ಅಪರಾಧಿಗಳನ್ನು ಬಂಧಿಸಲು ಬರುವಾಗ ಪೊಲೀಸ್ ವ್ಯಾನ್ ಸೈರನ್ ಬಾರಿಸುತ್ತ ಯಾಕೆ ಬರುತ್ತೆ?
ಪ್ರತಿಯೊಬ್ಬರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿರುತ್ತವೆ. ಎಲ್ಲ ಪ್ರಶ್ನೆಗಳಿಗೂ ಉತ್ತರಗಳು ಇದ್ದೇ ಇರುತ್ತವೆ. ಆದರೆ ಕೆಲವು ಪ್ರಶ್ನೆಗಳು ಮನದಲ್ಲಿ ಹಾಗೆಯೇ ಅನೇಕ ದಿನಗಳಿಂದ ಮನೆ ಮಾಡಿರುತ್ತವೆ, ಉತ್ತರ ಮಾತ್ರ ಸಿಕ್ಕಿರುವುದಿಲ್ಲ. ಈ ಪ್ರಶ್ನೆಯೂ ಅದೇ ರೀತಿಯ ಪ್ರಶ್ನೆಯಾಗಿದೆ.
ನಾವು ಚಲನಚಿತ್ರಗಳಲ್ಲಿ ನೋಡುತ್ತೇವೆ, ಮತ್ತು ಪ್ರತ್ಯಕ್ಷವಾಗಿಯೂ ನೋಡುತ್ತೇವೆ. ಪೊಲೀಸರು ಈ ಅಪರಾಧಿಗಳನ್ನು ಹಿಡಿಯಲು ತಮ್ಮ ವಾಹನದ ಸೈರನ್ ಸೌಂಡ್ ಮಾಡುತ್ತ ಬರುತ್ತಾರೆ. ನಮ್ಮ ಪ್ರಶ್ನೆ ಯಾಕೆ, ಅಲ್ವಾ? ಹಾಗಾದರೆ ಇದರ ಉತ್ತರವನ್ನು ವಾಚಕರಿಗಾಗಿ ಇಲ್ಲಿ ತಂದಿದ್ದೇವೆ ಓದಿ….
ಮೊದಲು ಒಂದು ವಿಷಯ ತಿಳಿದುಕೊಳ್ಳಬೇಕಾದದ್ದು, ಪೊಲೀಸರೇ ಹೇಳುವ ಹಾಗೆ ಎಲ್ಲ ಅಪರಾಧಿಗಳನ್ನು ಹಿಡಿಯಲು ಹೋಗುವಾಗ ಸೈರನ್ನಿನ ಶಬ್ದ ಮಾಡುತ್ತ ಹೋಗುವುದಿಲ್ಲ. ಆಪರೇಷನ್ ಗೆ ಹೋಗುವ ಮೊದಲೇ ಅಪರಾಧಿ ಯಾರು? ಆತನ ಇತಿಹಾಸವೇನು? ಓಡಿ ಹೋಗಲು ಎಷ್ಟು ಸಲ ಯಶಸ್ವಿಯಾಗಿದ್ದಾನೆ? ಇವೆಲ್ಲದರ ಬಗ್ಗೆ ಯೋಚಿಸಿ ಆನಂತರ ಆತನನ್ನು ಹಿಡಿಯುವ ನೀಲಿ ನಕ್ಷೆಯನ್ನು ತಯಾರಿಸಲಾಗುತ್ತದೆ. ಅದು ಸಹ ತುಂಬಾ ಶಾಂತವಾಗಿ ಮತ್ತು ಅಪರಾಧಿಗೆ ಇದರ ಸ್ವಲ್ಪವೂ ಸೂಚನೆ ಸಿಗದಂತೆ ಆತನ ಹೆಡೆಮುರಿ ಕಟ್ಟುತ್ತಾರೆ.

ಇನ್ನು ಎಲ್ಲರಿಗೂ ಒಂದು ಯೋಚನೆ ಬರುತ್ತೆ. ಅದೇನೆಂದರೆ, ಪೊಲೀಸರು ಸೈರನ್ ಶಬ್ದ ಮಾಡುತ್ತ ಬರುವುದರಿಂದ ಅಪರಾಧಿ ಜಾಗೃತನಾಗಿ ಆರಾಮಾಗಿ ಅಲ್ಲಿಂದ ಓಡಿ ಹೋಗುತ್ತಾನೆ. ಅದಕ್ಕೆ ಪೊಲೀಸರು ಶಾಂತವಾಗಿ ಬಂದು ಅವರಿಗೆ ಹಿಡಿಯುವದಿಲ್ಲವೇಕೆ? ಅಲ್ಲವೇ.
