800 ರೂಪಾಯಿಗಳ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು ನೀತಾ ಅಂಬಾನಿ; ಮದುವೆಗಾಗಿ ಮುಕೇಶ್ ಅಂಬಾನಿ ಮುಂದೆ ಇಟ್ಟಿದ್ದರು ‘ಈ’ ಬೇಡಿಕೆ..!
ನೀತಾ ಅಂಬಾನಿ ಯಾರೆಂದು ಹೇಳುವ ಅವಶ್ಯಕತೆಯೇ ಇಲ್ಲ ಅಲ್ವಾ ಮಿತ್ರರೇ? ರಿಲಯನ್ಸ್ ಇಂಡಸ್ಟ್ರೀಸ್ ನ ಓನರ್ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಶಾಮೀಲಾದ ಮುಕೇಶ್ ಅಂಬಾನಿ ಯವರ ಪತ್ನಿ.
ನೀತಾ ಅವರ ಲೈಫ್ ಸ್ಟೈಲ್ ಬಗ್ಗೆ ಕೇಳಿದರೆ ದಂಗಾಗಿ ಹೋಗುತ್ತೇವೆ, ಅಷ್ಟೊಂದು ದುಬಾರಿಯಾದ ಜೀವನಶೈಲಿ ನೀತಾ ಅವರದಾಗಿದೆ. ಜೊತೆಗೆ ಮುಂಬಯಿ ಇಂಡಿಯನ್ಸ್ ತಂಡದ ಮುಖ್ಯ ರೂವಾರಿಯೂ ಅವರೇ ಆಗಿದ್ದಾರೆ.
ಈಗಿನ ಅವರ ಜೀವನ ಶೈಲಿಯನ್ನು ನೋಡಿದರೆ ಇವರು ಮೊದಲಿನಿಂದಲೂ ಚಿನ್ನದ ಚಮಚೆಯನ್ನೇ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿರಬೇಕೆಂದು ಅನಿಸುತ್ತದೆ.
ಇಲ್ಲಿ ಹೇಳುವ ವಿಷಯ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ, ಯಾಕೆಂದರೆ ಮುಕೇಶ್ ಅವರಿಗೆ ಮದುವೆಯಾಗುವ ಮೊದಲು ನೀತಾ ಅವರು 800 ₹ ಗಳ ಸಂಬಳದಲ್ಲಿ ಕೆಲಸ ಮಾಡುತಿದ್ದರು. ವಿಶೇಷವೇನೆಂದರೆ, ಮದುವೆಯಾದ ನಂತರವೂ ಅವರು ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಅವರು ಶ್ರೀಮಂತ ಪರಿವಾರದವರದವರಾಗಿದ್ದರೂ ಶಾಲೆಯಲ್ಲಿ ನೌಕರಿ ಮಾಡುತ್ತಿದ್ದರು. ತುಂಬಾ ವಿಶೇಷತೆಗಳನ್ನು ಹೊಂದಿದ ನೀತಾ ಅವರ ಜೀವನದ ಬಗ್ಗೆ ಕೂತೂಹಲವಾದ ಜೀವನದ ಬಗ್ಗೆ ಇನ್ನಷ್ಟು ತಿಳಿಯುವ, ಅದರಲ್ಲಿಯೇ ಒಂದಾದ ಮದುವೆಯ ಮೊದಲು ಮುಕೇಶ್ ಅವರ ಮುಂದೆ ಇಟ್ಟ ಬೇಡಿಕೆ ಯಾವುದು ನೋಡೋಣ.
