OMG! ಪ್ರವಾಹ ಪರಿಸ್ಥಿತಿಯಲ್ಲಿ ಕಾರು ಪಾಸ್ ಮಾಡಲು ಹೋದ ವ್ಯಕ್ತಿ; ಆಕಸ್ಮಿಕವಾಗಿ ನೀರಿನ ಮಟ್ಟ ಹೆಚ್ಚಾದಾಗ ಏನಾಯಿತು ನೋಡಿ ಈ ಬೆಚ್ಚಿ ಬೀಳಿಸುವ Video
ಪ್ರವಾಹ ಪರಿಸ್ಥಿತಿಯಲ್ಲಿ ಕಾರು ಪಾಸ್ ಮಾಡಲು ನೋಡಿದ, ಆಕಸ್ಮಿಕವಾಗಿ ನೀರಿನ ಮಟ್ಟ ಹೆಚ್ಚಾದಾಗ ನೋಡಿ ಏನಾಯಿತು ಈ ವಿಡಿಯೋದಲ್ಲಿ…
ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಅನೇಕ ಭಾಗಗಳಲ್ಲಿ ಪ್ರವಾಹಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುಕಡಿಮೆ ಈ ಭಾಗದಲ್ಲಿ ಮೊದಲು ಈ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾಗಿರಲಿಲ್ಲ. ಈಗ ಇಲ್ಲಿ ಹರಿಯುವ ಅತಿ ಚಿಕ್ಕ ನದಿಗಳು ಕೂಡ ಅತಿವೃಷ್ಟಿಯಿಂದ ದೊಡ್ಡ ನದಿಗಳ ರೂಪವನ್ನು ಪಡೆದುಕೊಂಡು ಪ್ರವಾಹದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ. ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ದಕ್ಷಿಣಕ್ಕೆ ಇರುವ ಮತ್ತು ನಮ್ಮ ವಿಜಯಪುರ ಜಿಲ್ಲೆಗೆ ತಾಗಿಕೊಂಡಿರುವ ಸೊಲ್ಲಾಪುರ ಜಿಲ್ಲೆಯ ವಿಡಿಯೋ ಒಂದು ವೈರಲ್ ಆಗಿದೆ.
ಈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರವಾಹದ ನೀರು ತುಂಬಿ ಹರಿಯುತ್ತಿದೆ. ಆದರೆ ಒಬ್ಬ ಕಾರು ಚಾಲಕ ಅಲ್ಲಿಯ ಸ್ಥಾನಿಕ ಜನರ ಯಾರ ಮಾತನ್ನು ಕೇಳದೆ ಹಾಗೆ ತನ್ನ ಕಾರು ತೆಗೆದುಕೊಂಡು ಚಲಾಯಿಸುತ್ತಾ ನೀರು ದಾಟಬೇಕು ಎಂದಿದ್ದಾನೆ. ನೀರಿನಲ್ಲಿ ಹಾಗೆಯೇ ಹುಂಬತನದಿಂದ ಬಿಳಿ ಬಣ್ಣದ ಕಾರು ತೆಗೆದುಕೊಂಡು ಮುಂದೆ ಹೋದಾಗ ನೀರಿನ ಮಟ್ಟ ಹಾಗೆ ಹೆಚ್ಚುತ್ತಲೇ ಹೋಗಿದೆ. ಆಗ ಕಾರು ಡ್ರೈವರ್ ನ ಕಂಟ್ರೋಲಿಗೆ ಬರದೆ ನೀರಿನಲ್ಲಿ ಹರಿದು ಹೋಗಿದೆ. ಈ ದೃಶ್ಯದ ವಿಡಿಯೋವನ್ನು ಅಲ್ಲಿರುವ ಯಾರೋ ಒಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಈ ತರುಣನಿಗೆ ಅಲ್ಲಿಯ ಸ್ಥಾನಿಕರು ಕೈಗಳಿಂದ ಸಂದೇಶ ಮಾಡಿ ನೀರಿನಲ್ಲಿ ಹೋಗಬೇಡ ಎಂದು ಹೇಳಿದರೂ ಆತ ಕೇಳದೆ ಹಾಗೆಯೇ ಹೋಗಿದ್ದಾನೆ.
ವಿಡಿಯೋ ನೋಡಿ
खतरनाक! येऊ नको सांगत असतानाही ऐकलं नाही गाडी पुराच्या पाण्यातून पुढे आणली आणि…पुढे काय पाहा थरारक VIDEO pic.twitter.com/6GjJPcalPz
— News18Lokmat (@News18lokmat) October 15, 2020
ಈ ವಿಡಿಯೋದಲ್ಲಿ ಕಾರಿನ ಮೇಲಿನ ಡ್ರೈವರ್ ನ ಕಂಟ್ರೋಲ್ ತಪ್ಪಿದೆ. ಹೀಗಾಗಿ ಕಾರು ನೀರಿನ ಜೊತೆಗೆ ಹರಿದು ಹೋಗುವಾಗ ಡ್ರೈವರ್ ತನ್ನ ಜೀವ ಉಳಿಸಿಕೊಳ್ಳಲು ಬಡಿದಾಡುವ ದೃಶ್ಯ ಕಂಡುಬರುತ್ತಿದೆ.
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ.