ವಯಸ್ಸಲ್ಲಿ ತನಗಿಂತ 11 ವರ್ಷ ದೊಡ್ಡವಳಾದ ನಟಿಯ ಪ್ರೀತಿಯಲ್ಲಿ ಹುಚ್ಚನಾದ ರಿಷಬ್ ಪಂತ! ‘ಆಕೆಯೊಂದಿಗೆ’ ಮದುವೆಯಾಗುವ ಆಶೆಯಂತೆ!

ಬಾಲಿವುಡ್ ಮತ್ತು ಕ್ರಿಕೆಟ್ ಎರಡು ಸಂಬಂಧಗಳು ಬೆಸೆದುಕೊಂಡಿರುವದು ನಿನ್ನೆ ಇಂದಿಂದಲ್ಲ. ಮೊದಲಿನಿಂದಲೂ ಕೂಡಿಕೊಂಡು ಬಂದಿದೆ. ಒಟ್ಟಿನಲ್ಲಿ ಅವರಿಗೆ ಇವರಲ್ಲಿ ಅಥವಾ ಇವರಿಗೆ ಅವರಲ್ಲಿ ಅಭಿರುಚಿ ಮೊದಲಿಂದಲೂ ಕಂಡು ಬಂದಿದೆ. ಇದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.

ಈಗ ರೀಷಭ್ ಪಂತ್ ತನಗಿಂತಲೂ 11 ವರ್ಷ ದೊಡ್ಡವರಾದ ಯಾವ ನಟಿ ಮತ್ತು ಯಾರಿಗಾಗಿ ಮಿಡಿಯುತ್ತಿದ್ದಾರೆ ನೋಡೋಣವೇ?

ಧೋನಿಯವರಿಗೆ ಸರಿಯಾದ ಪರ್ಯಾಯ ಎಂದೇ ಹೆಸರು ಮಾಡಿರುವ 21 ವರ್ಷದ ಈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗೆ 32 ವರ್ಷದ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಎಂದರೆ ತುಂಬಾ ಪ್ರೀತಿ ಮತ್ತು ಮೆಚ್ಚುಗೆ. ಇವರು ತಮ್ಮ ಒಂದು ಸಂದರ್ಶನದಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ, ಇವರು ಶೃದ್ಧಾ ಕಪೂರ್ ಅವರ ದೊಡ್ಡ ಫ್ಯಾನ್ ಅಂತೆ. ಸಮಯ ಕೂಡಿ ಬಂದರೆ ಶೃದ್ಧಾಳಿಗೆ ಡೇಟ್ ಮಾಡಲು ತುಂಬಾ ಇಷ್ಟ ಪಡುತ್ತೇನೆಂದು ಹೇಳಿದ್ದಾರೆ.