OMG! ನೀರಿನಲ್ಲಿ ಈಜುತ್ತಿರುವ ಮೊಸಳೆಯ ಬೆನ್ನ ಮೇಲೆ ಕುಳಿತು ಸವಾರಿ ಮಾಡುತ್ತಿರುವ ಆಮೆ; ಫನ್ನಿ ಪ್ರತಿಕ್ರಿಯೆ ನೀಡಿದ ನೆಟ್ಟಿಗರು! ನೋಡಿ ಈ Viral Video

ಜಗತ್ತು ಒಂದು ವಿಸ್ಮಯಗಳ ಆಗರ ಅಲ್ಲವೇ ಸ್ನೇಹಿತರೇ, ಅದರಲ್ಲೂ ಜೀವ ಜಗತ್ತಿನ ವೈವಿದ್ಯತೆಯನ್ನು ನಾವು ಅರ್ಥ ಮಾಡಿಕೊಂಡಷ್ಟು ಹೊಸದು ಎನಿಸತೊಡಗುತ್ತದೆ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ನಗರ, ಪಟ್ಟಣಗಳ ಮಾಲಿನ್ಯದ ಒಳಗೆ ಕಳೆದು ಹೋಗಿರುವ ನಮಗೆ ಹಸಿರಿನ ಸಿರಿಯಿಂದ ಹೊಳೆಯುವ ವನಸಿರಿಯ ಮಡಿಲಲ್ಲಿ ನಲಿಯುವ ಜೀವ ಜಂತುಗಳ ಪರಿಚಯವೇ ಇಲ್ಲ. ನಗರ ಜೀವನ ಬೆಳೆದಂತೆ ಅರಣ್ಯಗಳ ಸಂಖ್ಯೆ ಕೂಡಾ ಕಡಿಮೆಯಾಗಿರುವುದು ಮಾತ್ರವಲ್ಲದೇ ವನ್ಯ ಜೀವಿಗಳು ಕೂಡಾ ಅಳಿವಿನತ್ತ ಸಾಗುತ್ತಲಿವೆ. ಆದ್ದರಿಂದಲೇ ಇಂದಿನ ಪೀಳಿಗೆಗೆ ಇಂತಹ ಪ್ರಾಣಿಗಳನ್ನು ನಾವು ವೀಡಿಯೋಗಳಲ್ಲಿ ಅಥವಾ ಟಿವಿ ವಾಹಿನಿಗಳಲ್ಲಿ ನೋಡುವಂತಾಗಿದೆ.

ಅದಕ್ಕೆ ಅಂತಹ ವಿಸ್ಮಯಗಳನ್ನು ಅಥವಾ ವಿಶೇಷಗಳನ್ನು ಹೊಂದಿರುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಾಗ ಅವು ಕೆಲವೇ ದಿನಗಳಲ್ಲಿ ವೈರಲ್ ಆಗುವುದು ಕೂಡಾ ಉಂಟು‌. ಈಗ ವೈರಲ್ ಆಗಿರುವಂತಹ ಒಂದು ವೀಡಿಯೋ ನಿಜಕ್ಕೂ ಒಂದು ವಿಶೇಷ ಮಾತ್ರವಲ್ಲ ಅಪರೂಪದ ವೀಡಿಯೋ ಎಂದೇ ಕರೆಯಬಹುದಾದ ವೀಡಿಯೋ ಆಗಿದೆ. ಇದರಲ್ಲಿ ನಾವು ಎರಡು ಜೀವಿಗಳ ನಡುವಿನ ವಿಶೇಷವಾದ, ಅಸಾಮಾನ್ಯ ಎನಿಸುವ ಬಂಧವೊಂದು ನಾವು ನೋಡಬಹುದಾಗಿದೆ‌. ಈ ಅಪರೂಪದ ವೀಡಿಯೋಗೆ
ಅನೇಕ ಮೆಚ್ಚುಗೆಗಳು ಹಾಗೂ ಪ್ರತಿಕ್ರಿಯೆಗಳು ಕೂಡಾ ಹರಿದು ಬರುತ್ತಿವೆ.

