ಮೊಟ್ಟೆ ಇಡಲು ಸುರಕ್ಷಿತ ಜಾಗ ಹುಡುಕಿದ ಹಕ್ಕಿಗಳು; ಇದ್ದಕಿದ್ದಂತೆ ಎಂಟ್ರಿ ಕೊಟ್ಟ ಲಿಜಾರ್ಡ್! ಮುಂದೇನಾಯಿತು ನೋಡಿ ಈ Viral Video

ಮನುಷ್ಯರೇ ಆಗಲೀ ಪ್ರಾಣಿಗಳೇ ಆಗಲಿ ಅವುಗಳು ಬಿಸಿಲು, ಚಳಿ, ಗಾಳಿ ಮತ್ತು ಮಳೆಯಿಂದ ತಮ್ಮನ್ನು ತಮ್ಮ ಮಕ್ಕಳು, ತಮ್ಮ ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಒಂದು ಸೂರು ಅನಿವಾರ್ಯವಾಗಿರುತ್ತದೆ. ಸೂರು ಅಥವಾ ತಮ್ಮ ಆಶ್ರಯವನ್ನು ನಿರ್ಮಾಣ ಮಾಡುವಾಗ ಅದೊಂದು ಸುರಕ್ಷಿತ ತಾಣವಾಗಿರಬೇಕೆಂದು ಬಯಸುವುದು ಕೂಡಾ ಸಹಜ. ಮನುಷ್ಯರಿಗಿಂತ ಈ ವಿಚಾರದಲ್ಲಿ ಪ್ರಾಣಿ ಪಕ್ಷಿಗಳು ಹೆಚ್ಚು ಜಾಗ್ರತೆಯನ್ನು ವಹಿಸುವ ಅನಿವಾರ್ಯತೆ ಕೂಡಾ ಅವುಗಳಿಗೆ ಇವೆ. ಏಕೆಂದರೆ ಪಕ್ಷಿಗಳು ಅಥವಾ ಪ್ರಾಣಿಗಳು ಆಹಾರಕ್ಕಾಗಿ ಹೊರಗೆ ಹೋದಾಗ, ತಮ್ಮ ಮರಿಗಳ ಸಂರಕ್ಷಣೆಯ ಜವಾಬ್ದಾರಿ ಕೂಡಾ ಅವುಗಳ ಮೇಲೆ ಇರುತ್ತದೆ. ಅವು ಅದಕ್ಕಾಗಿಯೇ ಗೂಡನ್ನು ನಿರ್ಮಾಣ ಮಾಡುವಾಗ ಸಾಕಷ್ಟು ಜಾಗ್ರತೆಯನ್ನು ವಹಿಸುತ್ತವೆ.

ಸಾಮಾನ್ಯವಾಗಿ ಪಕ್ಷಿಗಳು ಮರಗಳ ಮೇಲೆ ಎತ್ತರವಾದ ಜಾಗಗಳಲ್ಲಿ ಮೊಟ್ಟೆಗಳನ್ನು ಇಡಲು, ಮರಿಗಳನ್ನು ಸಾಕಲು ಗೂಡುಗಳನ್ನು ಕಟ್ಟುತ್ತವೆ. ಹಾಗಿದ್ದರೂ ಕೂಡಾ ಅವು ಸಂಪೂರ್ಣವಾಗಿ ಅ ಪಾ ಯದಿಂದ ಮುಕ್ತವಾಗಿರುವುದಿಲ್ಲ ಎನ್ನುವುದು ಕೂಡಾ ವಾಸ್ತವ. ಆದರೆ ಪಕ್ಷಿಗಳು ಗೂಡನ್ನು ನಿರ್ಮಾಣ ಮಾಡುವಾಗ ತಾವು ಎಚ್ಚರಿಕೆಯನ್ನು ವಹಿಸುವುದು ಮಾತ್ರ ಸಹಜ. ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಕೂಡಾ ಎರಡು ಡಿಕ್ಕಾಪ್ ಪ್ರಬೇಧದ ಪಕ್ಷಿಗಳು ಗೂಡೊಂದನ್ನು ಕಟ್ಟಲು ಹುಡುಕಿದ ಒಂದು ವಿಶೇಷವಾದ ಸುರಕ್ಷಿತವಾದ ತಾಣದಲ್ಲಿ ನಿರ್ಮಾಣ ಮಾಡಲು ಹೋದ ದೃಶ್ಯವು ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.

