ತನ್ನ ದೇಹದ ಅರ್ಧ ಭಾಗ ಕಳೆದುಕೊಂಡರೂ ಇನ್ನುಳಿದ ಅರ್ಧ ಭಾಗದ ಸಹಾಯದಿಂದ ಬದುಕುತ್ತಿರುವ ಮಿಲಿಪೀಡ್! ‘ಜೀವನ ಸಾಕಾಗಿದೆ’ ಎನ್ನುವವರು ಈ video ಒಮ್ಮೆ ನೋಡಬೇಕು ಎಂದ ನೆಟ್ಟಿಗರು!
ಜೀವನ ಎನ್ನುವುದು ಹೂವಿನ ಹಾದಿ ಎಂಬುದು ಕೆಲವರಿಗೆ ಮಾತ್ರವೇ. ಆದರೆ ಆ ಜೀವನ ನೀರಸ ಏಕೆಂದರೆ ಅವರು ಅವರ ಪೂರ್ವಜರು ಮಾಡಿಕೊಟ್ಟ ಆಸ್ತಿ, ಐಶ್ವರ್ಯ ಗಳನ್ನು ಅನುಭವಿಸುತ್ತಾ ಇರುತ್ತಾರೆ. ಆದರೆ ಅಸಂಖ್ಯಾತ ಜನರಿಗೆ ಜೀವನ ಒಂದು ಸವಾಲು, ಜೀವನ ಎಂದರೆ ಅದೊಂದು ಸಾಧನೆ ಹಾಗೂ ಜೀವನ ಎಂದರೆ ಅದೊಂದು ಸಾಹಸ ಎಂದು ಕೂಡಾ ಹೇಳಬಹುದು. ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ನಿಂತವರು ಯಶಸ್ಸಿನ ಕಡೆ ಸಾಗಿದರೆ, ಕೈಲಾಗದು ಎಂದು ಕೈ ಚೆಲ್ಲಿ ಕುಳಿತವರು ಮಾತ್ರ ಮುಂದಡಿ ಇಡಲಾರದೆ ಜೀವನದ ಮೇಲೆ ಜಿಗುಪ್ಸೆ ಹೊಂದಿ ಜೀವನದ ಬಗ್ಗೆ ಆಸಕ್ತಿ ಕಳೆದುಕೊಂಡು ಸುಂದರವಾದ ಜೀವನವನ್ನು ತಮ್ಮ ಕೈಯ್ಯಾರೆ ತಾವೇ ಹಾಳು ಮಾಡಿಕೊಳ್ಳುತ್ತಾರೆ. ಆದರೆ ಇದು ನಿಜಕ್ಕೂ ಸಾಧಕನ ಲಕ್ಷಣ ಅಲ್ಲ ಎನ್ನುವುದು ಕೂಡಾ ವಾಸ್ತವ.
ಜೀವನದ ಮೇಲೆ ಜಿಗುಪ್ಸೆ ಮೂಡಿದಾಗ ಒಮ್ಮೆ ನಾವು ನಮ್ಮ ಸುತ್ತ ನೋಡಿದಾಗ ಅದೆಷ್ಟೋ ಸ್ಪೂರ್ತಿಯ ಕಥೆಗಳ, ಪ್ರೇರಣಾತ್ಮಕ ವ್ಯಕ್ತಿಗಳು, ಸಂ ಕಷ್ಟವನ್ನು ಕೂಡಾ ಎದುರಿಸಿ ಜೀವನ ನಡೆಸುತ್ತಿರುವವರ ಉದಾಹರಣೆಗಳು ಅನೇಕ ಸಿಗುತ್ತವೆ. ಆದರೆ ಅದನ್ನು ಗಮನಿಸುವ ತಾಳ್ಮೆ ನಮಗೆ ಇರಬೇಕಷ್ಟೇ. ದೈ ಹಿ ಕ ಸಮಸ್ಯೆ ಇರುವವರು, ವಿಶೇಷ ಚೇತನರು ಕೂಡಾ ಇಂದು ಮಹಾದ್ಭುತಗಳನ್ನು ಸೃಷ್ಟಿಸಿರುವಾಗ ನಮಗೇಕೆ ಸಾಧ್ಯವಿಲ್ಲ ಎನ್ನುವ ನವ ಚೈತನ್ಯ ನಮ್ಮಲ್ಲಿ ಮೂಡಬೇಕಿದೆ. ಹಾಗಾದರೆ ಮಾತ್ರವೇ ಜೀವನದ ಮೇಲೆ ನಂಬಿಕೆ, ಸ್ವಯಂ ಶಕ್ತಿಯ ಮೇಲೆ ವಿಶ್ವಾಸ ಎನ್ನುವುದು ಮೂಡಲು ಸಾಧ್ಯ.
