ಒಂದು ಕಾಲದಲ್ಲಿ ಕೆಂಪು ಬತ್ತಿಯ ಕಾರುಗಳಲ್ಲಿ ಸಂಚರಿಸುತ್ತಿದ್ದ ಮಹಿಳೆ ಇಂದು ಹೊಟ್ಟೆ ತುಂಬಿಸಿಕೊಳ್ಳಲು ಕುರಿ ಮೇಯಿಸುತ್ತಿದ್ದಾಳೆ! ಕಾಲದ ಮಹಿಮೆ ಬಲ್ಲವರಾರು?

ಕಾಲ, ಸಮಯ ಅಥವಾ ಟೈಂ ಹೀಗೆ ವಿಭಿನ್ನ ಹೆಸರುಗಳಿಂದ ಕರೆದರೂ ಕೂಡಾ ಸಮಯಕ್ಕೆ ಇರುವ ಮಹತ್ವ ಭೂಮಿಯ ಮೇಲೆ ಇನ್ನಾವುದಕ್ಕೂ ಇಲ್ಲ. ಕಾಲಚಕ್ರ ಉರುಳಿದಂತೆ ಯಾರ ಜೀವನ ಏನಾಗುತ್ತದೆ ಎಂದು ಯಾರಿಂದಲೂ ಕೂಡಾ ಊಹಿಸುವುದು ಸಾಧ್ಯವಿಲ್ಲ‌‌. ಕಾಲ ಹೇಗೆ ವ್ಯಕ್ತಿಗಳ ಜೀವನವನ್ನು ಬದಲಾಯಿಸಬಲ್ಲುದು ಎಂದರೆ ಇಂದು ರಾಜನಾಗಿರುವವನು ನಾಳೆ ಭಿ ಕ್ಷು ಕನಾಗಬಹುದು ಅಥವಾ ಇಂದು ದಿ ವಾ ಳಿಯಾಗಿರುವವನು ನಾಳೆ ರಾಜನಾಗಿ ಸಕಲ ವೈಭೋಗಗಳನ್ನು ಕೂಡಾ ಪಡೆದು ಐಶಾರಾಮೀ ಜೀವನವನ್ನು ಕೂಡಾ ನಡೆಸಬಹುದು. ಕಾಲದ ಮಹಿಮೆಯನ್ನು ಬಲ್ಲವರು ಯಾರೂ ಇಲ್ಲ ಎಂದೇ ನಾವು ಹೇಳಬಹುದು‌.

ಇಂದು ನಾವು ಕೂಡಾ ಇಂತಹುದೇ ಒಂದು ವಿಷಯವನ್ನು ಹೇಳಲು ಹೊರಟಿದ್ದೇವೆ‌. ಈ ಘಟನೆಯಲ್ಲಿ ಬರುವ ಮಹಿಳೆ ಕೂಡಾ ಕಾಲ ಚಕ್ರದ ಗತಿಯಲ್ಲಿ ರಾಜನಂತೆ ಬಾಳಿದಾಕೆಯು ಇಂದು ದಿವಾಳಿಯಾಗಿ ಬಾಳುತ್ತಿರುವ ಕಥೆ‌. ಯಾರು ಈ ಮಹಿಳೆ? ಏನು ಆ ಕಥೆ? ಎನ್ನುವುದಾದರೆ ಇಂತಹ ಒಂದು ಘಟನೆ ನಡೆದಿರುವುದು ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ. ಇಲ್ಲಿನ ಜೂಲಿ ಎಂಬ ಮಹಿಳೆಯು ಕೆಲವು ವರ್ಚಗಳ ಹಿಂದೆ ದೊಡ್ಡ ದೊಡ್ಡ ಐಶಾರಾಮೀ ಕಾರುಗಳಲ್ಲಿ ಪ್ರಯಾಣ ಮಾಡುವುದು ಕಂಡು ಬರುತ್ತಿತ್ತು‌. ಆದರೆ ಇಂದು ಆಕೆ ರಸ್ತೆಗಳಲ್ಲಿ ನಡೆದಾಡುತ್ತಾ ಓಡಾಡುವುದು ಜನರ ಕಣ್ಣಿಗೆ ಬೀಳುತ್ತದೆ. ವಾಸ್ತವವಾಗಿ ಈ ಮಹಿಳೆ ಅಂದರೆ ಜೂಲಿ ಶಿವಪುರ ಜಿಲ್ಲೆಯ ಬರ್ದವಾಸ್ ಮೂಲದ ಈಕೆ ಶಿವಪುರಿ ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು.

