ರಾಮಾಯಣದ ಹನುಮಾನ ಪಾತ್ರಧಾರಿ ಎಲ್ಲಕ್ಕೂ ದುಬಾರಿ ನಟ, ತನ್ನ ಪಾತ್ರಕ್ಕೆ ತೆಗೆದುಕೊಂಡ ಇಷ್ಟೊಂದು ದೊಡ್ಡ ಮೊತ್ತ!!
ಇಂದಿನ ಲಾಕ್ಡೌನ್ ಕಾಲದಲ್ಲಿ ಮತ್ತೆ ಮರು ಪ್ರಸಾರ ವಾಗುತ್ತಿರುವ ರಾಮಾನಂದ ಸಾಗರ್ ಅವರ ರಾಮಾಯಣವು ಅಂದಿನ ಕಾಲದಲ್ಲಿ ತುಂಬಾ ಮೆಚ್ಚಿಗೆ ಪಡೆದ ಧಾರಾವಾಹಿ ಯಾಗಿದೆ. ಅಂದಿನ ಕಾಲದಲ್ಲಿಯೇ ಇದರ ಟಿ ಆರ್ ಪಿ ಯಾವ ಇನ್ನೊಂದು ಸೀರಿಯಲ್ ಗೆ ಸಿಗಲೇ ಇಲ್ಲ. ಅಲ್ಲದೆ ಈಗಲೂ ಸಹ ರಾಮಾಯಣ ಸೀರಿಯಲ್ ಟಿ ಆರ್ ಪಿ ಸಹ ತುಂಬಾ ಹೆಚ್ಚಿದೆ. ರಾಮಾಯಣ ಒಂದು ಭಾಗ ಚಿತ್ರೀಕರಣ ಮಾಡಲು ತುಂಬಾ ಖರ್ಚು ಮಾಡಿದ್ದಾರೆ ಅಂದರೆ ಅಂದಿನ ಕಾಲದಲ್ಲಿ ಈಗಿದ್ದ ಹಾಗೆ ಯಾವುದೇ ಡಿಜಿಟಲ್ ಸೌಲಭ್ಯಇರಲಿಲ್ಲ ಪ್ರತಿಯೊಂದು ಸೀನ್ ಮಾನವ ನಿರ್ಮಿತವಾದ ಸೀನ ಮಾಡುತ್ತಿದ್ದರು ಆದರೆ ಇಂದು ಗ್ರೀನ್ ಸ್ಕ್ರೀನ್ ಮುಖಾಂತರ ಯಾವುದೇ ಸೀನ್ ಕ್ರಿಯೇಟ್ ಮಾಡಿ ಶೂಟ್ ಮಾಡ ಬಹುದು.
ರಾಮಾಯಣದಲ್ಲಿ ಪ್ರತಿಯೊಬ್ಬ ಪಾತ್ರಧಾರಿಗಳು ಸಹ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಅವರಿಗೆ ತಮ್ಮ ಪಾತ್ರಕ್ಕೆ ತಕ್ಕಂತೆ ವೇತನ ಸಹ ನೀಡಿದ್ದಾರೆ. ಈ ರಾಮಾಯಣದಲ್ಲಿ ಎಲ್ಲಕ್ಕಿಂತ ಹೆಚ್ಚು ವೇತನ ಪಡೆದ ಪಾತ್ರ ಯಾವುದೆಂದರೆ ಹನುಮಾನ ಪಾತ್ರ. ಹೌದು ಧಾರಾ ಸಿಂಗ್ ರವರು ತಮ್ಮ ಪಾತ್ರಕ್ಕೆ ಎಲ್ಲಕ್ಕಿಂತ ಹೆಚ್ಚು ಫೀಸ್ ತಗೆದುಕೊಂಡಿದ್ದಾರೆ.

1960 ರಲ್ಲಿ ಧಾರಾ ಸಿಂಗ್ ಅವರು ಒಬ್ಬ ಕುಸ್ತಿ ಪಟು ಎಂದು ಸುಪ್ರಸಿದ್ಧ ರಾಗಿದ್ದರು. ಅದರ ಪ್ರಸಿದ್ದಿ ಪಡೆದ ನಂತರ ಮುಮಾತಾಜ್ ಜೊತೆಗೆ ಫಿಲ್ಮ್ ಇಂಡಸ್ಟ್ರಿಜ್ ಪಾದಾರ್ಪಣೆ ಮಾಡಿದರು. ಇವರು ಹಲವಾರು ಚಿತ್ರಗಳಲ್ಲಿ ನಟಿಸುವದರೆ ಜೊತೆಗೆ ದಿಗ್ದರ್ಶಕ ಹಾಗೂ ಅನೇಕ ಲೇಖನಗಳು ಸಹ ಮಾಡಿದ್ದಾರೆ. ರಾಮಾಯಣ ದಲ್ಲಿ ಹನುಮಂತನ ಪಾತ್ರ ನಟಿಸುವ ಸಲುವಾಗಿ ಧಾರಾ ಸಿಂಗ್ ಅವರು 30 ರಿಂದ 33 ಲಕ್ಷ ರೂಪಾಯಿ ತಗೆದುಕೊಂಡಿದ್ದಾರೆ. ಅಂದರೆ ಇಂದಿನ ಕಾಲದಲ್ಲಿ 10 ರಿಂದ 20 ಕೋಟಿ ರೂಪಾಯಿಗೆ ಸಮ ಇಷ್ಟೊಂದು ದುಬಾರಿ ಫೀಸ್ ತಗೆದುಕೊಂಡ ಏಕೈಕ ನಟ ಎಂದು ಆವಾಗ ಪ್ರಸಿದ್ದಿ ಪಡೆದುಕೊಂಡಿದ್ದರು.