ಕಾರ್ಖಾನೆಗಳ ಛಾವಣಿಯಲ್ಲಿ ತಿರುಗುತ್ತಿರುವಂತೆ ಕಾಣುವುದು ಏನು ಗೊತ್ತಾ? ನಿಮ್ಮನ್ನು ಕಾಡಿದ ಪ್ರಶ್ನೆಗೆ ಇಲ್ಲಿದೆ ಉತ್ತರ!
ಆಧುನಿಕತೆ ಬೆಳೆದಂತೆ ನಗರೀಕರಣ ಹೆಚ್ಚಿದ್ದು ಇಂದು ದೊಡ್ಡ ದೊಡ್ಡ ನಗರಗಳ ಗಾತ್ರ ಕೂಡಾ ಬೆಳೆಯುತ್ತಾ ಸಾಗಿದ್ದು, ಈ ನಗರಗಳಲ್ಲಿ ಅನೇಕ ಉದ್ದಿಮೆಗಳು ತಲೆ ಎತ್ತುತ್ತಿವೆ. ನಗರಗಳು ಎಂದೊಡನೆ ಅವು ಉದ್ದಿಮೆಗಳು, ಕೈಗಾರಿಕೆಗಳು, ವಿವಿಧ ರೀತಿಯ ಕಂಪನಿಗಳಿಗೆ ಆಶ್ರಯ ತಾಣ ಎನ್ನಬಹುದು. ಅದಕ್ಕೆ ಇಲ್ಲಿಗೆ ಉದ್ಯೋಗವನ್ನು ಅರಸಿ ದೂರ ದೂರದ ಪ್ರದೇಶಗಳಿಂದ ಜನರು ನಗರಗಳಿಗೆ ವಲಸೆ ಬಂದು ಅಲ್ಲಿ ಉದ್ಯೋಗಗಳನ್ನು ಪಡೆದು ಜೀವನವನ್ನು ನಡೆಸುತ್ತಾರೆ. ಹೀಗೆ ದಿನವೊಂದಕ್ಕೆ ಸಾವಿರಾರು ಜನರು ಉದ್ಯೋಗಗಳನ್ನು ಅರಸಿ ನಗರಗಳಿಗೆ ಬರುತ್ತಲೇ ಇರುತ್ತಾರೆ. ಅವರಿಗೆಲ್ಲಾ ಉದ್ಯೋಗ ಸಿಗುವುದು ಬಹುತೇಕ ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ.
ಇನ್ನು ನಗರಗಳಲ್ಲಿ ನಾವು ಸಂಚಾರ ಮಾಡೋವಾಗ ಕೆಲವು ದೊಡ್ಡ ದೊಡ್ಡ ಉದ್ದಿಮೆಗಳ ಕಟ್ಟಡಗಳ ಮೇಲ್ಭಾಗದಲ್ಲಿ, ಅಥವಾ ಹೆಚ್ಚು ಜನರು ಕೆಲಸ ಮಾಡುವಂತಹ ಕಡೆಗಳಲ್ಲಿ ಇರುವ ಕಟ್ಟಡಗಳ ಛಾವಣಿಯ ಮೇಲೆ ನಾವು ಗಮನಿಸಿದಾಗ ಅಲ್ಲಿ ಸ್ಟೀಲ್ ನ ವೃತ್ತಾಕಾರದಲ್ಲಿ ಇರುವ ನಿರ್ಮಾಣವು ತಿರುಗುತ್ತಾ ಇರೋದನ್ನು ನೋಡಿರುತ್ತೇವೆ. ಅವು ತಿರುಗುತ್ತಾ ಇದ್ದರೆ ನೋಡೋದಕ್ಕೆ ಏನೋ ಒಂತರಾ ಖುಷಿ ಅನಿಸುತ್ತೆ. ಇನ್ನೂ ಕೆಲವರಿಗೆ ಅವುಗಳನ್ನು ಏಕೆ ಅಳವಡಿಸಿದ್ದಾರೆ ಅನ್ನೋ ಪ್ರಶ್ನೆ ಕೂಡಾ ಮನಸ್ಸಿನಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ತುಂಬಾ ಸರಳ ಆದರೆ ಅನೇಕರಿಗೆ ಅದರ ಬಗ್ಗೆ ವಿವರ ತಿಳಿದಿಲ್ಲ ಅನ್ನೋದು ನಿಜ.