ಆದರೆ ನೋಡು ನೋಡುತ್ತಲೇ ಕಾಲ ಹೇಗೆ ಬದಲಾಯಿತು ಎಂದರೆ ಹಿಂದೆ ಕೆಂಪು ಬತ್ತಿಯ ಸರ್ಕಾರಿ ಕಾರುಗಳಲ್ಲಿ ಸಂಚರಿಸುತ್ತಿದ್ದ ಜೂಲಿ, ಇಂದು ಯಾವ ಪರಿಸ್ಥಿತಿಯನ್ನು ತಲುಪಿದ್ದಾರೆ ಎಂದರೆ ಆಕೆ ತನ್ನ ಕುಟುಂಬದ ಪಾಲನೆ ಪೋಷಣೆಗಾಗಿ ಬಹಳ ಶ್ರಮವಹಿಸುತ್ತಿದ್ದು, ಆಕೆ ಜೀವನೋಪಾಯಕ್ಕಾಗಿ ಕುರಿಗಳನ್ನು ಮೇಯಿಸುತ್ತಾ ರಸ್ತೆಗಳಲ್ಲಿ ಕುರಿ ಕಾಯುವ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಾರೆ. ಹಿಂದೊಮ್ಮೆ ಜನರು ಮೇಡಂ ಮೇಡಂ ಎಂದು ಜನರು ಆಕೆಯ ಹಿಂದೆ ಮುಂದೆ ಓಡಾಡುತ್ತಿದ್ದರು. ಆದರೆ ಇಂದು ಆಕೆಯನ್ನು ಗಮನಿಸಿದರೂ ಗಮನಿಸಿದಂತೆ ಹೋಗುತ್ತಾರೆ.

2005 ರಲ್ಲಿ ಕೊಲಾರಸ್ ನ ಮಾಜಿ ಎಂಎಲ್ಎ ರಾಮ್ ಸಿಂಗ್ ಯಾದವ್ ಅವರು ಜೂಲಿಯನ್ನು ಜಿಲ್ಲಾ ಪಂಚಾಯತ್ ಸದಸ್ಯೆಯನ್ನಾಗಿ ಮಾಡಿದರು. ಅದಕ್ಕೂ ಮುನ್ನ ಜೂಲಿ ಕೂಲಿ ಕೆಲಸವನ್ನು ಮಾಡುತ್ತಿದ್ದರು‌. ಆಕೆ ಜಿಲ್ಲಾ ಪಂಚಾಯತಿ ಸದಸ್ಯೆ ಆದ ನಂತರ ಶಿವಪುರಿಯ ಮಾಜಿ ಶಾಸಕರಾದ ವಿರೇಂದ್ರ ರಘುವಂಶಿ ಅವರು ಆಕೆಯನ್ನು ಏಕಾಏಕೀ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆಯ ಸ್ಥಾನದಲ್ಲಿ ಕೂರಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಕೆ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಜನರಿಂದ ಆಕೆಗೆ ಗೌರವಾದರಗಳು ದೊರೆಯಲು ಆರಂಭವಾಯಿತು. ಜನರು ಆಕೆಯನ್ನು ಮೇಡಂ ಮೇಡಂ ಎಂದು ಕರೆಯಲು ಆರಂಭಿಸಿದರು.

ಆದರೆ ಈ ಗೌರವ, ಸ್ಥಾನ ಎಲ್ಲವೂ ಬಹಳ ದಿನಗಳ ವರೆಗೆ ಉಳಿಯಲಿಲ್ಲ. ಆಕೆಯ ಜೀವನದಲ್ಲಿ ಸೋಲುಗಳು ಎದುರಾಗಲು ಆರಂಭಿಸಿದರು. ಆಕೆಯನ್ನು ಪಂಚಾಯಿತಿ ಸದಸ್ಯತ್ವದಿಂದ ತೆಗೆದು ಹಾಕಲಾಯಿತು. ಅದಾದ ನಂತರ ಆಕೆ ಬೇರೆ ದಾರಿಯಿಲ್ಲದೇ ತನ್ನ ಕುಟುಂಬವನ್ನು ಸಾಕಿ ಸಲುಹಲು ಕುರಿ ಕಾಯುವ ಕಾಯಕಕ್ಕೆ ಮರಳಲೇ ಬೇಕಾಯಿತು.


ಆದರೆ ಯಾವ ಜನರು ಕೆಲವೇ ದಿನಗಳ ಹಿಂದೆ ಮೇಡಂ ಮೇಡಂ ಎಂದು ಕರೆದು ಆಕೆಯ ಹಿಂದೆ ಮುಂದೆ ಸುತ್ತುತ್ತಿದ್ದರೋ, ಅವರೇ ಆಕೆಯನ್ನು ಈಗ ಗುರುತಿಸಲು ಕೂಡಾ ಹಿಂದೇಟು ಹಾಕುತ್ತಿದ್ದಾರೆ ಎಂದರೆ ಜಗತ್ತು ಹೀಗೇನಾ? ಅಧಿಕಾರ, ಸ್ಥಾನಕ್ಕೆ ಇರುವ ಬೆಲೆ ವ್ಯಕ್ತಿಗಳಿಗೆ ಇಲ್ಲವಲ್ಲಾ ಎನ್ನುವ ಆಲೋಚನೆ ಮೂಡುತ್ತದೆ.