ಭೂಮಿ ಅಗೆದಾಗ ಈ ಊರಲ್ಲಿ ನೀರಿನ ಬದಲಾಗಿ ಸಿಗುತ್ತಿದೆ ಚಿನ್ನ!
ಸಾಮಾನ್ಯವಾಗಿ ಭೂಮಿಯನ್ನು ಅಗೆದಾಗ ನಂತರ ಸಿಗುವ ವಸ್ತು ಏನು ಗೊತ್ತಲ್ಲ. ಒಂದು ಮಣ್ಣು ಅಥವಾ ಇನ್ನಷ್ಟು ಜಾಸ್ತಿ ಅಗೆದರೆ ನೀರಿನ ಸೆಲೆ ಅಲ್ವಾ?
ಆದರೆ ನಮ್ಮ ದೇಶದಲ್ಲಿಯೇ ಒಂದು ಊರಿದೆ. ಈ ಊರಿನ ಜಮೀನನ್ನು ಅಗೆದರೆ ಸ್ವಲ್ಪವೇ ಆಳದಲ್ಲಿ ಚಿನ್ನ ದೊರೆಯುತ್ತದೆ.
ರಾಜಸ್ಥಾನದ ರಾಜಧಾನಿ ಮತ್ತು ಪಿಂಕ್ ಸಿಟಿ ಎಂದೇ ಪ್ರಸಿದ್ಧವಾದ ಜೈಪುರ ಪಟ್ಟಣದ ಹತ್ತಿರ ದಾಬೇಡಿಯಾ ಹೆಸರಿನ ಒಂದೂರಿದೆ. ಮಳೆಗಾಲದ ಕಾರಣದಿಂದಾಗಿ ಈ ಊರಿನ ಜಮೀನು ಭೂಸವಕಳಿಯಾದದ್ದರಿಂದ ಇಲ್ಲಿಯ ಭೂಮಿ ಅಲ್ಲಲ್ಲಿ ಅಲ್ಪಸ್ವಲ್ಪ ಪಳಪಳನೆ ಮಿನುಗುತ್ತಿತ್ತು. ಇದನ್ನು ಕಂಡು ಅಲ್ಲಿಯ ಜನ ಕುತೂಹಲದಿಂದ ಏನಿರಬಹುದೆಂದು ಅಗೆದು ನೋಡಿದಾಗ ಅವರಿಗೆ ಅಲ್ಲಿ ಚಿನ್ನದ ನಾಣ್ಯಗಳು ದೊರೆತವು. ಈ ಸುದ್ದಿ ಒಬ್ಬರಿಂದೊಬ್ಬರಿಗೆ ಊರ ತುಂಬೆಲ್ಲ ಹರಡಿದಾಗ ಅಲ್ಲಿಯ ಜನರೆಲ್ಲರೂ ತುಂಬಾ ರಹಸ್ಯವಾಗಿ ಭೂಮಿಯನ್ನು ಅಗೆದು ಚಿನ್ನದ ನಾಣ್ಯಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ನಿಮಗೆ ಕೇಳಿ ವಿಶೇಷವೇನಿಸಬಹುದು, ಯಾಕೆಂದರೆ ಈ ಘಟನೆಯಾಗಿ ಏಳೆಂಟು ವರ್ಷಗಳು ಕಳೆದಿಲ್ಲ.
ಈ ವರದಿಯ ಬಗ್ಗೆ ಪೊಲೀಸರು ನೀಡುವ ಉತ್ತರ ತುಂಬಾ ವಿರೋಧಾಭಾಸವನ್ನು ನಿರ್ಮಾಣ ಮಾಡುತ್ತದೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪೊಲೀಸರು ಹೇಳುತ್ತಾರೆ.
ಆದರೆ ಭಾರತೀಯ ಪುರಾತತ್ವ ಇಲಾಖೆಯವರು ಮಾತ್ರ ಇದನ್ನು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಪುರಾತತ್ವ ಇಲಾಖೆಯ ಪ್ರಕಾರ ಈ ಊರಲ್ಲಿ ಇಂಥ ಘಟನೆಗಳು ಕಂಡು ಬಂದರೆ ಇದರಲ್ಲಿ ಆಶ್ಚರ್ಯ ಪಡುವಂಥ ವಿಷಯವೇನೂ ಇಲ್ಲ ಎಂದು ಎನ್ನುತ್ತಾರೆ.
