Viral Video: ಹಳ್ಳದ ನೀರನ್ನು ತನ್ನ ಸೊಂಡಿಲಿನಲ್ಲಿ ಸಂಗ್ರಹಿಸಿ ನಿಧಾನವಾಗಿ ಒಂಟೆಯ ಕಡೆಗೆ ಹೋಗಿ ಅದರ ಮೇಲೆ ನೀರನ್ನು ಊದಿದ ಆನೆ! ಆನೆಯ ಕೀಟಲೆ ನೋಡಿ ಅಚ್ಚರಿ ಪಟ್ಟ ಜನ!
ಮೋಜು, ಮಸ್ತಿ ಎನ್ನುವುದು ಜೀವನದಲ್ಲಿ ಇರಲೇಬೇಕು. ಇದು ಮನಸ್ಸಿಗೆ ಹಿತವನ್ನು, ಆಹ್ಲಾದತೆಯನ್ನು ಉಂಟು ಮಾಡುತ್ತದೆ. ಅಲ್ಲದೇ ಒತ್ತಡವೇ ತುಂಬಿದ ಜೀವನದಲ್ಲಿ ಒಂದು ಉಲ್ಲಾಸ ಹಾಗೂ ನ ಚೈತನ್ಯವನ್ನು ಮೂಡಿಸಲು ಕೂಡಾ ಇದು ಅತಿ ಅವಶ್ಯಕ ಎಂದೇ ನಾವು ಹೇಳಬೇಕು. ನಗುವಿಲ್ಲದ ಜೀವನ ಹಸಿರಿಲ್ಲದೇ ಇರೋ ಕಾಡಿನಂತೆ ಎಂದರೂ ತಪ್ಪಾಗದು. ನಮ್ಮ ಜೀವನದಲ್ಲಿ ಒಂದು ಹೊಸ ಹುಮ್ಮಸ್ಸು ಮೂಡಬೇಕು ಎಂದರೆ ನಾವು ಕೂಡಾ ಮನಸ್ಸಿನಿಂದ ಸಂತೋಷವಾಗಿರಬೇಕು. ಹಾಗಿರಲು ಸಾಧ್ಯವಾಗುವುದು ಮೋಜು ಮಸ್ತಿಯಿಂದ ಕೂಡಿದ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಸಾಧ್ಯ ಅದಾಗದಿದ್ದರೆ ಕನಿಷ್ಠ ಪಕ್ಷ ಅಂತಹ ಚಟುವಟಿಕೆಗಳನ್ನು ನೋಡಿದರೂ ಕೂಡಾ ಮನಸ್ಸಿಗೆ ಆನಂದ ಸಿಗಬಹುದು.
ಮೋಜು, ಮಸ್ತಿಗಳು ಎನ್ನುವುದು ಮನುಷ್ಯನಿಗೆ ಮಾತ್ರವೇ? ಎನ್ನುವುದಾದರೆ ಇಲ್ಲ, ಇದು ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಕೃತಿಯ ಮಡಿಲಿನಲ್ಲಿ ಇರುವ ಅನೇಕ ಪ್ರಾಣಿಗಳು ಕೂಡಾ ಮೋಜು, ಮಸ್ತಿ ಹಾಗೂ ಆಟಗಳಲ್ಲಿ ತೊಡಗಿರುತ್ತವೆ. ನಾವು ಸಾಕಿರುವ ಸಾಕು ಪ್ರಾಣಿಗಳೇ ನಮ್ಮ ಮನೆಗಳಲ್ಲಿ ಕೆಲವೊಮ್ಮೆ ಆಡುವ ಆಟ, ಅವು ಮಾಡುವ ಕೀಟಲೆಗಳನ್ನು ನೋಡಿದಾಗ ನಮಗೆ ಸಂತೋಷ ಎನಿಸುತ್ತದೆ. ಅವುಗಳ ತುಂಟಾಟವು ಮನಸ್ಸಿಗೆ ಹಿತವನ್ನು ನೀಡುತ್ತದೆ ಹಾಗೂ ಮನಸ್ಸಿನಲ್ಲಿರುವ ಯಾವುದೇ ಆಲೋಚನೆಯು ಕೂಡಾ ಕ್ಷಣ ಕಾಲ ಮಾಯವಾಗಿ ಅಲ್ಲೊಂದು ನಗು ಮೂಡಿರುತ್ತದೆ.
