ಅಬ್ಬಾ! ಮುಕೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರ ಮಕ್ಕಳು ವಿದೇಶದಲ್ಲಿ ಓದುತ್ತಾರೆ! ಅಷ್ಟಕ್ಕೂ ಮನೆಯಲ್ಲಿ ಕೆಲಸ ಮಾಡುವವರಿಗೆ ಅವರು ಕೊಡುವ ಸಂಬಳ ಎಷ್ಟು ಗೊತ್ತಾ?

ರಿಲಯನ್ಸ್ ಉದ್ಯಮದ ಒಡೆಯ ಮುಖೇಶ್ ಅಂಬಾನಿ ಯಾರಿಗೆ ತಿಳಿದಿಲ್ಲ ಹೇಳಿ, ಪ್ರಸ್ತುತ ಜಗತ್ತಿನ ಐದನೇ ಅತಿ ದೊಡ್ಡ ಶ್ರೀಮಂತ ಎನಿಸಿರುವ ಇವರು ಏಷ್ಯಾದಲ್ಲೇ ಅತಿ ದೊಡ್ಡ ಅಥವಾ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಏಷ್ಯಾದಲ್ಲಿ ಮುಖೇಶ್ ಅಂಬಾನಿ ಅವರ ಬಳಿ ಇರುವಷ್ಟು ಹಣ ಇನ್ಯಾರ ಬಳಿಯೂ ಕೂಡಾ ಇಲ್ಲ ಎಂಬುದು ವಾಸ್ತವ. ಅದಕ್ಕೇ ಅಲ್ಲವೇ ಅವರು ಏಷ್ಯಾದ ನಂಬರ್ ಒನ್ ಶ್ರೀಮಂತನ ಸ್ಥಾನದಲ್ಲಿರುವುದು. ಇದಲ್ಲದೇ ಇವರು ವಿಶ್ವದಲ್ಲೇ ಅತಿ ದುಬಾರಿಯಾದ ಮನೆಯಲ್ಲಿ ವಾಸಿಸುತ್ತಾರೆ. ಅವರ ಮನೆ ಸಕಲ ಸವಲತ್ತುಗಳನ್ನು ಹೊಂದಿರುವ ಐಶಾರಾಮೀ ಮನೆಯಾಗಿದ್ದು, ವಿಶ್ವದಲ್ಲೇ ಇಂತಹ ಮನೆ ಇನ್ನೊಂದಿಲ್ಲ ಎನ್ನಲಾಗಿದೆ.

ಆ್ಯಂಟೀಲಿಯಾ ಹೆಸರಿನ ಬಹು ಮಹಡಿ ಕಟ್ಟಡವಾದ ಅವರ ಮನೆ ಅತಿ ವೈಭವದಿಂದ ಕೂಡಿದೆ. ಇನ್ನು ಅಂಬಾನಿ ಕುಟುಂಬದ ಜೀವನ ಶೈಲಿ, ಅವರ ಹವ್ಯಾಸಗಳು ಕುರಿತಾಗಿ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇಂತಹ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಅಡುಗೆಯವರಿಗೆ ಎಷ್ಟು ಸಂಬಳ ಕೊಡಬಹುದು ಎನ್ನುವ ಊಹೆ ಏನಾದ್ರೂ ಮಾಡಬಲ್ಲಿರಾ? ಮಾಡುವುದಾದರೆ ಸರಿ ಮಾಡಿ ನೋಡಿ, ನಿಮ್ಮ ಊಹೆ ಹಾಗೂ ನಾವು ನೀಡುವ ವಿವರಗಳು ಹೊಂದಾಣಿಕೆ ಆಗುವುದೋ ಇಲ್ಲವೋ ಎಂದು ಕೂಡಾ ಒಮ್ಮೆ ಪರೀಕ್ಷಿಸಿ ನೋಡಿ. ಹಾಗಾದರೆ ಬನ್ನಿ ಆ ವಿಚಾರ ಅಂದ್ರೆ ಅವರ ಮನೆಯಲ್ಲಿ ಅಡುಗೆ ಮಾಡುವವರಿಗೆ ಸಿಗುವ ಸಂಬಳ ಎಷ್ಟು ಎಂದು ತಿಳಿಯೋಣ.

