ಮನೆಯಲ್ಲಿಯ ‘ಈ’ ವಸ್ತು ಬಳಸಿ, ಕೇವಲ 5 ನಿಮಿಷದಲ್ಲಿ ಧಾನ್ಯಗಳಲ್ಲಿಯ ಕೀಟಗಳು ಓಡಿ ಹೋಗುವವು! ಮತ್ತೆಂದು ಆಗುವುದಿಲ್ಲ..
ಧಾನ್ಯಗಳಲ್ಲಿ ಕೀಟಗಳಾಗುವದು ಸರ್ವೇ ಸಾಮಾನ್ಯ. ಈ ಸಮಸ್ಯೆ ಹಳ್ಳಿಯವರಿಗಿಂತ ಪಟ್ಟಣದಲ್ಲಿರುವವರಿಗೆ ತುಂಬಾ ಸತಾಯಿಸುತ್ತದೆ. ಹಳ್ಳಿಯಲ್ಲಾದರೆ ಧಾನ್ಯಗಳನ್ನು ಆಗಾಗ ಮನೆಯ ಮಾಳಿಗೆಯ ಮೇಲೆ ಅಥವಾ ಅಂಗಳದಲ್ಲಿ ಬಿಸಿಲಿಗೆ ಹಾಕುವದರಿಂದ ಕೀಟಗಳ ಸಮಸ್ಯೆ ಅಷ್ಟೊಂದು ಕಂಡು ಬರುವದಿಲ್ಲ. ಒಂದು ವೇಳೆ ಕಂಡು ಬಂದರೂ ಅದಕ್ಕೆ ಹಳ್ಳಿಯವರು ಬಿಸಿಲಿನಲ್ಲಿ ಹಾಕುವದರಿಂದ ಈ ಸಮಸ್ಯೆ ದೂರವಾಗುವದು.
ಧಾನ್ಯಗಳಲ್ಲಿ ಕೀಟಗಳ ನಿಜವಾದ ಸಮಸ್ಯೆ ಪಟ್ಟಣವಾಸಿಗರಿಗೆ ತುಂಬಾ ಹೆಚ್ಚಾಗಿರುತ್ತೆ. ಯಾಕೆಂದರೆ, ಅಪಾರ್ಟ್ ಮೆಂಟ್ ಗಳಲ್ಲಿ ಇರಲಿ, ಬಂಗಲೆಗಳಲ್ಲಿ ಇರಲಿ, ಅಥವಾ ಬಾಡಿಗೆಯ ಮನೆಗಳಲ್ಲಿ ಇರಲಿ, ಮನೆಗಳು ಚಿಕ್ಕದಿರಲಿ, ಇಲ್ಲ ದೊಡ್ಡದು ಹೀಗೆ ಏನೇ ಇರಲಿ ಇಲ್ಲಿ ಅಂಗಳ ಅಥವಾ ಮಾಳಿಗೆ ಸಮಸ್ಯೆಗಳು ಇರುವದರಿಂದ ಮನೆಯಲ್ಲಿ ಸರಿಯಾಗಿ ಗಾಳಿ ಬೆಳಕು ಆಡದಿರುವದರಿಂದ ಧಾನ್ಯಗಳಲ್ಲಿ ಕೀಟಗಳು ಆಗಲಾರಂಭಿಸುತ್ತವೆ.
ಮನೆಗೆ ಬೇಕಾಗುವ ಸಾಮಾನು ಸರಂಜಾಮುಗಳ ಸಂತೆ ಮಾಡುವಾಗ ಮನುಷ್ಯ ಹೆಚ್ಚಾಗಿ ಒಮ್ಮೆಲೇ ಖರೀದಿಸುವ ವಿಚಾರ ಮಾಡುತ್ತಾನೆ. ಮೇಲಿಂದ ಮೇಲೆ ಎಲ್ಲಿ ಅಂಗಡಿಗೆ ಬರುವದು ಎಂಬ ಉದ್ದೇಶ ಇದರ ಹಿಂದೆ ಇರುತ್ತದೆ. ಇನ್ನು ಕೆಲವರು ತಮ್ಮೂರಿನಿಂದ ಬರುವಾಗ ಮನೆಗೆ ಬೇಕಾಗುವ ಕಾಳು ಕಡಿಗಳನ್ನು ಮನೆಯಿಂದಲೇ ಇಲ್ಲ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಊರಿಂದಲೇ ತರುತ್ತಾರೆ.ತಂದ ಈ ವಸ್ತುಗಳಲ್ಲಿಯೂ ಬಹಳ ದಿನಗಳಾದ ಮೇಲೆ ಅದರಲ್ಲಿಯೂ ಕೀಟಗಳು ಕಾಣಿಸುತ್ತವೆ.
