OMG! ಈ ಸುಂದರ ಹುಡುಗಿ ಜೊತೆಗೆ ಮದುವೆಯಾದರೆ ಸಿಗುತ್ತವೆ 1200 ಕೋಟಿ ರೂಪಾಯಿ; ಆದರೂ ಮದುವೆಯಾಗಲು ಹಿಂಚರಿಯುತ್ತಿರುವ ಹುಡುಗರು!
ಬದುಕಿರುವವರೆಗೆ ಹಣವನ್ನು ಗಳಿಸುತ್ತಲೇ ಇರಬೇಕು ಮತ್ತು ಕೋಟ್ಯಾಧೀಶರಾಗಬೇಕು ಎಂಬ ಬಯಕೆ ಹೆಚ್ಚುಕಡಿಮೆ ಎಲ್ಲರಿಗೂ ಇರುತ್ತೆ. ಈ ಲೇಖನದ ತಲೆಬರಹವನ್ನು ಓದಿದ ಮೇಲೆ ಪ್ರತಿಯೊಬ್ಬನು 1200 ಕೋಟಿ ರೂಪಾಯಿಗಳನ್ನು ಪಡೆಯಬೇಕೆಂದು ಯೋಚಿಸುತ್ತಾನೆ. ಅದು ಲಗ್ನ ಮಾಡಿಕೊಳ್ಳಲು. ಈ ಡೀಲನ್ನು ಯಾರಾದರೂ ತಳ್ಳಿಹಾಕುವರೇ?
ಪ್ರತಿಯೊಬ್ಬ ತಂದೆಯು ತನ್ನ ಮುದ್ದಿನ ಮಗಳಿಗಾಗಿ ಒಳ್ಳೆಯ ವರವನ್ನೆ ಶೋಧಿಸುವ ವಿಚಾರದಲ್ಲಿರುತ್ತಾನೆ. ಇದೇ ರೀತಿ ಹಾಂಗ್ ಕಾಂಗ್ ನಲ್ಲಿಯ ತಂದೆಯೊಬ್ಬ ತನ್ನ ಮಗಳಿಗಾಗಿ ಲೆಕ್ಕವಿಲ್ಲದಷ್ಟು ಹಣವನ್ನು ಖರ್ಚು ಮಾಡಲು ತಯಾರಿರುವಾಗ ಆತನಿಗೆ ಅಳಿಯ ಅಥವಾ ಆತನ ಮಗಳಿಗೆ ಒಳ್ಳೆಯ ವರನೊಬ್ಬ ಸಿಗುತ್ತಿಲ್ಲ.

ಯಾವುದೇ ತಂದೆ ತನ್ನ ಜೀವಮಾನವೆಲ್ಲ ಮಕ್ಕಳಿಗಾಗಿಯೇ ವ್ಯಯಿಸುತ್ತಾನೆ. ಹಾಗೆ ಈ ತಂದೆಯೂ ಕೂಡ ತನ್ನ ಮಗಳಿಗಾಗಿ ನೀರಿನಂತೆ ಹಣವನ್ನು ಖರ್ಚು ಮಾಡುತ್ತಿರುವಾಗ ಮಗಳಿಗೆ ಒಳ್ಳೆಯ ಗಂಡ ಸಿಗುತ್ತಿಲ್ಲವೆಂದರೆ ಇಂಥ ದುರ್ದೈವ ಬೇರೆ ಏನಿದೆ ಅಲ್ವಾ?
ತಂದೆಯ ಹೆಸರು ಸೆಸಿಲ್ ಚಾವೋ ಇದ್ದು ಈತನ ಹತ್ತಿರ ಅನೇಕ ಹಡಗುಗಳಿವೆ, ಜೊತೆಗೆ ತುಂಬಾ ಆಸ್ತಿಯುಳ್ಳ ಶ್ರೀಮಂತ ವ್ಯಕ್ತಿಯಾಗಿದ್ದಾನೆ. ಈತ ಈಗ 77 ರ ಹರೆಯದವನಾಗಿದ್ದಾನೆ. ಈ ಸಿರಿವಂತನ ಮಗಳೇ 33 ವರ್ಷದ ಗಿನ್ನಿ ಚಾವೋ ಆಗಿದ್ದಾಳೆ.