ಮತ್ತೊಂದು ವಿಶೇಷ ಒಂದಿದೆ. ಅದನ್ನು ತಿಳಿದ ಮೇಲೆ ಅದನ್ನು ಆಸಕ್ತಿಕರ ವಿಷಯ ಎನ್ನುವಿರೋ ಅಥವಾ ಆ ವಿಚಾರ ತಿಳಿದು ಆಶ್ಚರ್ಯವನ್ನು ಪಡುವಿರೋ ನಿಮಗೆ ಬಿಟ್ಟಿದ್ದು, ಅದೇನೆಂದರೆ ಮುಖೇಶ್ ಅಂಬಾನಿ ಅವರು ಮನೆಯಲ್ಲಿ ಕೆಲಸವನ್ನು ಮಾಡುವವರಲ್ಲಿ ಇಬ್ಬರ ಮಕ್ಕಳು ಅಮೆರಿಕಾದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಒಂದು ವರದಿಯ ಪ್ರಕಾರ ಮುಖೇಶ್ ಅಂಬಾನಿ ಅವರ ಐಶಾರಾಮೀ ಮನೆಯಲ್ಲಿ ಕೆಲಸ ಮಾಡುವ ಸ್ವಾಫ್ ಎಲ್ಲರ ಸಂಬಳ ಕೂಡಾ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇಲ್ಲ ಎನ್ನಲಾಗಿದೆ. ಆದ್ದರಿಂದಲೇ ಅವರ ಮನೆಯ ಅಡುಗೆ ಕೆಲಸ ಮಾಡುವವರಿಗೆ ಕೂಡಾ ಸಹಜವಾಗಿಯೇ ಎರಡು ಲಕ್ಷ ರೂಪಾಯಿಗಳಿಂದಲೇ ವೇತನ ಆರಂಭವಾಗುತ್ತದೆ ಎನ್ನುವುದು ಖಚಿತ.

ಅಂಬಾನಿ ಅವರ ಮನೆ ಕೆಲಸವರಿಗೆ ಸಂಬಳದ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸದ ಅಲೋಯೆನ್ಸ್ ಮತ್ತು ವಿಮೆಯ ಸೌಲಭ್ಯಗಳು ಕೂಡಾ ಸೇರಿದೆ. ಹಾಗಾದರೆ ಎರಡು ಲಕ್ಷ ಸಂಬಳ ಪಡೆಯುವ ಮುಖೇಶ್ ಅವರ ಅಡುಗೆ ಭಟ್ಟರು ತರಹೇವಾರಿ ಆಹಾರಗಳನ್ನು ಸಿದ್ಧ ಮಾಡುವವರಾ? ಎಂದರೆ ಅದು ಕೂಡಾ ಸಂಪೂರ್ಣವಾಗಿ ನಿಜವಲ್ಲ ಏಕೆಂದರೆ ಮುಖೇಶ್ ಅಂಬಾನಿಯರು ಸರಳವಾದ ಆಹಾರವನ್ನು ಇಷ್ಟಪಡುವವರಾಗಿದ್ದಾರೆ. ಅವರಿಗೆ ಹೆಚ್ಚಾಗಿ ಗುಜರಾತಿ ಸಾಂಪ್ರದಾಯಿಕ ಅಡುಗೆಗಳನ್ನು ಮಾಡಲಾಗುತ್ತದೆ. ಅಲ್ಲದೇ ಮುಖೇಶ್ ಅಂಬಾನಿ ಅವರಿಗೆ ಇಡ್ಲಿ ಸಾಂಬಾರ್ ಬಹಳ ಇಷ್ಟವಾದ ಆಹಾರವಾಗಿದೆ.

ಮುಖೇಶ್ ಅಂಬಾನಿ ಸ್ವತಃ ಅಡುಗೆ ಮಾಡುವುದನ್ನು ಕೂಡಾ ಕಲಿತಿದ್ದಾರೆ‌. ಅಲ್ಲದೇ ಅವರ ಪತ್ನಿ ನೀತಾ ಅಂಬಾನಿ ಅವರು ಒಮ್ಮೆ ಮಾತನಾಡುತ್ತಾ ತಮ್ಮ ಮನೆಯಲ್ಲಿ ಎಲ್ಲರಿಗಿಂತ ಚೆನ್ನಾಗಿ ಅಡುಗೆ ಮಾಡುವುದನ್ನು ಬಲ್ಲವರು ತಮ್ಮ ಮಗಳು ಇಶಾ ಅಂಬಾನಿ ಎಂದು ಹೇಳಿದ್ದರು. ಏನೇ ಆಗಲಿ ಅವರ ಮನೆಯಲ್ಲಿ ಅಡುಗೆ ಯಿಂದ ಹಿಡಿದ ಬೇರೆ ಬೇರೆ ಉದ್ಯೋಗ ಮಾಡುವ ಸ್ಟಾಫ್ ನ ಸ್ಯಾಲರಿ ಹಾಗೂ ನೀಡುವ ಸೌಲಭ್ಯಗಳು ಮಾತ್ರ ಎಲ್ಲರ ಗಮನವನ್ನು ಸೆಳೆದಿದೆ ಎಂದೇ ಹೇಳಬಹುದು.