ಎಷ್ಟೋ ಸಲ ಏನಾಗುತ್ತೆ ಅಂದರೆ, ಅಪರಾಧಿಯ ಸೂಚನೆ ಪೊಲೀಸರಿಗೆ ಸಿಗುವಷ್ಟರಲ್ಲಿ ಅಪರಾಧಿ ಅಲ್ಲಿಂದ ಕಾಲ್ಕಿತ್ತಿರುತ್ತಾನೆ. ಆಗ ಪೊಲೀಸರು ಆತನನ್ನು ಬೆನ್ನಟ್ಟಬೇಕಾಗುತ್ತದೆ. ಆಗ ಈ ಸೈರನ್ ಅಲ್ಲಿಯ ಜನರಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಜಾಗೃತಿಯನ್ನು ಮಾಡುತ್ತದೆ. ಆಗ ಪೊಲೀಸರಿಗೂ ಗದ್ದಲದಲ್ಲಿಂದ ಮಾರ್ಗ ತೆಗೆಯಲು ಸುಲಭವಾಗುತ್ತದೆ. ಅಪರಾಧಿಯನ್ನು ಹಿಡಿಯಲು ಮತ್ತು ಅಪರಾಧವೆಸಗಿದ ಸ್ಥಳಕ್ಕೆ ಹೋಗಿ ಮುಟ್ಟಲು ತುಂಬಾ ಸುಲಭವಾಗುತ್ತದೆ.
ಎಲ್ಲಕ್ಕೂ ಮುಖ್ಯವಾದ ವಿಷಯವೆಂದರೆ, ಪೊಲೀಸರ ಈ ಸೈರನ್ನಿನಿಂದ ಅಪರಾಧಿಯೂ ಕೆಲವೊಮ್ಮೆ ಹೆದರಿ ಓಡಿ ಹೋಗುತ್ತಾನೆ. ಇದರಿಂದ ಮುಂದೆ ಘಟಿಸ ಬೇಕಾದ ದೊಡ್ಡ ದುರ್ಘಟನೆ ಅಥವಾ ಅನಾಹುತಗಳು ತಪ್ಪುತ್ತವೆ ಇಲ್ಲವೇ ಅವು ಪೂರ್ಣವಾಗದೆ ಅಪರಾಧಿ ಅಲ್ಲಿಂದ ಪಲಾಯನ ಮಾಡುತ್ತಾನೆ.

ಈ ಸೈರನ್ನಿನ ಇನ್ನೊಂದು ಲಾಭವೇನೆಂದರೆ, ಎಲ್ಲ ಅಪಾರಧಿಗಳು ನಿಪುಣರಿರುತ್ತಾರೆ ಎಂದಿಲ್ಲ. ಆಗ ಕೆಲವು ಅಂಜುಬುರುಕ ಅಪರಾಧಿಗಳು ಅಲ್ಲಿಯೇ ಎಲ್ಲಿಯಾದರೂ ಅವಿತು ಕೊಳ್ಳಲಿಕ್ಕೆ ಪ್ರಯತ್ನ ಮಾಡುತ್ತಾರೆ. ಇದರಿಂದ ಅಂತ ಅಪರಾಧಿಗಳು ಬೇಗನೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಯಾಕೆಂದರೆ ಈ ಶಬ್ದ ಅಪರಾಧಿಗಳನ್ನು ಮಾನಸಿಕವಾಗಿ ದುರ್ಬಲವನ್ನಾಗಿ ಮಾಡುತ್ತದೆ.
ಎಷ್ಟೋ ಸಲ ಅಪರಾಧಿಗಳನ್ನು ಬೆನ್ನಟ್ಟುವಾಗ ರೋಡ್ ಸಿಗ್ನಲ್ ಗಳನ್ನೂ ಮುರಿಯಬೇಕಾಗುತ್ತದೆ. ಈ ಸಮಯದಲ್ಲಿ ನಾಗರಿಕರಿಗೂ ಏನಾದರೂ ಎಮರ್ಜೆನ್ಸಿ ಇರಬಹುದು ಎಂದು ಗಮನಕ್ಕೆ ಬರುತ್ತದೆ. ಹೀಗಾಗಿ ಅವರೂ ಪೊಲೀಸರಿಗೆ ಗದ್ದಲದಲ್ಲಿಂದ ಮಾರ್ಗ ಮಾಡಿ ಕೊಡುವರು.
ಈ ಎಲ್ಲ ಕಾರಣಗಳಿಂದಾಗಿ ಪೊಲೀಸರು ಅಪರಾಧಿಗಳನ್ನು ಹಿಡಿಯುವ ಸಲುವಾಗಿ ತಮ್ಮ ವಾಹನದ ಸೈರನ್ನಿನ ಶಬ್ದ ಮಾಡುತ್ತಾ ಬರುತ್ತಾರೆ.