ಹಾಗಾದರೆ ಆ ಸ್ಥಳದ ವಿಶೇಷ ಏನು? ಅಲ್ಲಿ ಏನು ನಡೆಯಿರತು? ಬನ್ನಿ ನಾವು ಕೂಡಾ ತಿಳಿಯೋಣ. ಎರಡು ಡಿಕ್ಕಾಪ್ ಪಕ್ಷಿ ಜೋಡಿಯು ತಮ್ಮ ಗೂಡನ್ನು ಕಟ್ಟಲು ಒಂದು ಸುಭದ್ರವಾದ ಜಾಗವನ್ನು ಹುಡುಕಿವೆ. ಅವು ಹುಡುಕಿರುವ ಜಾಗ ಕೂಡಾ ಬಹಳ ಆಸಕ್ತಿಕರವಾದ ಜಾಗವಾಗಿದೆ‌. ಏಕೆಂದರೆ ಅವು ಹುಡುಕಿದ ಜಾಗ ಕಡಲ ತೀರವೊಂದರಲ್ಲಿ ಮೊಸಳೆಯೊಂದು ಇರುವ ಜಾಗದಲ್ಲಿ, ತಮ್ಮನ್ನು ತಾವು ಪರಭಕ್ಷಕ ಜೀವಿಗಳಿಂದ ರಕ್ಷಣೆ ಮಾಡಿಕೊಳ್ಳಲು ಗೂಡನ್ನು ನಿರ್ಮಾಣ ಮಾಡಲು ಹೊರಟಿವೆ. ಆದರೆ ಅವುಗಳ ಈ ಆಲೋಚನೆ ಅದೇಕೋ ಅಲ್ಲಿ ಸಫಲವಾಗಿಲ್ಲ.

ಏಕೆಂದರೆ ಅವು ಗೂಡು ನಿರ್ಮಾಣ ಕಾರ್ಯಕ್ಕೆ ಅನುವಾಗಿ ಹೆಚ್ಚು ಸಮಯ ಆಗುವ ಮೊದಲೇ ಅಲ್ಲಿಗೆ ಬಂದಿದೆ ಒಂದು ಲಿಜಾರ್ಡ್ (ದೊಡ್ಡ ಹಲ್ಲಿ). ಪಾಪ ಎರಡು ಹಕ್ಕಿಗಳು ಕೂಡಾ ಸುರಕ್ಷಿತವಾದ ಸ್ಥಾನದಲ್ಲಿ ಗೂಡನ್ನು ನಿರ್ಮಾಣ ಮಾಡೋಣ ಎಂದು ಆಸೆಯಿಂದ ಬಂದರೆ ಅಲ್ಲಿ ಅವುಗಳಿಗೆ ಎದುರಾಗಿದೆ ಅನಿರೀಕ್ಷಿತವಾದ ಅಪಾಯ. ಎರಡು ಹಕ್ಕಿಗಳು ಕೂಡಾ ಲಿಜಾರ್ಡ್ ಅನ್ನು ನೋಡಿದ ಕೂಡಲೇ ಅದನ್ನು ಅಲ್ಲಿಂದ ಓಡಿಸಲು ಅದರ ಮೇಲೆ ಧಾ ಳಿ ಇಟ್ಟಿವೆ. ಎರಡು ಹಕ್ಕಿಗಳು ಕೂಡಾ ರೆಕ್ಕೆಗಳನ್ನೇ ತಮ್ಮ ಆ ಯು ಧಗಳನ್ನಾಗಿ ಮಾಡಿಕೊಂಡು ವೀರಯೋಧರಂತೆ ಲಿಜಾರ್ಡ್ ಮೇಲೆ ಆ ಕ್ರ ಮಣ ಮಾಡಲು ಹೊರಟಿವೆ.

ವಿಡಿಯೋ ನೋಡಿ

ಆ ಲಿಜಾರ್ಡ್ ಕೂಡಾ ಹಕ್ಕಿಗಳನ್ನು ಎದುರಿಸಿದೆ, ಅವುಗಳ ಆ ಕ್ರ ಮಣಕ್ಕೆ ಸರಿಯಾದ ಉತ್ತರವನ್ನು ನೀಡುವ ಪ್ರಯತ್ನವನ್ನು ಮಾಡಿದೆ. ಆದರೆ ಎರಡೂ ಹಕ್ಕಿಗಳು ಒಂದೇ ಸಮನೆ ಮಾಡಿದ ಧಾ ಳಿ ಗೆ ಬೇಸತ್ತ ಲಿಜಾರ್ಡ್ ಅಲ್ಲಿಂದ ದೂರ ಹೋಗಿದೆ. ಅದು ಹೋಗುವವರೆಗೆ ಹಕ್ಕಿಗಳು ಕೂಡಾ ಅದರ ಹಿಂದೆ ಬಿದ್ದಿದ್ದವು‌. ಲಕ್ಷಾಂತರ ಜನ ವೀಕ್ಷಣೆ ಮಾಡಿರುವ ಈ ವೀಡಿಯೋಗೆ ಪ್ರತಿಕ್ರಿಯೆ ನೀಡಿದ ಮಂದಿ, ಹಕ್ಕಿಗಳನ್ನು ಗುಡ್ ಬರ್ಡ್ಸ್ ಎಂದಿದ್ದಾರೆ. ಕೆಲವರು ಸೋಮಾರಿ ಹಕ್ಕಿಗಳು ಮೊಟ್ಟೆ ಇಡಲು ಸರಿಯಾದ ಜಾಗ ನೋಡದೇ ಯಾವುದೋ ಸಿಕ್ಕ ಜಾಗದಲ್ಲಿ ಮೊಟ್ಟೆಯಿಡಲು ಹೋಗಿದೆ ಎಂದು ಟೀಕೆ ಮಾಡಿದ್ದಾರೆ ಕೂಡಾ.