ವೈರಲ್ ಆಗಿರುವ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರು ಅದಕ್ಕೆ ಅಂದವಾದ ಕ್ಯಾಪ್ಷನ್ ನೀಡುತ್ತಾ ಗೇಟರ್ (ಆ್ಯಲಿಗೇಟರ್) ಟ್ಯಾಕ್ಸಿ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಯಾವುದೋ ಪ್ರಾಣಿಸಂಗ್ರಹಾಲಯವೊಂದರ ಕೊಳದಲ್ಲಿ ಒಂದು ಮೊಸಳೆ ಹಾಗೂ ಒಂದು ಆಮೆಯನ್ನು ನೋಡಬಹುದು. ಇದರಲ್ಲೇನಿದೆ ವಿಶೇಷ ನಾವು ಆಮೆ ಹಾಗೂ ಮೊಸಳೆ ನೋಡಿಲ್ವ ಅನ್ನಬೇಡಿ. ಅಲ್ಲೇ ಇದೆ ವಿಶೇಷ‌. ಆ ವಿಶೇಷ ಏನೆಂದರೆ ನೀರಿನಲ್ಲಿ ಈಜ್ತಾ ಇರೋ ಮೊಸಳೆಯ ಬೆನ್ನ ಮೇಲೆ ಕುಳಿತು ಆಮೆ ಸವಾರಿ ಮಾಡಿದೆ.

ಹೌದು ಈ ವೀಡಿಯೋದಲ್ಲಿ ಆಮೆ ಯಾವುದೇ ಭ ಯ ಅಥವಾ ಅಂ ಜಿಕೆ ಇಲ್ಲದ ಹಾಗೆ ಆಮೆಯ ಬೆನ್ನ ಮೇಲೆ ಕುಳಿತಿದ್ದು, ನೀರಿನಲ್ಲಿ ಮೊಸಳೆಯ ಮೇಲೆ ಸವಾರಿ ಹೊರಟಂತೆ ಇದೆ‌. ಮೊಸಳೆಗೆ ಕೂಡಾ ಆಮೆ ಕುಳಿತಿರುವುದು ಸಮಸ್ಯೆ ಎನಿಸಿಲ್ಲವೇನೋ ಎನ್ನುವಂತೆ ಅದು ತನ್ನ ಪಾಡಿಗೆ ತಾನು ಮುಂದಕ್ಕೆ ಸಾಗಿ ಹೋಗಿದೆ‌. ಮೊಸಳೆ ಮುಂದೆ ಹೋದರೆ ಅದರ ಮೇಲೆ ಕುಳಿತು ಆಮೆ ಒಂದು ಆಹ್ಲಾದಕರ ರೈಡ್ ನ ಆನಂದವನ್ನು ಅನುಭವಿಸುತ್ತಾ ಸಾಗುತ್ತಿದೆ ಎನ್ನುವಂತೆ ಕಂಡಿದ್ದು, ನೋಡುಗರ ಗಮನ ಸೆಳೆದು ಅವರ ಮೆಚ್ಚುಗೆಯನ್ನು ಗಳಿಸುವುದರಲ್ಲಿ ಯಶಸ್ವಿ ಆಗಿದೆ‌.

ವಿಡಿಯೋ ನೋಡಿ

ಇಂದು ಶೇರ್ ಆಗಿರುವ ಈ ವೀಡಿಯೋವನ್ನು 31 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ ಎಂದರೆ ಅದರ ಆಕರ್ಷಣೆ ಹೇಗಿದೆ ಎಂದು ತಿಳಿಯುತ್ತದೆ. ಸಾವಿರದ ಹತ್ತಿರಕ್ಕೆ ಲೈಕ್ಸ್ ಗಳು ಬರುತ್ತಿವೆ. ವೀಡಿಯೋ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು ಮೃಗಾಲಯದಲ್ಲಿ ಜನ ಹೆಚ್ಚಿದ್ದಾರೆ ಎಂದು ಬಹುಶಃ ಆಮೆ ಜನರಿಗಿಂತ ಮೊಸಳೆ ಸೇಫ್ ಅಂತ ಭಾವಿಸಿದ ಹಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಗಟ್ಟಿಯಾದ ಅಥವಾ ಒರಟು ಚರ್ಮದ ಪ್ರಾಣಿಗಳಿಗೆ ಮಾತ್ರವೇ ಈ ಟ್ಯಾಕ್ಸಿ ಲಭ್ಯ ಎಂದು ಮತ್ತೊಬ್ಬರು ಅವರು ಹೇಳಿದ್ದಾರೆ. ಕೆಲವರು ಮೊಸಳೆ ಆಮೆಯನ್ನು ತಿನ್ನುತ್ತದೆ ಎಂದು ಗೊತ್ತಿತ್ತು ಇಲ್ಲಿ ವಿಚಿತ್ರ ನಡೆದಿದೆ ಎಂದಿದ್ದಾರೆ.