Viral Video: ಮರದಿಂದ ಬೀಳುವ ಹಲಸಿನ ಹಣ್ಣುಗಳನ್ನು ವಿಶೇಷ ಟೆಕ್ನಿಕ್ ಬಳಸಿ ಹಿಡಿಯುತ್ತಿರುವ ಬಾಲಕಿ; ಬಾಲಕಿಯ ಕೌಶಲ್ಯ ಮೆಚ್ಚಿ ಹಾಡಿ ಹೊಗಳಿದ ಜನ!
ಉದ್ಯೋಗ ಅಥವಾ ಕೆಲಸ ಎನ್ನುವುದು ಪ್ರತಿಯೊಬ್ಬರೂ ಕೂಡಾ ಮಾಡಲೇಬೇಕು, ಏಕೆಂದರೆ ಜೀವನದ ಬಂಡಿಯು ಮುನ್ನಡೆಯಬೇಕಾದರೆ ನಮಗೆ ಸಂಪಾದನೆ ಇರಬೇಕು, ಅದು ದೊರೆಯುವ ಒಂದೇ ಮಾರ್ಗವೆಂದರೆ ಅದು ಕಾಯಕ. ಕಾಯಕವೇ ಕೈಲಾಸ ಎನ್ನುವ ಮಾತನ್ನು ಕೂಡಾ ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಲಾಗದು ಹಾಗೂ ಅನುಸರಿಸಲಾಗದು ಕೆಲವರು ತಮ್ಮ ಕೆಲಸದಲ್ಲಿ ಎಷ್ಟು ಕ್ರಿಯಾಶೀಲರಾಗಿ ತೊಡಗಿಕೊಂಡಿರುತ್ತಾರೆಂದರೆ ಅವರು ತಮ್ಮ ಕೆಲಸಗಳನ್ನು ಕಷ್ಟ ಪಟ್ಟು, ಇಷ್ಟ ಪಟ್ಟು ಮಾತ್ರವೇ ಮಾಡುವುದಿಲ್ಲ, ಅದರ ಜೊತೆಗೆ ಅವರು ತಮ್ಮ ಕೆಲಸವನ್ನು ಬಹಳ ಸ್ಮಾರ್ಟ್ ಹಾಗೂ ಚಾಕಚಕ್ಯತೆಯಿಂದ, ತಮ್ಮ ಕೌಶಲ್ಯ ವನ್ನು ಪ್ರದರ್ಶನ ಮಾಡುತ್ತಾ ಬಹಳ ಸುಲಭವಾಗಿ ಮಾಡಿ ಮುಗಿಸುತ್ತಾರೆ.
ಅವರು ಹಾಗೇ ಮಾಡುವಾಗ ನಾವು ಅರೇ ಎಷ್ಟು ಸುಲಭವಾಗಿ ಅವರು ತಮ್ಮ ಕೆಲಸವನ್ನು ಮಾಡಿ ಮುಗಿಸಿದರು ಎಂದು ನಕ್ಕು ಸುಮ್ಮನಾಗುತ್ತೇವೆ ಅಥವಾ ಮನರಂಜನೆ ಎಂಬ ಹಾಗೆ ನೋಡಿ ಸುಮ್ಮನಾಗುತ್ತೇವೆ. ಆದರೆ ಒಮ್ಮೆ ಸೂಕ್ಷ್ಮವಾಗಿ ಆಲೋಚಿಸಿದಾಗ ಆ ಒಂದು ಕೆಲಸವನ್ನು ಅಷ್ಟು ಪರಿಪಕ್ವವಾಗಿ ಹಾಗೂ ಪರಿಣಿತಿ ಪಡೆದವರಂತೆ ಮಾಡಿ ಮುಗಿಸಿದ ಅವರ ಶ್ರಮ, ಏಕಾಗ್ರತೆ ಗಳು ಅದರ ಹಿಂದೆ ಅಡಗಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಆಗ ನಮಗೆ ಸ್ವಲ್ಪ ಹೊತ್ತಿಗೆ ಮನರಂಜನೆ ಆಗಿ ಕಂಡ ದೃಶ್ಯ ಒಬ್ಬ ವ್ಯಕ್ತಿಯ ಕೌಶಲ ಹಾಗೂ ಪರಿಣಿತಿಯ ಅತ್ಯುತ್ತಮ ಉದಾಹರಣೆ ಎನ್ನುವಂತೆ ಕಂಡು ಅದ್ಭುತ ಎನಿಸಿ ಬಿಡುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ಅದ್ಭುತ ಕಾರ್ಯವೈಖರಿಯನ್ನು, ಪರಿಣಿತಿ ಪಡೆದ ಕೌಶಲ್ಯ ಹಾಗೂ ಕೆಲಸದಲ್ಲಿನ ಏಕಾಗ್ರತೆ ಹಾಗೂ ಚಾಕಚಕ್ಯತೆಯನ್ನು ಪ್ರದರ್ಶನ ಮಾಡುವ ವೀಡಿಯೊ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋ ನೋಡಿದರೆ ನಮಗೂ ಕೂಡಾ ಒಂದು ಕ್ಷಣ ನಮ್ಮ ಕಣ್ಣನ್ನು ನಾವು ನಂಬುವುದು ಕಷ್ಟ ಎನಿಸಬಹುದು. ಆದರೆ ಗಮನವಿಟ್ಟು ನೋಡಿದಾಗ ಕಾರ್ಯವೊಂದನ್ನು ಮಾಡುವಾಗ ಬಾಲಕಿಯೊಬ್ಬಳು ಅದರಲ್ಲಿ ತೋರುವ ತನ್ನ ಜಾಣ್ಮಯು ನಮ್ಮ ಮುಂದೆ ಬಂದು, ಆಕೆಯನ್ನು ನಾವು ಮೆಚ್ಚದೇ ಇರಲಾರೆವು. ಹಾಗಾದರೆ ಏನದು ವೀಡಿಯೋ ಎನ್ನುವಿರಾ ಬನ್ನಿ ತಿಳಿಯೋಣ.