ಹಣವಿದ್ದರೆ ಎಲ್ಲವೂ ಆಗುತ್ತೆ, ಏನು ಬೇಕಾದರೂ ಸಾಧಿಸಬಹುದು ಎಂಬ ಪ್ರವೃತ್ತಿಯುಳ್ಳವರಾಗಿದ್ದರೆ ಅದು ಶುದ್ಧ ಸುಳ್ಳು. ಯಾಕೆಂದರೆ ಇಲ್ಲಿ ಕೋಟ್ಯಾವಧಿ ರೂಪಾಯಿಗಳು ದೊರೆಯುತ್ತಿದ್ದರೂ ವರವೇಕೆ ಸಿಗುತ್ತಿಲ್ಲ ಎಂಬುದರ ಹಿಂದಿನ ಕಾರಣವೇನು ನೀವೇ ನೋಡಿ…
ಇಲ್ಲಿ ಮೊದಲ ಸಮಸ್ಯೆ ಏನೆಂದರೆ, ಗಿನ್ನಿಯು ಸಮಲಿಂಗಿಯಾಗಿದ್ದಾಳೆ. ಆಕೆಯ ಮದುವೆಯ ಕಾರಣಕ್ಕಾಗಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಚರ್ಚೆಯ ವ್ಯಕ್ತಿಯಾಗಿದ್ದಾಳೆ. ಜೊತೆಗೆ ಆಕೆಯ ತಂದೆ ಕೊಡುತ್ತಿರುವ ಈ ಹಣ ತುಂಬಾ ಚರ್ಚೆಯ ವಿಷಯವಾಗಿದೆ. ಹಾಗೂ ನಾಲ್ಕು ವರ್ಷಗಳಿಂದ ತಂದೆಯು ಮಗಳಿಗೆ ಒಂದರ ನಂತರ ಒಂದು ವರಗಳನ್ನು ತಂದು ಭೆಟ್ಟಿ ಮಾಡಿಸುತ್ತಿದ್ದಾನೆ. ಆದರೆ ಒಂದು ವರವು ಗಿನ್ನಿಗೆ ಇಷ್ಟವಾಗುತ್ತಿಲ್ಲ. ಅಥವಾ ಅವೆಲ್ಲವನ್ನೂ ಗಿನ್ನಿ ಖಡಾಖಂಡಿತವಾಗಿ ಒಪ್ಪಿಕೊಳ್ಳುತ್ತಿಲ್ಲ. ಈ ಕಾರಣದಿಂದಾಗಿ ಆಕೆಯ ತಂದೆಯು ಬಹಳ ಅಸ್ವಸ್ಥನಾಗುತ್ತಿದ್ದಾನೆ. ನಿನಗೆ ಎಂಥ ವರವಾದರೂ ಬೇಕು ಹೇಳು ಎಂದಾಗ ಗಿನ್ನಿ ಹೇಳುತ್ತಾಳೆ ನನಗೆ ಹುಡುಗರಗಿಂತ ಹುಡುಗಿಯರೂ ತುಂಬಾ ಇಷ್ಟವೆಂದು ಹೇಳುತ್ತಾಳೆ.

ಸದ್ಯ ಗಿನ್ನಿ 6 ವರ್ಷಗಳಿಂದ ಒಂದು ಹುಡುಗಿಯ ಜೊತೆಗೆ ರಿಲೇಶನ್ ನಲ್ಲಿದ್ದಾಳೆ. ಈ ಎಲ್ಲ ಕಾರಣಗಳಿಂದ ನೊಂದ ಮತ್ತು ಹೆದರಿದ ತಂದೆ ತನ್ನ ಮಗಳ ಮದುವೆಯ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಜಾಹೀರು ಮಾಡಿಬಿಟ್ಟ. ಯಾರು ಬಂದು ನನ್ನ ಮಗಳಿಗೆ ಮದುವೆಯಾಗುತ್ತೀರೋ ಅವರಿಗೆ 1200 ಕೋಟಿ ರೂಪಾಯಿಗಳನ್ನು ಕೊಡುತ್ತೇನೆ ಎಂದು.