OMG! ಸಾಲದಲ್ಲಿ ಮುಳುಗಿದ ಅನಿಲ್ ಅಂಬಾನಿ ಇರುವ ಮನೆಯ ಬೆಲೆ 5000 ಕೋಟಿ ರೂಪಾಯಿ! ಇವರ ಮನೆಗೆ ಬರುವ ‘ಲೈಟ್ ಬಿಲ್’ ಕೇಳಿದರೆ ಶಾಕ್!
ಉದ್ಯೋಗ ಜಗತ್ತಿನಲ್ಲಿ ಹೊಸ ಸಂಚಲನವನ್ನು ತಂದ ಮೇರು ಮಣಿಯಾದ ಧೀರುಬಾಯಿ ಅಂಬಾನಿಯವರ ಇಬ್ಬರು ಮಕ್ಕಳು ಮುಕೇಶ್ ಮತ್ತು ಅನಿಲ್. ಇವರಿಬ್ಬರಲ್ಲಿ ಮುಕೇಶ್ ಅಂಬಾನಿ ಅವರು ದಿನದಿನಕ್ಕೆ ಯಶಸ್ಸಿನ ಶಿಖರವನ್ನು ಹತ್ತುತ್ತಿರುವಾಗ ಇವರ ಸಹೋದರನಾದ ಅನಿಲ್ ಅವರು ಮಾತ್ರ ದಿನದಿಂದ ದಿನಕ್ಕೆ ಸಾಲದ ಹೊರೆಯಲ್ಲಿ ಸಿಕ್ಕು ಪಾತಾಳಕ್ಕೆ ಇಳಿಯುತ್ತಿದ್ದಾರೆ.
ಅನಿಲ್ ಅಂಬಾನಿಯವರು ಅನೇಕ ಅಂತರ್ರಾಷ್ಟ್ರೀಯ ಬ್ಯಾಂಕುಗಳಿಂದ ಸಾಲವನ್ನು ಪಡೆದು ಅವುಗಳನ್ನು ತೀರಿಸಲಾಗದೆ ಸದ್ಯಕ್ಕೆ ಒದ್ದಾಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಬ್ರಿಟನ್ನಿನ ಲಂಡನ್ ಕೋರ್ಟಿನಲ್ಲಿ ಈ ಸಂಬಂಧವಾಗಿ ಕೇಸುಗಳು ಸಹಿತ ನಡೆಯುತ್ತಿವೆ. ವರದಿಯ ಪ್ರಕಾರ ಚೀನಾದ ಎಕ್ಸ್ಪೋರ್ಟ್ ಅಂಡ್ ಇಂಪೋರ್ಟ್ ಬ್ಯಾಂಕ್ ಆಫ್ ಚೈನಾ ಅಂಡ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಚೈನಾ ದಿಂದ ಸುಮಾರು 5276 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ಈ ಸಾಲವನ್ನು ಮರುಪಾವತಿಸಲಾಗದೆ ಒದ್ದಾಡುತ್ತಿರುವ ಕಾರಣದಿಂದಾಗಿ ಬ್ಯಾಂಕು ಅವರ ಮೇಲೆ ಕೇಸು ದಾಖಲಿಸಿದೆ. ಲಂಡನಿನ ನ್ಯಾಯಾಲಯವು ಅನಿಲ್ ಅಂಬಾನಿ ಅವರಿಗೆ ಜೂನ್ ತಿಂಗಳಿನವರೆಗೆ ಸಾಲದ ಹಣವನ್ನು ಮರುಪಾವತಿಸಲು ಆದೇಶ ನೀಡಿತ್ತು. ಆದರೆ ಅನಿಲ್ ಅವರಿಗೆ ಆ ಹಣವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ, ಅಷ್ಟೇ ಅಲ್ಲ ಅವರು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಹೇಳಿದ್ದಾರೆ, ನನಗೆ ಈ ಹಣವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ. ನನ್ನ ಹತ್ತಿರ ಸದ್ಯಕ್ಕೆ ಏನು ಬಾಕಿ ಉಳಿದಿಲ್ಲ ಮತ್ತು ನನ್ನಲ್ಲಿರುವ ಆಭರಣಗಳನ್ನು ಮಾರಿ ನನ್ನ ವಕೀಲರ ಫೀಸ್ ಕಟ್ಟುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಷ್ಟೆಲ್ಲ ನಡೆದರೂ ಸಹಿತ ನಿಮಗೆ ಇನ್ನೊಂದು ವಿಷಯವನ್ನು ಕೇಳಿ ಆಶ್ಚರ್ಯವಾಗಬಹುದು. ಯಾಕೆಂದರೆ ಸದ್ಯ ಅನಿಲ್ ಅಂಬಾನಿ ಅವರು ವಾಸಿಸುವ ಮನೆಯ ಬೆಲೆ 5 ಸಾವಿರ ಕೋಟಿ ರೂಪಾಯಿಗಳನ್ನು ಹೊಂದಿದೆ.

