ಕ್ರೂರ ಅಂದ್ರೇನೇ ಕಿಮ್ ಜಾಂಗ್ ಉನ್!! ಅಬ್ಬಾ! ತನ್ನ ಸ್ವಂತ ಚಿಕ್ಕಪ್ಪನಿಗೆ ಕೊಟ್ಟ ಮರಣದಂಡನೆ ಎಂಥದ್ದು ಗೊತ್ತಾ?

 

ಉತ್ತರ ಕೊರಿಯಾದ ಕ್ರೂರಿ ಸರ್ವಾಧಿಕಾರಿ ದರ್ಪ ಅಧಿಕಾರಿಯಂದೇ ಜಗತ್ತಿಗೆ ಕುಪರಿಚಿತನಾದ ಕಿಮ್ ಜಾಂಗ್ ಉನ್ ತನ್ನ ವಿಚಿತ್ರ ಸ್ವಭಾವದಿಂದಾಗಿ ಯಾವತ್ತೂ ಇಡೀ ಜಗತ್ತಿನಲ್ಲೇ ಚರ್ಚೆಗೆ ಕಾರಣನಾಗಿದ್ದಾನೆ. ಆತ ಇಲ್ಲಿಯವರೆಗೆ ಕ್ರೂರತೆಯ ಅನೇಕ ಕಾರಣಗಳಿಂದ ಸಮಾಜಮಾಧ್ಯಮಗಳಲ್ಲಿ ಆತಂಕಗಳಿಂದ ಸುದ್ದಿಯಾಗಿದ್ದಾನೆ. ಆದ್ರೆ ಸ್ವಂತ ಚಿಕ್ಕಪ್ಪನಿಗೂ ಸಹಿತ ಬಿಡದೆ ಕೊಲೆ ಮಾಡಿದ ರೀತಿ ಕೇಳಿದರೆ ನಮ್ಮ ಕಿವಿಗಳೂ ವಿಶ್ವಾಸವಿಡುವದಿಲ್ಲ.

ಉತ್ತರ ಕೊರಿಯಾದ ಎರಡನೆಯ ಪ್ರಭಾವಿ ರಾಜಕೀಯ ವ್ಯಕ್ತಿ ಅಂತಲೇ ಜಾಂಗ್ ಸೊಂಗ್ ಥಾಏಕ್ (ಕಿಮ್ ನ ಕಕ್ಕ)ಅವರ ಛಾಪು ಮೂಡಿತ್ತು.ಮುಂದೆ ರಾಷ್ಟ್ರದ್ರೋಹ ಹಾಗೂ ಭ್ರಷ್ಟಾಚಾರದ ಆರೋಪದಡಿ 12 ಡಿಸೆಂಬರ್ ನಲ್ಲಿ ಆತನ ಹತ್ಯೆಗೈಯ್ಯಲಾಯಿತು.

ಕಿಮ್ ತನ್ನ ಕಕ್ಕನ ಕೊಲೆ ಮಾಡಲು ವಿಶೇಷ ತಯಾರಿಯನ್ನೇ ಮಾಡಿದ್ದ ಎಂದು ತಿಳಿದು ಬರುತ್ತದೆ.ಯಾಕೆಂದರೆ ಚಿಕ್ಕಪ್ಪನ ಕೊಲೆಗಾಗಿ ಒಟ್ಟು 120 ಶಿಕಾರಿಮಾಡುವ ನಾಯಿಗಳನ್ನು ಒಂದು ಪಂಜರದಲ್ಲಿ ಕೂಡಿಹಾಕಲಾಗಿತ್ತು. ನಂತರ ಜಾಂಗ್ ಥಾಏಕ್ ನನ್ನು ವಿವಸ್ತ್ರನನ್ನಾಗಿ ಮಾಡಿ ಆ ಪಂಜರದಲ್ಲಿ ಬಿಡಲಾಯಿತು.

ಇನ್ನು ವಿಚಿತ್ರವೇನೆಂದರೆ ಈ ಮೃತ್ಯುದಂಡಕ್ಕಾಗಿ ಬೇಟೆಯಾಡುವ ಆ ನಾಯಿಗಳನ್ನು 3 ದಿವಸಗಳವರೆಗೆ ಉಪವಾಸವಿಡಲಾಗಿತ್ತು. ಜಾಂಗ್ ಥಾಏಕ್ ಅವರ ನಿಕಟವರ್ತಿಯರಿಗೂ ಸಹಿತ ಇದೆ ರೀತಿಯ ಕ್ರೂರ ಶಿಕ್ಷೆ ವಿಧಿಸಲಾಯಿತು.ಇಷ್ಟೆಲ್ಲ ಶಿಕ್ಷೆ ವಿಧಿಸುವಾಗ ಕಿಮ್ ಜಾಂಗ್ ಸ್ವತಃ ಉಪಸ್ಥಿತನಿದ್ದ.

ನಾಯಿಗಳಿಗೆ ಉಪವಾಸವಿರಿಸಿ ಅವುಗಳಿಂದ ಮನುಷ್ಯರನ್ನು ಕೊಲ್ಲುವ ಶಿಕ್ಷೆಗೆ ಅಲ್ಲಿಯ ಸ್ಥಾನಿಕ ಭಾಷೆಯಲ್ಲಿ ಕ್ವಿನ್-ಜೆ ಅಂತ ಕರೆಯುತ್ತಾರೆ.ಕಿಮ್ ತನ್ನ ಪ್ರೇಯಸಿ ಮತ್ತು ಪ್ರಸಿದ್ಧ ಗಾಯಕಿಯಾದ ಹ್ಯೋನ್ ಸೊಂಗ್-ವೋಲ್ ಳಿಗೂ ಗುಂಡೇಟಿನ ಶಿಕ್ಷೆ ವಿಧಿಸಿದ್ದ.