ಆ ಬೇಡಿಕೆ ಯಾವುದು ಎಂದರೆ, ಮದುವೆಯಾದ ಮೇಲೂ ನನಗೆ ನೌಕರಿ ಮಾಡುವ ಸ್ವಾತಂತ್ರ್ಯವಿರಬೇಕು. ನೀತಾ ಅವರಿಗೆ ಚಿಕ್ಕ ಮಕ್ಕಳು ಎಂದರೆ ಪಂಚಪ್ರಾಣ. ಮತ್ತು ಆ ಮಕ್ಕಳಿಗೆ ಕಲಿಸುವದು ಅವರಿಗೆ ತುಂಬಾ ಇಷ್ಟವಾದ ಕೆಲಸವಾಗಿತ್ತು, ಆದ್ದರಿಂದಲೇ ಮದುವೆಗೆ ಮುನ್ನ ಈ ಬೇಡಿಕೆಯನ್ನು ಮುಕೇಶ್ ಅವರ ಮುಂದೆ ಇಟ್ಟಿದ್ದರು ಹಾಗೂ ಅವರು ಇದಕ್ಕೆ ಮನ್ನಣೆಯನ್ನು ಕೊಟ್ಟಿದ್ದರು.

ಮುಕೇಶ್ ಅಂಬಾನಿಯವರ ಪತ್ನಿಯಾದ ಮೇಲೆ ಶಾಲೆಯಲ್ಲಿ ಅವರು ಕೆಲಸ ಮಾಡುತ್ತಿದ್ದರೂ ಆ ಶಾಲೆಯ ಮುಖ್ಯ ಗುರುಗಳಿಗೆ ಇದು ಗೊತ್ತೇ ಇರಲಿಲ್ಲ.
ಸಂದರ್ಶನದಲ್ಲಿ ನೀತಾ ಅಂಬಾನಿಯವರು ಒಂದು ರೋಚಕ ಘಟನೆಯೊಂದನ್ನು ಹೇಳಿದ್ದರು. 1987 ರಲ್ಲಿ ಅವರು ಕಲಿಸುವ ಶಾಲೆಯಲ್ಲಿ ಮಕ್ಕಳ ಪೋಷಕರೊಬ್ಬರು ವಿಶ್ವಕಪ್ ಟೂರ್ನಿಯ ಟಿಕೆಟ್ ಗಳನ್ನು ತಂದು ಕೊಟ್ಟಿದ್ದರಂತೆ. ಆಗ ಇವರು ನಯವಾಗಿ ತಿರಸ್ಕರಿಸಿದ್ದಾರೆ. ವಿಶೇಷವೆಂದರೆ ಆ ಟೂರ್ನಿಯ ಸ್ಪಾನ್ಸರ್ ರಿಲಾಯನ್ಸ್ ಮಾಡಿತ್ತು. ನೀತಾ ಅವರು ಆ ಮ್ಯಾಚ್ ನೋಡಲು ಪ್ರೆಸಿಡೆಂಟ್ ಬಾಕ್ಸ್ ನಲ್ಲಿ ಕುಳಿತಿದ್ದನ್ನು ನೋಡಿ ನಂತರ ಟಿಕೆಟ್ ಕೊಡ ಬಯಸಿದ ಪೋಷಕ ಕೇಳಿದ ನೀವ್ಹೆಗೆ ಅಲ್ಲಿ ಎಂದು ಕೇಳಿದಾಗ ಗೊತ್ತಾಗಿದ್ದು ಇವರು ಶ್ರೀಮಂತ ಅಂಬಾನಿ ಕುಟುಂಬದ ಸೊಸೆ ಎಂದು. ಆದರೂ ಸ್ವಲ್ಪವು ಸಹಿತ ಬಿಂಕ, ಬಿನ್ನಾಣವಿಲ್ಲದೆ ಶಾಲೆಯಲ್ಲಿ ನೌಕರಿ ಮಾಡುತ್ತಾರಲ್ಲ ಎಂದು ಆತ ವಿಚಾರ ಮಾಡಿದನಂತೆ.
ಸದ್ಯ ಅವರಿಗೆ Y+ ಭದ್ರತೆಯನ್ನು ನೀಡಲಾಗಿದೆ. ಎಷ್ಟೇ ಶ್ರೀಮಂತರಾಗಿದ್ದರೂ ದುಡಿಮೆಗೆ ಮಹತ್ವ ಕೊಡುವವರು ಎಂದು ಅವರ ಸರಳವಾದ ವ್ಯಕ್ತಿತ್ವದಿಂದ ತಿಳಿದು ಬರುತ್ತದೆ.