ಟಾಟಾ ಮೋಟಾರ್ಸ್ ನಲ್ಲಿ ಕೆಲಸ ಮಾಡುವ ಕಾರ್ಮಿಕ IPS ಆಗಿ 25 ವರ್ಷಗಳ ನಂತರ ರತನ್ ಟಾಟಾ ಅವರಿಗೆ ಭೇಟಿಯಾದಾಗ…

ಮಿತ್ರರೇ ನಿಜಜೀವನದಲ್ಲಿ ಅನೇಕ ಜನ ತಮ್ಮ ಪ್ರತಿಕೂಲ ಪರಿಸ್ಥಿಯಿಂದ ಪಾಠ ಕಲಿತು ಅದರ ಮೇಲೆ ಗೆಲುವು ಸಾಧಿಸಿ ಶ್ರೀಮಂತರಾಗಿದ್ದಾರೆ. ಇದರಲ್ಲಿ ಕೆಲವರು ಯಾರದೋ ಸಹಾಯ ಪಡೆದು ಇನ್ನು ಕೆಲವರು ತಮ್ಮದೇ ಸ್ವಂತ ಇಚ್ಛಾಶಕ್ತಿಯಿಂದ ಬೆಳೆದು ದೊಡ್ಡವರಾಗಿದ್ದಾರೆ. ಯಾರು ಕಷ್ಟದಿಂದ ಮೇಲೆ ಬಂದಿರುತ್ತಾರೆ ಅಂಥವರು ತಾವು ಪಟ್ಟ ಕಷ್ಟ ತಮಗೆ ಮಾಡಿದವರ ಉಪಕಾರ ಯಾವತ್ತೂ ಮರೆಯುವದಿಲ್ಲ.ಅಂಥವರದೇ ಒಬ್ಬರ ಕಥೆಯನ್ನು ನಾವಿಲ್ಲಿ ಓದುವಾ. ಮಹೇಶ್ ಭಾಗವತ್ ಹೆಸರಿನ ವ್ಯಕ್ತಿ ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ಪಾಥರ್ಡಿ ತಾಲೂಕಿನ ನಿವಾಸಿ.ಆತ 26 ವರ್ಷ ಮುಂಚೆ ಟಾಟಾ ಅವರ ಟಾಟಾ ಮೋಟಾರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಮಹೇಶ್ ನ ತಂದೆ ವೃತ್ತಿಯಿಂದ ಶಿಕ್ಷಕರಾಗಿದ್ದರು.ಮಗ ಮಾತ್ರ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ತೆಗೆದುಕೊಂಡಿದ್ದನು.ನಂತರ 1993 ರಲ್ಲಿ ಟಾಟಾ ಮೋಟಾರ್ಸ್ ನಲ್ಲಿ ಕೆಲಸಕ್ಕೆ ಹಾಜರಾದನು.ಮುಂದೆ ಕೆಲದಿವಸಗಳ ನಂತರ ಮಹೇಶ್ IPS ಪರೀಕ್ಷೆಯಲ್ಲಿ ಪಾಸಾದನು.ತದನಂತರ ಆಂದ್ರಪ್ರದೇಶದಲ್ಲಿ IPS ಆಗಿ ಕರ್ತವ್ಯನಿರತರಾಗಿದ್ದಾಗಲೇ ತೆಲಂಗಾಣ ಹೊಸ ರಾಜ್ಯ ಉದಯಕ್ಕೆ ಬಂತು. ಚಿಕ್ಕಮಕ್ಕಳ ಕಳ್ಳಸಾಗಾಣಿಕೆ ಹಾಗೂ ಸ್ತ್ರೀಯರ ಸಲುವಾಗಿ ವಿಶೇಷ ಕಾರ್ಯಗಳನ್ನು ಮಾಡಿದರು.

ಇಷ್ಟೆಲ್ಲ ಮಾಡುವಾಗ ಮಹೇಶ್ ಅವರು ಅಲ್ಲಿಯ ತೆಲುಗು ಭಾಷೆ ಬೇರೆ ಕಲಿತಿದ್ದಾರೆ.ಮುಂದೆ ಆದಿಲಾಬಾದ್ ನಲ್ಲಿ ಟಾಟಾ ಏರೋಸ್ಪೇಸ್ ಬೋಯಿಂಗ್ ಪ್ಲಾಂಟ್ ಉದ್ಘಾಟನೆಯ ಸಂದರ್ಭದಲ್ಲಿ ಮಹೇಶ್ ಅವರು ಕರ್ತವ್ಯದಲ್ಲಿದ್ದಾಗ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆಟಿಆರ್ ಅವರು ಮಹೇಶ್ ಭಾಗವತ್ ರ ಪರಿಚಯ ಟಾಟಾ ಅವರಿಗೆ ಮಾಡಿ ಕೊಟ್ಟಾಗ IPS ಮಹೇಶ್ ಭಾಗವತ್ ಅವರು ವಿನಮ್ರದಿಂದ ಮತ್ತು ಅಷ್ಟೇ ಗದ್ಗದಿತರಾಗಿ ಹೇಳಿದ್ದು ಈ ಕ್ಷಣ ನನ್ನ ಜೀವನದಲ್ಲಿಯೂ ಅವಿಸ್ಮರಣಿಯವಾದ ಕ್ಷಣಗಳೆಂದು ವರ್ಣನೆ ಮಾಡಿ ಅವರೊಂದಿಗಿನ ಫೋಟೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತ ಅದಕ್ಕೆ ಕೊಟ್ಟ ಕ್ಯಾಪ್ಶನ್ ಏನಂದ್ರೆ..’ಮೈನೆ ಟಾಟಾ ಕಾ ನಮಕ್ ಖಾಯಾ ಹೈ’ (ನಾನು ಟಾಟಾ ಅವರ ಉಪ್ಪು ತಿಂದಿದ್ದೇನೆ) ಎಂದು ಹೆಮ್ಮೆಯಿಂದ ಮೊದಲಿನ ಸಹಾಯ ಮಾಡಿದವರ,ಪರಿಶ್ರಮ ಮತ್ತು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳಿದ್ದಾರೆ.