ಆಮೇಲೆ ಭಾರತದ ಪುರಾತತ್ವ ಇಲಾಖೆಯವರ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಅನೇಕ ಜನರ ಮನೆಯಲ್ಲಿ ಚಿನ್ನದ ನಾಣ್ಯಗಳು ದೊರೆತವು.

ಸುದ್ದಿಮೂಲಗಳ ಪ್ರಕಾರ ಸಾಮಾನ್ಯವಾಗಿ 15 ವರ್ಷಗಳ ಹಿಂದೆ ಜನರಿಗೆ ಈ ವಿಷಯದ ಬಗ್ಗೆ ಗೊತ್ತಾಗಿತ್ತು. ಅದೇ ಸಮಯದಲ್ಲಿ ಈ ಗ್ರಾಮದ ನಿವಾಸಿಗಳಿಗೆ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಚಿನ್ನದ ನಾಣ್ಯಗಳು ದೊರಕಿದ್ದವು.
ಈ ವಿಷಯಕ್ಕನುಗುಣವಾಗಿ ಭಾರತೀಯ ಪುರಾತತ್ವ ಇಲಾಖೆಯವರು ಹೀಗೆ ಹೇಳುತ್ತಾರೆ. ಪ್ರಾಚೀನ ಕಾಲದಲ್ಲಿ ವಾಸಿಸುವ ಈ ಊರಿನ ಜನರು ಉದರ ನಿರ್ವಾಹಕ್ಕಾಗಿ ಲೂಟಿ ಮಾಡಿದ ಬಂಗಾರವನ್ನು ಭೂಮಿಯಲ್ಲಿ ಅಗೆದು ಬಚ್ಚಿಡುತ್ತಿದ್ದರು. ಮತ್ತು ಬಚ್ಚಿಡುವ ಮೊದಲು ಆ ನಾಣ್ಯಗಳ ಮೇಲೆ ಕೆಲವು ರೀತಿಯ ಚಿಹ್ನೆಗಳ ಮುದ್ರಣವನ್ನು ಹಾಕುತ್ತಿದ್ದರು. ಕಾಲಾಂತರ ಕ್ರಮೇಣ ಈ ಸ್ಥಳದಲ್ಲಿ ಭೂಕಂಪಗಳು ಸಂಭವಿಸಿರುವುದರಿಂದ ಈ ಪ್ರದೇಶದಲ್ಲಿ ಅನೇಕ ಊರುಗಳು ಭೂಮಿಯ ಗರ್ಭದಲ್ಲಿ ಮುಚ್ಚಲ್ಪಟ್ಟವು. ಇಲ್ಲಿ ವಾಸಿಸುವ ಜನರು ಅಲೆಮಾರಿಗಳಾಗಿದ್ದರು. ಆ ಸಮಯದಲ್ಲಿಯ ಅನೇಕ ಅವಶೇಷಗಳು ಉತ್ಖನನದ ಸಮಯದಲ್ಲಿ ಭಾರತೀಯ ಪುರಾತತ್ವ ಇಲಾಖೆಯವರ ನಿದರ್ಶನಕ್ಕೆ ಬಂದಿವೆ. ಹಾಗಾಗಿಯೇ ಆ ಕಾಲದ ಜನರು ಹುದುಗಿಸಿಟ್ಟ ಭೂಮಿಯಲ್ಲಿ ಚಿನ್ನದ ನಾಣ್ಯಗಳು ಈಗ ದೊರೆಯುತ್ತಿವೆ ಇದರಲ್ಲಿ ಅಂತ ವಿಶೇಷವೇನು ಇಲ್ಲವೆಂದು ಈ ಪುರಾತತ್ವ ಇಲಾಖೆಯವರು ಹೇಳುತ್ತಾರೆ.
ಗ್ರಾಮದ ನಿವಾಸಿಗಳ ಪ್ರಕಾರ 15 ರಿಂದ 20 ವರ್ಷಗಳ ಹಿಂದೆ ಇಲ್ಲಿ ಉತ್ಖನನದ ಸಮಯದಲ್ಲಿ ಬಂಗಾರದ ನಾಣ್ಯಗಳು ದೊರೆತಿದ್ದವು. ಆದರೆ ಇತ್ತೀಚೆಗೆ ಏಳೆಂಟು ವರ್ಷಗಳಿಂದ ಚಿನ್ನದ ನಾಣ್ಯಗಳು ಸಿಗುವ ಪ್ರಮಾಣ ಹೆಚ್ಚಾಗಿದೆ ಎಂದು ಹೇಳುತ್ತಾರೆ.