ಹಬ್ಬಕ್ಕೆ ಕಾರು ಕೊಳ್ಳುವ ಕನಸು ನನಸಾಗಿಸಿ; ಕೇವಲ ₹799 EMI ನಲ್ಲಿ TATA ಕಾರುಗಳು ಲಭ್ಯ!

ವಾಹನಗಳ ಖರೀದಿಗೆ ದಸರೆ ಮತ್ತು ದೀಪಾವಳಿ ಈ ಎರಡು ಮುಹೂರ್ತಗಳು ತುಂಬಾ ಶುಭವೆಂದು ತಿಳಿಯಲಾಗಿದೆ. ಸಂಪ್ರದಾಯದಲ್ಲಿ ನಂಬಿಕೆಯುಳ್ಳವರು ಈ ವಿಶೇಷ ದಿನಗಳಲ್ಲಿಯೇ ಏನಾದರೂ ಹೊಸ ಯೋಜನೆಯನ್ನು ಪೂರ್ಣ ಮಾಡುವ ಕನಸನ್ನು ನನಸಾಗಿಸಿಕೊಳ್ಳಲು ಯತ್ನಿಸುತ್ತಾರೆ.

ಇದೆ ಮುಹೂರ್ತವನ್ನು ಗಮನದಲ್ಲಿಟ್ಟುಕೊಂಡು ಟಾಟಾ ಮೋಟಾರ್ಸ್ ನವರು ಗ್ರಾಹಕರಿಗೆ ಒಳ್ಳೆಯ ಆಫರ್ ಗಳನ್ನು ತಂದಿದೆ. ಇದಕ್ಕಾಗಿ HDFC ಬ್ಯಾಂಕಿನ ಜೊತೆಗೆ ಕರಾರು ಮಾಡಿಕೊಂಡಿದೆ. ಈ ಕರಾರಿನ ಅಡಿಯಲ್ಲಿ ಬರೀ ನಿಮಗೆ 799 ರೂಪಾಯಿಗಳ EMI ನಲ್ಲಿ ಕಾರು ಖರೀದಿಸಬಹುದಾಗಿದೆ. Gradual Step Up Scheme ಮತ್ತು TML Flexi Drive Scheme ಈ ಎರಡು ಯೋಜನೆಗಳ ಅಡಿಯಲ್ಲಿ ತನ್ನ ಕಾರುಗಳ ಮಾರಾಟವನ್ನು ವೃದ್ಧಿಸಲು ಟಾಟಾ ಮೋಟಾರ್ ನಿರ್ಧರಿಸಿದೆ. ಈ ಯೋಜನೆ ನವಂಬರ್ 2020 ರ ವರೆಗೆ ಉಪಲಬ್ಧವಿದೆ.

ಟಾಟಾ ಕಂಪನಿಯು ನೀಡಿದ ವರದಿಯ ಪ್ರಕಾರ BS6 ರೇಂಜ್, SUV ಮತ್ತು ಇಲೆಕ್ಟ್ರಿಕ್ ಗಾಡಿಗಳ ಮೇಲೆ ಈ ಯೋಜನೆ ಜಾರಿ ಮಾಡಲಾಗಿದೆ. Gradual Step Up Scheme ಈ ಯೋಜನೆಯಲ್ಲಿ 799 ರೂಪಾಯಿಗಳ ಮಾಸಿಕ ಕಂತು ತುಂಬುವ ವ್ಯವಸ್ಥೆ ಗ್ರಾಹಕನಿಗೆ ನೀಡಲಾಗಿದೆ. ಇದರ ಹೊರತಾಗಿ ಗ್ರಾಹಕ ಯಾವ ಗಾಡಿಯನ್ನು ಇಷ್ಟ ಪಡುತ್ತಾನೆ. ಆ ಪ್ರಕಾರ ಮಾಸಿಕ ಕಂತಿನ ಮೇಲೆಯೂ ಪ್ರಭಾವ ಬೀರುವದು. ಆನಂತರ ಗ್ರಾಹಕರ ಕ್ಷಮತೆಯನ್ನು ನೋಡಿಕೊಂಡು ಎರಡು ವರ್ಷಗಳಲ್ಲಿ ನಿಧಾನವಾಗಿ EMI ಯಲ್ಲಿ ವೃದ್ಧಿ ಮಾಡಲಾಗುವದು. TML Flexi Drive Scheme ಈ ಯೋಜನೆಯಲ್ಲಿ ಗ್ರಾಹಕರಿಗೆ ವರ್ಷದಲ್ಲಿಯ ಮೂರು ತಿಂಗಳುಗಳನ್ನು ಆಯ್ಕೆ ಮಾಡಲು ಸೂಚಿಸಿದೆ. ಇದರಲ್ಲಿ 789 ರೂಪಾಯಿಗಳ ಮಾಸಿಕ ಕಂತನ್ನು ತುಂಬಲು ಸಾಧ್ಯವಿದೆ. ಮೊದಲ ಯೋಜನೆಯಂತೆ ಇಲ್ಲಿಯೂ ಸಹಿತ ನೀವು ತೆಗೆದುಕೊಳ್ಳುವ ಅಥವಾ ಖರೀದಿಸುವ ಗಾಡಿಯ ಮೇಲೆ ಮೊತ್ತ ಅವಲಂಬಿತವಾಗಿರುತ್ತದೆ

ಈ ಎರಡು ಯೋಜನೆಗಳಲ್ಲಿ ಟಾಟಾ ಮೋಟಾರ್ಸ್ ವು ಪ್ರವಾಸಿ ವಾಹನಗಳ ಏಕ್ಸ್ ಶೋ ರೂಮ್ ಸಲುವಾಗಿ 100 ಪ್ರತಿಶತ ಫಾಯನನ್ಸ್ ಉಪಲಬ್ಧ ಮಾಡಿ ಕೊಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸ್ವಂತ ಕಾರಿನ ಕನಸು ಮಾಡಿಕೊಳ್ಳಿ ನನಸು.

ಟಾಟಾ ಮೋಟಾರ್ಸ್ ಮಾರ್ಕೆಟಿಂಗ್ ವಿಭಾಗದ ಪ್ರಮುಖರಾದ ವಿವೇಕ್ ಶ್ರೀವಾಸ್ತವ್ ಅವರು ಹೀಗೆ ಹೇಳುತ್ತಾರೆ, ಟಾಟಾ ಅವರ ಈ ಎರಡು ಯೋಜನೆಗಳು ಗ್ರಾಹಕರಿಗೆ ತಮ್ಮ ಕಾರಿನ ಕನಸನ್ನು ನನಸು ಮಾಡಿಕೊಳ್ಳಲು ಸಹಾಯವಾಗಲಿವೆ. ಎರಡು ಯೋಜನೆಗಳು EMI ತುಂಬಲು ಸೂಟ್ ಕೊಡುವಂತಹವು ಇವೆ. ಇದೇ ವಿಷಯದ ಬಗ್ಗೆ HDFC ಬ್ಯಾಂಕಿನ ರಿಟೇಲ್ ಪ್ರಮುಖರಾದ ಅರವಿಂದ ಕಪಿಲ್ ಅವರು ಹೇಳುವ ಹಾಗೆ, ಟಾಟಾ ಅವರ ಜೊತೆಗೆ ನಾವು ಕೈ ಜೋಡಸಿರುವದರಿಂದ ಗ್ರಾಹಕರಿಗೆ ಮಾತ್ರ ನಿಶ್ಚಿತವಾಗಿ ಇದರ ಲಾಭವಾಗುತ್ತದೆ.