ವನ್ಯ ಮೃ ಗ ಗಳು ಕೂಡಾ ಇಂತಹ ಮೋಜಿನಾಟ ಆಡುವುದು ಎಂದರೆ ನಂಬಲೇಬೇಕು. ಹೌದು ಸೋಶಿಯಲ್ ಮೀಡಿಯಾದಲ್ಲೊಂದು ವೀಡಿಯೋ ಅನೇಕರ ಗಮನ ಸೆಳೆಯುತ್ತಾ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋವನ್ನು ಈಗಾಗಲೇ 51 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದರೆ, ಸುಮಾರು 3 ಸಾವಿರಕ್ಕಿಂತ ಅಧಿಕ ಲೈಕ್ ಗಳು, ನೂರಾರು ಕಾಮೆಂಟ್ ಗಳು ಕೂಡಾ ಬಂದಿದ್ದು, ವೀಡಿಯೋ ಜನ ಮೆಚ್ಚುಗೆ ಪಡೆದಿದೆ. ಇಷ್ಟಕ್ಕೂ ಈ ವೀಡಿಯೋದಲ್ಲಿನ ವಿಶೇಷ ಏನೆಂದರೆ ಇದರಲ್ಲಿ ನಾವು ಗಜರಾಜ ಅಥವಾ ಆನೆಯೊಂದು ಮಾಡುವ ತುಂಟಾಟವನ್ನು ನೋಡಬಹುದು. ಭಾರೀ ದೇಹದ ಈ ಮುಗ್ಧ ಪ್ರಾಣಿಯ ಆಟ ಮನಸ್ಸನ್ನು ಸೂರೆಗೊಳ್ಳುತ್ತದೆ.
ವೀಡಿಯೋದಲ್ಲಿ ಆನೆಯೊಂದು ತನ್ನ ಪಕ್ಕದಲ್ಲೇ ಸ್ವಲ್ಪ ದೂರದಲ್ಲಿ ಇರಿಸಲಾಗಿರುವ ಒಂಟೆಯನ್ನು ಗಮನಿಸಿದೆ. ಅದನ್ನು ನೋಡಿದ ಆನೆಗೆ ತಮಾಷೆ ಮಾಡಬೇಕೆನ್ನುವ ಆಲೋಚನೆ ಬಂದಿದೆ. ಕೂಡಲೇ ಅದು ಅಲ್ಲೇ ಹಳ್ಳವೊಂದರಲ್ಲಿ ಇದ್ದ ನೀರನ್ನು ತನ್ನ ಸೊಂಡಿಲಿನಿಂದ ಎಳೆದುಕೊಂಡು ಕೊಂಡು ಸಂಗ್ರಹಿಸಿ, ನಿಧಾನವಾಗಿ ಒಂಟೆಯ ಕಡೆ ಹೋಗಿ, ಅದರ ಮೇಲೆ ನೀರನ್ನು ಸೊಂಡಿಲಿನಿಂದ ಊದಿ ಒಂಟೆಗೆ ಸ್ನಾನ ಮಾಡಿಸಿದೆ. ಬಹುಶಃ ಒಂಟೆ ಕೂಡಾ ಗಜರಾಜನು ಇಂತಹ ತುಂಟಾಟ ಆಡುವನು ಎಂದು ನಿರೀಕ್ಷೆ ಮಾಡಿರಲಿಲ್ಲ ಎನ್ನುವಂತೆ ಕಂಡಿದೆ. ಆನೆಯ ಈ ವೀಡಿಯೋ ನೋಡಿ ನೆಟ್ಟಿಗರು ಸಂತಸದಿಂದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ವಿಡಿಯೋ ನೋಡಿ
Keeping the camel cool😎 pic.twitter.com/9szV1xcPlN
— Susanta Nanda IFS (@susantananda3) October 7, 2020
ವಿಡಿಯೋ ನೋಡಿದವರಲ್ಲಿ ಒಬ್ಬರು ಎಂತಹ ಮುಗ್ಧ ಹಾಗೂ ಸ್ಟಾರ್ಟ್ ಪ್ರಾಣಿಗಳು, ಇವುಗಳನ್ನು ಕೊ ಲ್ಲು ವುದನ್ನು ಇನ್ನಾದರೂ ನಿಲ್ಲಲಿ, ಅವುಗಳ ಮನೆಯನ್ನು ನಾವು ಹಾಳಮಾಡಬಾರದು ಎಂದಿದ್ದಾರೆ. ಮತ್ತೊಬ್ಬರು ಮೊಟಾ ಭಾಯ್ ಇನ್ ಮಸ್ತಿ ಮೂಡ್ ಎಂದಿದ್ದಾರೆ. ಕೆಲವರು ನೀರಿಲ್ಲದ ಜಾಗದಿಂದ ಬಂದಿರುವೆ ಎಂದು ಆನೆ ಒಂಟೆಯನ್ನು ಟೀಸ್ ಮಾಡಿದೆ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದೆ. ಒಂಟೆಗೆ ತಮಾಷೆ ಮಾಡಿ ಕಳ್ಳ ನಗು ಬೀರುವ ಆನೆಯನ್ನು ನೋಡಿ ಎಂದು ಕೆಲವರು ಹೇಳಿದ್ದಾರೆ. ಒಟ್ಟಾರೆ ಆನೆಯ ಈ ತುಂಟಾಟವು ನೆಟ್ಟಿಗರಿಗೆ ಭರ್ಜರಿ ಮನರಂಜನೆ ನೀಡಿದೆ.