ಕೆನಡಾ: ಕಾಡಿನಿಂದ ಬರುತ್ತಿದೆ ಹಾರರ್ ಚಿತ್ರದಂತೆ ಭ ಯ ಹುಟ್ಟಿಸುವ ವಿಚಿತ್ರ ಶಬ್ದ; ‘ಇಂತಹ’ ಘರ್ಜನೆ ಎಂದೂ ಕೇಳಿರಲಿಲ್ಲ ಎಂದ ಜನ! Viral Video

ಕಾಡಿನ ಜೀವನ, ಕಾಡಿನಲ್ಲಿ ದಿನಗಳನ್ನು ಕಳೆಯುವುದು, ಕಾಡಿನ ವಾತಾವರಣದಲ್ಲಿ ಬದುಕಿನ ಬಂಡಿಯನ್ನು ನಡೆಸುವುದು ಇದೆಲ್ಲಾ ಕೂಡಾ ನಗರಗಳಲ್ಲಿರುವ ಜನರಿಗೆ ರೋಚಕತೆಯಂತೆ ಕಾಣುತ್ತದೆ. ಒಂದು ದಿನ ವಿದ್ಯುತ್ ಇಲ್ಲದೇ ಹೋದರೆ, ಎರಡು ಮೂರು ದಿನ ಒಂದೇ ಸಮನೆ ಮಳೆ ಸುರಿದರೆ ಕಂಗಾಲಾಗುವ ನಗರಗಳ ಜನರಿಗೆ ಕಾಡಿನ ಪರಿಸರದಲ್ಲಿ ವಾಸಿಸುವ ಜನರ ಜೀವನದಲ್ಲಿ ಇಂತಹವುಗಳೆಲ್ಲಾ ಸಾಮಾನ್ಯ ಎಂದು ತಿಳಿದಾಗ ಅವರ ಜೀವನ ಎಂತಹ ಸಾಹಸಭರಿತ ಜೀವನ ಎನ್ನುವುದು ಅರ್ಥವಾಗುತ್ತದೆ. ಪ್ರಕೃತಿಯ ನಡುವೆ ಆ ಪ್ರಕೃತಿ ದೇವಿಯ ಮಕ್ಕಳಾಗಿ ಜೀವನ ನಡೆಸುವುದು ಒಂದು ಅದೃಷ್ಟವೇ ಸರಿ ಹಾಗೂ ಅದೊಂದು ಅದ್ಭುತ ಜೀವನವೇ ಹೌದು. ದಟ್ಟವಾದ ಅರಣ್ಯ ಎಂದೊಡನೆ ಮನಸ್ಸಲ್ಲಿ ಒಂದು ಅವ್ಯಕ್ತ ಭ ಯ ಮೂಡುವುದು ಸಹಜ.‌

ಅದರಲ್ಲೂ ನಾವು ಹಾ ರ ರ್ ಸಿನಿಮಾಗಳು ಅಥವಾ ಇನ್ನಾವುದೋ ಸಿನಿಮಾದಲ್ಲಿ ಕಾಡಿನ ಸನ್ನಿವೇಶಗಳನ್ನು ತೋರಿಸುವಾಗ ಹಿನ್ನೆಲೆಯಲ್ಲಿ ಮೂಡಿ ಬರುವ ಸಂಗೀತವು ನಮ್ಮ ಎದೆಯ ಬಡಿತವನ್ನು ಏರುವಂತೆ ಮಾಡುತ್ತದೆ. ಕಾಡಿನ ವಾತಾವರಣದಲ್ಲಿ ತುಂಬಿರುವ ನೀರವತೆಯಲ್ಲಿ ಮೂಡಿ ಬರುವ ಆ ಶಬ್ಧಗಳು ನಮ್ಮಲ್ಲಿ ಒಂದು ಸಂಚಲನವನ್ನು ಕೂಡಾ ಉಂಟು ಮಾಡುವಂತಿರುತ್ತದೆ. ಅದರಲ್ಲೂ ಕಾಡಿನ ದೃಶ್ಯಗಳು ರಾತ್ರಿಯದಾದರೆ ನಿಶಾಚರ ಪ್ರಾಣಿಗಳ ಸದ್ದು, ಸುಯ್ ಎಂದು ರಭಸವಾಗಿ ಬೀಸಿ ಬರುವ ಗಾಳಿಯ ಶಬ್ಧ, ಎಲ್ಲೋ ಹರಿಯುತ್ತಿರುವ ನದಿಯೋ ಅಥವಾ ತೊರೆಯ ನೀರಿನ ಸದ್ದು, ಊಳಿಡುವ ನರಿಗಳ ಸದ್ದು ಹೀಗೆ ಕಾಡಿನ ಚಿತ್ರಣ ವಿಶಿಷ್ಠವಾದ ರೀತಿ ಕಣ್ಮುಂದೆ ಬರುತ್ತವೆ.