ಈ ಕೀಟಗಳಲ್ಲಿ ಪ್ರಾಮುಖ್ಯವಾಗಿ ನುಸಿ ಹುಳ ಅಥವಾ ಕೀಟ ಮತ್ತು ಜಾಳಿಗೆಯನ್ನು ತಯಾರಿಸುವ ಹುಳ ಇವು ಹೆಚ್ಚಾಗಿ ಧಾನ್ಯಗಳಲ್ಲಿ ಕಂಡು ಬರುತ್ತವೆ. ಇವು ಒಂದು ವೇಳೆ ಧಾನ್ಯಗಳಲ್ಲಿ ಸೇರಿದರೆ ಆಯ್ತು ಧಾನ್ಯಗಳನ್ನು ಬೀಸಾಕಬೇಕಾಗುತ್ತದೆ ಇಲ್ಲವೇ ಅದು ಉಪಯೋಗಿಸಲು ಯೋಗ್ಯವಿರುವದಿಲ್ಲ. ಆಕಾರದಲ್ಲಿ ಸ್ವಲ್ಪ ಚಿಕ್ಕ ಕಾಳು ಕಡಿಗಳಾದ ಹೆಸರು, ಮೂಕಣಿ, ಜೋಳ ಇಂಥವುಗಳಲ್ಲಿ ಸೇರಿ ಕುಳಿತುಕೊಂಡರೆ ನಾವು ಮೇಲಿನಿಂದ ಎಷ್ಟೇ ಔಷಧವನ್ನು ಸಿಂಪಡಿಸಿದರೂ ಮತ್ತು ಕೀಟನಾಶಕ ಪೌಡರ್ ವನ್ನು ಚೆಲ್ಲಿದರೂ ಅದರಲ್ಲಿಂದ ಹೊರಗೂ ಬರುವದಿಲ್ಲ. ಇದರ ಹೊರತಾಗಿ ಬೇರೆ ಬೇರೆ ಕೆಮಿಕಲ್ಸ್, ಗುಳಿಗೆಗಳನ್ನು ಉಪಯೋಗಿಸಿದರೂ ಸಮಸ್ಯೆ ದೂರಾಗುವದಿಲ್ಲ. ಅದಕ್ಕಾಗಿ ಈ ಲೇಖನದಲ್ಲಿ ನಾವು ಹೇಳುವ ಉಪಾಯವನ್ನೊಮ್ಮೆ ಮಾಡಿ ನೋಡಿ.
ನಿಮ್ಮ ಮನೆಯಲ್ಲಿರುವ ಧಾನ್ಯಗಳಲ್ಲಿ, ಮನೆಗಾಗಿ ಓದಲು ತೆಗೆದುಕೊಳ್ಳುವ ವೃತ್ತಪತ್ರಿಕೆಗಳ ಚೂರುಗಳನ್ನು ಮಾಡಿ ಅದರಲ್ಲಿ ಬೆರೆಸಿ ಇಡಿ. ಈ ನ್ಯೂಸ್ ಪೇಪರ್ ಗಳ ವಾಸನೆಯಿಂದ ಎಂದಿಗೂ ಈ ಹುಳಗಳು ನಿಮಗೆ ಧಾನ್ಯಗಳಲ್ಲಿ ಕಂಡು ಬರುವದಿಲ್ಲ. ಮತ್ತು ನಿಮಗೆ ತೊಂದರೆಯೂ ಕೊಡುವದಿಲ್ಲ. ಈಗಾಗಲೇ ಕಾಳು ಕಡಿಯಲ್ಲಿ ಮೊದಲೇ ಒಂದು ವೇಳೆ ಈ ರೀತಿಯ ಕೀಟಗಳು ಇದ್ದರೂ ಈ ಉಪಾಯವನ್ನು ಮಾಡುವದರಿಂದ ಅವುಗಳು ಸಹ ಕಡಿಮೆಯಾಗುವವು.
ಈ ನ್ಯೂಸ್ ಪೇಪರ್ ಗಳ ತುಕಡಿಗಳನ್ನು ಬೆರೆಸುವದರಿಂದ ಇನ್ನೊಂದು ಲಾಭವೇನೆಂದರೆ, ನಮಗೆ ಅವಶ್ಯಕತೆಯಿದ್ದಾಗ ಧಾನ್ಯಗಳನ್ನು ತೆಗೆದುಕೊಳ್ಳುವಾಗ ಸುಲಭವಾಗಿ ಇವುಗಳನ್ನು ಬೇರ್ಪಡಿಸಬಹುದು. ಇದು ಯಾವ ರೀತಿಯ ಕೆಮಿಕಲ್ ಸಹಿತ ಅಲ್ಲ. ಹೇಗಿದೆ ಫ್ರೆಂಡ್ಸ್ ಇದೆಯಲ್ಲ ತುಂಬಾ ಸರಳ ಉಪಾಯ?