ಹಾಗಾದರೆ ಬನ್ನಿ, ಅವುಗಳನ್ನು ಕಟ್ಟಡದ ಛಾವಣಿ ಮೇಲೆ ಏಕೆ ಅಳವಡಿಕೆ ಮಾಡಿರ್ತಾರೆ ಅನ್ನೋದನ್ನು ನಾವು ತಿಳಿಯೋಣ. ಇಷ್ಟಕ್ಕೂ ಅವುಗಳನ್ನು ಏನೆಂದು ಕರೆಯುತ್ತಾರೆ ಎನ್ನುವುದಾದರೆ ಅವುಗಳನ್ನು ವಿಂಡ್ ವೆಂಟಿಲೇಟರ್ ಗಳು ಎನ್ನಲಾಗುತ್ತದೆ. ಸಾಮಾನ್ಯವಾಗಿಯೇ ಫ್ಯಾಕ್ಟರಿ ಗಳಲ್ಲಿ , ಕಾರ್ಖಾನೆಗಳಲ್ಲಿ ಹೆಚ್ಚು ಜನರು ಕೆಲಸವನ್ನು ಮಾಡುವುದನ್ನು ನಾವು ನೋಡಿರುತ್ತೇವೆ.ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೆಲಸಗಾರರು ಭಿನ್ನ ವಿಭಿನ್ನವಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಇಂತಹ ಕಡೆಗಳಲ್ಲಿ ಈ ವಿಂಡ್ ವೆಂಟಿಲೇಟರ್ ಗಳನ್ನು ಅಳವಡಿಸಲಾಗಿರುತ್ತದೆ. ಅವು ಗುಂಡಾಗಿರುವ ಆಕಾರದಲ್ಲೇ ಇರಬೇಕೆಂದಿನಲ್ಲವಾದರೂ ಸಾಮಾನ್ಯವಾಗಿ ಹೆಚ್ಚಾಗಿ ವೃತ್ತಾಕಾರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ.

ಹೀಗೆ ಅನೇಕರು ಕೆಲಸ ಮಾಡುವ ಜಾಗದಲ್ಲಿ ಉತ್ಪತ್ತಿಯಾಗುವ ಬಿಸಿ ಗಾಳಿಯನ್ನು ಹೊರಗೆ ಹಾಕಲು ಈ ವಿಂಡ್ ವೆಂಟಿಲೇಟರ್ ಗಳನ್ನು ಬಳಸಲಾಗುತ್ತದೆ. ಅವು ಒಳಗಿರುವ ಬಿಸಿ ಗಾಳಿಯನ್ನು ಎಳೆದು ಹೊರ ಹಾಕುತ್ತದೆ. ವಿಂಡ್ ವೆಂಟಿಲೇಟರ್ ಗಳಲ್ಲಿ ಫ್ಯಾನ್ ಗಳನ್ನು ಅಳವಡಿಸಲಾಗಿರುತ್ತದೆ. ಇವುಗಳಲ್ಲಿನ ರೆಕ್ಕೆಗಳು ಉಲ್ಟಾ ಅಂದರೆ ನಮ್ಮ ಮನೆಯ ಮನೆಯಲ್ಲಿ ಫ್ಯಾನ್ ಗಳು ಯಾವ ದಿಕ್ಕಿಗೆ ತಿರುಗುವವೋ ಅದರ ವಿ ರು ದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಏಕೆಂದರೆ ಬಿಸಿ ಗಾಳಿಯು ಹೆಚ್ಚು ಹಗುರವಾದ ಕಾರಣ ಅದು ಮೇಲೇರುತ್ತದೆ. ಈ ವಿಂಡ್ ವೆಂಟಿಲೇಟರ್ ನಲ್ಲಿ ಅಳವಡಿಸಿಲಾದ ಫ್ಯಾನ್ಗಳು ಆ ಗಾಳಿಯನ್ನು ಸುಲಭವಾಗಿ ಎಳೆದುಕೊಂಡು ಹೊರ ಹಾಕುತ್ತವೆ.
ಇದರಿಂದ ಫ್ಯಾಕ್ಟರಿ ಅಥವಾ ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಗಾಳಿಗೆ ಸಂಭಂದಿಸಿದ ಹಾಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಹಾಗೂ ಅಲ್ಲಿರುವ ಕಿಟಕಿ ಹಾಗೂ ಬಾಗಿಲುಗಳ ಮೂಲಕ ತಂಪಾದ ಗಾಳಿ ಬೀಸಿ ಕೆಲಸ ಮಾಡುವವರಿಗೆ ಹಿತವನ್ನು ಉಂಟು ಮಾಡುತ್ತದೆ. ಇದರಿಂದ ಅವರು ಆರಾಮವಾಗಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಬಹುಶಃ ಇಷ್ಟು ದಿನ ಪ್ಯಾಕ್ಟರಿಗಳು ಹಾಗೂ ಕಾರ್ಖಾನೆಗಳ ಮೇಲೆ ತಿರುಗುವ ಸ್ಟೀಲ್ ನ ವೃತ್ತಾಕಾರದ ಆಕೃತಿಗಳು ಏನಕ್ಕೆ ಅಳವಡಿಸಲಾಗಿರುತ್ತದೆ ಎನ್ನುವುದಕ್ಕೆ ಉತ್ತರ ಗೊತ್ತಾಯಿತಲ್ಲವೇ, ಇದನ್ನು ಇತರರಿಗೂ ಕೂಡಾ ನಾವು ತಿಳಿಸಲು ಅನುಕೂಲಕರವಲ್ಲವೇ?