ಅದೇ ಹಾ ರ ರ್ ಸಿನಿಮಾಗಳಲ್ಲಾದರೆ ಕೇಳಲೇಬೇಡಿ, ನಿರ್ಮಾನುಷ್ಯವಾದ ಕಾಡಿನಲ್ಲಿ, ಅದು ರಾತ್ತಿಯ ನೀರವತೆಯಲ್ಲಿನ ದೃಶ್ಯವಾದರೆ ಹಿನ್ನೆಲೆಯಲ್ಲಿ ಕೇಳಿ ಬರುವ ಸದ್ದು ನಿಜಕ್ಕೂ ಬೆಚ್ಚಿ ಬೀಳಿಸದೇ ಇರಲಾರದು. ಭ ಯ ಪಡುವವರ ಹಣೆಯ ಮೇಲೆ ಬೆವರನ್ನು ಇಳಿಸಬಲ್ಲುದು ಆ ಶಬ್ದಗಳು. ಕಾಡು ಎಂದರೆ ಇಂದಿನ ಸಿನಿಮಾಗಳ ಈ ಚಿತ್ರಣ ನಮ್ಮ ಕಣ್ಮುಂದೆ ಬಂದು ಕುಣಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೆನಡಾದ ಒಂದು ಅರಣ್ಯ ಪ್ರಾಂತ್ಯದಲ್ಲಿ ಹಿಮಚ್ಛಾದಿತ ವಾತಾವರಣದಲ್ಲಿನ ಒಂದು ದೃಶ್ಯವನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು, ಕಾಡಿನೊಳಗಿಂದ ಕೇಳಿ ಬರುತ್ತಿರುವ ಒಂದು ಭ ಯಾ ನ ಕ ಶಬ್ದವು ಈಗ ವೈರಲ್ ಆಗಿದೆ.

ಹೌದು ಹಾ ರ ರ್ ಸಿನಿಮಾಗಳಲ್ಲಿ ಮೂಡಿ ಬರುವ ಎದೆಯೊಳಗೆ ತ ಲ್ಲ ಣ ಹುಟ್ಟಿಸುವ, ಕೇಳಿದರೆ ಭ ಯ ದಿಂದ ನಡುಗುವ ಸದ್ದು ಕೆನಾಡದ ಈ ಅರಣ್ಯದ ನಡುವಿಂದ ಕೇಳಿ ಬರುತ್ತಿರುವುದನ್ನು ನಾವು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕೇಳಬಹುದು. ಆ ಶಬ್ಧ ನಿಜಕ್ಕೂ ಭ ಯವನ್ನು ಹುಟ್ಟಿಸುವ ಹಾಗಿದ್ದು, ವೀಡಿಯೋ ಶೇರ್ ಮಾಡಿಕೊಂಡಿರುವ ಟ್ವಿಟರ್ ಬಳಕೆದಾರರು ಶೀರ್ಷಿಕೆಯಲ್ಲಿ ಕೆನಾಡದ ಅರಣ್ಯದೊಳಗಿಂದ ಬರುತ್ತಿದೆ ಭ ಯವನ್ನು ಹುಟ್ಟಿಸುವ ಶಬ್ದ ಎಂದು ಬರೆದುಕೊಂಡಿದ್ದಾರೆ. ಶೇರ್ ಆದ ಈ ವೀಡಿಯೋವನ್ನು ಈಗಾಗಲೇ 2 ಲಕ್ಷ 28 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ.

ವಿಡಿಯೋ ನೋಡಿ

ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಭಿನ್ನ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ‌. ಒಬ್ಬರು ಅಬ್ಬಾ ಎಂತಹ ಘರ್ಜನೆ ಇದು ಎಂದರೆ, ಇನ್ನೊಬ್ಬರು ಚಳಿಗಾಲ ಹತ್ತಿರವಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದಾವುದೋ ಹೊಲೋವಿನ್ ಧ್ವನಿಯ ಹಾಗಿದೆ ಎಂದರೆ ಇನ್ನೂ ಕೆಲವರು ಆ ಶಬ್ದ ಮಾಡುತ್ತಿರುವ ಪ್ರಾಣಿ ಯಾವುದಿರಬಹುದು ಎಂದು ಊಹೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ವಿಸ್ಮಯ ಹುಟ್ಟಿಸುವಂತೆ ಇರುವ ಈ ವೀಡಿಯೋ ಹಾಗೂ ಅದರಲ್ಲಿನ ವಿಚಿತ್ರವಾದ ಘರ್ಜನೆಯ ಸದ್ದು ನೋಡುಗರಿಗೆ ಒಂದು ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತಿದೆ.