪಾಂಡ್ಯ ಅವರ ಜನ್ಮದಿನವಾಗಿತ್ತು.

ಈ ಸಮಯದಲ್ಲಿ ಅಣ್ಣನಾದ ಕೃನಾಲ್ ಪಾಂಡ್ಯ ತಮ್ಮನಾದ ಹಾರ್ದಿಕನಿಗೆ ಶುಭಾಶಯಗಳನ್ನು ಕೋರುತ್ತಾ ಒಂದು ವಿಡಿಯೋವನ್ನು ಶೇರ್ ಮಾಡಿ ಹೀಗೆ ಬರೆದಿದ್ದಾರೆ. ಮೈದಾನದಲ್ಲಿಯೂ ಮತ್ತು ಮೈದಾನದ ಹೊರಗೆ ಎಲ್ಲಿಯೂ ನಾನು ಯಾವಾಗಲೂ ನಿನ್ನ ಜೊತೆಯಲ್ಲಿಯೇ ಇರುತ್ತೇನೆ, ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿಯೂ… ಯಾವತ್ತು ನಿನ್ನೋಡಗೂಡಿಯೇ ಇರುತ್ತೇನೆ ನನ್ನ ಚಿಕ್ಕ ತಮ್ಮ, ನಿನಗೆ ಹುಟ್ಟುಹಬ್ಬದ ಶುಭಾಶಯಗಳು.