ಸೋಶಿಯಲ್ ಮೀಡಿಯಾ ದಲ್ಲಿ ಒಂದು ಮಿಲಿಪೀಡ್ (ನಮ್ಮ ಜರಿ ಜಾತಿಗೆ ಸೇರಿದ ಜೀವಿ) ಒಂದರ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೀವನದ ಮೇಲೆ ಆಸೆಗಳನ್ನು ಕಳೆದುಕೊಂಡವರು, ಜೀವನ ನಮಗೆ ಸಾಕಾಗಿದೆ ಎನ್ನುವವರು, ಅಯ್ಯೋ ಸಮಸ್ಯೆಗಳನ್ನು ಎದುರಿಸಿ ಬದುಕುವುದು ಅಸಾಧ್ಯ ಎಂದು ನಿರ್ಧಾರ ಮಾಡಿದವರಿಗೆ ಈ ವೀಡಿಯೋ ಖಂಡಿತ ಒಂದು ಸ್ಪೂರ್ತಿಯನ್ನು ನೀಡುತ್ತದೆ ಎಂದು ಹೇಳಬಹುದು. ಜೀವನವನ್ನು ನಡೆಸಲೇಬೇಕು ಎಂದು ತೀರ್ಮಾನ ಮಾಡಿದರೆ, ಎಂತಹ ಸಮಸ್ಯೆ ಎದುರಾದರೂ ಧೈರ್ಯವಾಗಿ ನಿಲ್ಲುವೆ ಎನ್ನುವ ದೃಢ ನಿರ್ಧಾರ ಮಾಡಿದರೆ ಬದುಕು ಕಷ್ಟವಲ್ಲ ಎಂದು ಸಾರಿ ಹೇಳುವಂತಿದೆ ಈ ವೀಡಿಯೋ.
ವೈರಲ್ ಆಗಿರುವ ವೀಡಿಯೋದಲ್ಲಿ ಮಿಲಿಪ್ಪೀಡ್ ನ ದೇಹದ ಹಿಂಭಾಗ ಬಹುತೇಕ ನಷ್ಟವಾಗಿ ಹೋಗಿದೆ. ಮುಂದಿನ ಭಾಗ ಮಾತ್ರ ಇನ್ನೂ ಮಾಮೂಲಾಗಿ ಇದೆ.
ಅರ್ಧ ದೇಹವೇ ಇಲ್ಲವಾದರೂ, ತನ್ನ ಒಣಗಿ ಹೋದ ಕರುಳುಗಳನ್ನು ಎಳೆದುಕೊಂಡು ಇನ್ನೂ ಜೀವಂತವಾಗಿರುವ ಮಿಲಿಪೀಡ್ ತನ್ನ ನಿ ಶ್ಚೇನತವಾಗಿರುವ ದೇಹದ ಹಿಂಭಾಗವನ್ನು ಎಳೆದುಕೊಂಡು ಮುಂದೆ ಹೋಗುವುದನ್ನು ನಾವು ನೋಡಬಹುದು. ಜೀವ ಅರ್ಧವಾದರೂ ಕೂಡಾ ಬದುಕುವ ಅದರ ಛಲ ನಿಜಕ್ಕೂ ಅದ್ಭುತ ಎನಿಸದೇ ಇರಲಾರದು. ಈ ವೀಡಿಯೋ ಜನರ ಗಮನವನ್ನು ಬಹಳವಾಗಿ ಸೆಳೆಯುತ್ತಿದೆ.
ವಿಡಿಯೋ ನೋಡಿ.
Millipede with half body missing and dried entrails dragging behind, still alive and moving pic.twitter.com/Z5RTipcmFH
— Nature is Scary (@NatureisScary) October 11, 2020
ಈಗಾಗಲೇ 1.5 ಲಕ್ಷ ಜನರಿಂದ ಈ ವೀಡಿಯೋ ವೀಕ್ಷಣೆ ಮಾಡಲ್ಪಟ್ಟಿದ್ದು, ಮೂರು ಸಾವಿರಕ್ಕೂ ಅಧಿಕ ಜನರು ಇಷ್ಟಪಟ್ಟಿದ್ದು, ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ವೀಡಿಯೋ ನೋಡಿ ನೂರಾರು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಕೆಲವರು ಅದರ ದೇಹ ಮತ್ತೆ ಸರಿಯಾಗುತ್ತದೆ ಎಂದು ವೈಜ್ಞಾನಿಕ ಕಾರಣಗಳನ್ನು ವಿವರಿಸಿದ್ದರೆ, ಕೆಲವರು ಮಿಲಿಪೀಡ್ ಅನ್ನು ಒಬ್ಬ ಯೋಧನೆಂದು, ಅದರ ಸಾಹಸವನ್ನು ಮೆಚ್ಚಲೇಬೇಕೆಂದು, ಅದರ ಈ ರೂಪ ನೋಡಿ ಆಶ್ಚರ್ಯ ಎನಿಸಿದೆ ಎಂದೂ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.