ಅವರ ಮೇಲೆ ಇರುವ ಸಾಲಕ್ಕಿಂತ ಹೆಚ್ಚು ಬೆಲೆಯ ಮನೆಯಲ್ಲಿ ಇವರು ವಾಸಿಸುತ್ತಾರೆ. ಈ ಮನೆಯು ಮುಂಬೈಯಲ್ಲಿ ಇದ್ದು ಈ ಮನೆಯಲ್ಲಿ ಬರೀ ನಾಲ್ಕು ಜನರು ವಾಸಿಸುತ್ತಾರೆ. ಅನಿಲ್ ಅಂಬಾನಿ ಮತ್ತು ಪತ್ನಿ ಟೀನಾ ಮುನಿಮ್ ಹಾಗೂ ಮಕ್ಕಳಾದ ಅಂಶುಲ್ ಮತ್ತು ಅನಮೊಲ್.
ಧೀರುಬಾಯಿ ಅಂಬಾನಿ ಗ್ರೂಪಿನ ಚೇರ್ಮನ್ ರಾದ ಅನಿಲ್ ಅಂಬಾನಿ ಅವರು ಈ ಮನೆಯನ್ನು ತುಂಬಾ ಸುಂದರವಾದ ಶೈಲಿಯಲ್ಲಿ ತಯಾರಿಸಿ ಕೊಂಡಿದ್ದಾರೆ. 2018ರಲ್ಲಿ ಫೈನಾನ್ಸಿಯಲ್ ಸರ್ವಿಸ್ ಕಂಪನಿ IIFL ನವರು ಈ ಮನೆಗೆ ತುಂಬಾ ದುಬಾರಿಯಾದ ಹಾಗೂ ಬೆಲೆಬಾಳುವ ಮನೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಮೊದಲ ಸ್ಥಾನದಲ್ಲಿ ಅನಿಲ್ ಅವರ ಸಹೋದರರಾದ ಮುಖೇಶ್ ಅಂಬಾನಿಯವರ ಮನೆಯಾಗಿದೆ. ಈ ಮನೆಯಲ್ಲಿ ಸುಂದರತೆಯನ್ನು ಹೆಚ್ಚಿಸುವ ಸಲುವಾಗಿ ಉಪಯೋಗಿಸಲಾದ ಡೆಕೋರೇಷನ್ನಿನ ವಸ್ತುಗಳ ಬೆಲೆ ಕೋಟಿ ಕೋಟಿ ರೂಪಾಯಿಗಳಷ್ಟಿವೆ. 16000 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿರುವ ದೊಡ್ಡದಾದ ಈ ಮನೆಯು ಮುಂಬೈ ಅತ್ಯುನ್ನತ ಪಾಲಿ ಹಿಲ್ ಪರಿಸರದಲ್ಲಿ ಬರುತ್ತದೆ. ಈ ಮನೆಯು ಹೆಲಿಪ್ಯಾಡ್ ಒಳಗೊಂಡು ಅನೇಕ ರೀತಿಯ ಅತ್ಯಾಧುನಿಕ ಸೌಲಭ್ಯಗಳಿಂದ ತುಂಬಿಹೋಗಿದೆ. ಈ ಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳಿಗೆ ಲಕ್ಷ ರೂಪಾಯಿ ಸಂಬಳದ ರೂಪದಲ್ಲಿ ಕೊಡಲಾಗುತ್ತದೆ. ಹೀಗೆ ಈ ರೀತಿಯಾದ ಸುಸಜ್ಜಿತ, ಸುಂದರ ಮತ್ತು ಸಕಲ ಸೌಲಭ್ಯಗಳಿಂದ ಕೂಡಿದ ಈ ಮನೆಯ ಕರೆಂಟ್ ಬಿಲ್ 60 ಲಕ್ಷ ರೂಪಾಯಿಗಳಷ್ಟಿದೆ.