ಕಾಡಿನಲ್ಲಿ ಮರವೊಂದರ ಮೇಲಿಂದ ಡುರಿಯನ್ ಎನ್ನುವ ನೋಡಲು ನಮ್ಮ ಕಡೆಯ ಹಲಸಿನ ಹಣ್ಣಿನ ಹಾಗೆ ಕಾಣುವ ದೊಡ್ಡ ದೊಡ್ಡ ಕಾಯಿಗಳನ್ನು ಒಬ್ಬರು ಮರದ ಮೇಲಿಂದ ಕಿತ್ತು ಕೆಳಗೆ ಎಸೆಯುತ್ತಾರೆ. ಆಗ ಮರದ ಕೆಳೆಗೆ ಚೀಲವೊಂದನ್ನು ಹಿಡಿದು ನಿಂತಿರುವ ಬಾಲಕಿಯೊಬ್ಬಳು ಮರದ ಮೇಲಿಂದ ಕೆಳಗೆ ಬೀಳುವ ಡುರೈನ್ ಗಳನ್ನು ಬಹಳ ಚಾಕಚಕ್ಯತೆಯಿಂದ ತನ್ನದೇ ಆದ ಒಂದು ವಿಶೇಷ ವಿಧಾನದ ಮೂಲಕ ಚೀಲವನ್ನು ಹಾರಿಸಿ ಕಾಯಿ ನೆಲದ ಮೇಲೆ ಬೀಳದಂತೆ ಹಿಡಿದು ತನ್ನೊಡನೆ ಇರುವವರಿಗೆ ನೀಡುವಳು. ಬಾಲಕಿಯ ಈ ಕೌಶಲ್ಯ ನಿಜಕ್ಕೂ ಊಹೆಗೆ ನಿಲುಕದ್ದು ಅಥವಾ ಅದ್ಭುತವೆಂದೇ ನಾವು ಹೇಳಬಹುದು.
ವಿಡಿಯೋ ನೋಡಿ
Fruit picking 😳 pic.twitter.com/5uSSUbghli
— CCTV_IDIOTS (@cctv_idiots) October 15, 2020
ಆಕೆ ಡುರಿಯನ್ ಗಳು ಬೀಳುವುದನ್ನು ಗಮನಿಸಿ, ಏಕಾಗ್ರತೆ ವಹಿಸಿ ಅವುಗಳನ್ನು ಹಿಡಿಯುವುದು ವಿಸ್ಮಯವೇ ಸರಿ. ಈ ವೀಡಿಯೋ ವನ್ನು ಈಗಾಗಲೇ 3 ಲಕ್ಷ 46 ಸಾವಿರ ಮಂದಿ ವೀಕ್ಷಣೆ ಮಾಡಿದ್ದು 7 ಸಾವಿರ ದಾಟಿದ ಮೆಚ್ಚುಗೆ ಪಡೆದಿದೆ. ನೆಟ್ಟಿಗರು ಆ ಬಾಲಕಿಯ ಕೌಶಲ್ಯ ವನ್ನು ಮೆಚ್ಚಿ ಹೊಗಳಿದ್ದಾರೆ. ಆದರೆ ಕೆಲವರು ಆಕೆ ಕೊಂಚಿತ್ತು ಏಮಾರಿದರೂ ಕೂಡಾ ಆಕೆ ಮನೆಗೆ ಹೋಗುವುದಿಲ್ಲ ಬದಲಾಗಿ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋಗಬೇಕಾಗುವುದು ಎಂದು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಅವಳ ತಲೆಯ ಮೇಲೆ ಬೀಳುವುದಾ ಎಂದು ಯಾರಾದರೂ ನಿರೀಕ್ಷೆ ಮಾಡಿದ್ದೀರಾ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.