ತನ್ನ ಕಚ್ಚಿದ ಹಾ ವನ್ನು ಮೊದಲು ಹಿಡಿದ, ಆಮೇಲೆ ಫ್ರೈ ಮಾಡಿಕೊಂಡು ತಿಂದ! ನೋಡಿ ಈ Viral Video

ಹಾವು ಎನ್ನುವ ಹೆಸರು ಕೇಳಿದರೆ ಸಾಕು ಕುಳಿತಿರುವವರು ಎಲ್ಲಿ? ಎಲ್ಲಿ ? ಎಂದು ಎದ್ದು ನೋಡುವಷ್ಟು, ಇನ್ನೂ ಕೆಲವರಾದರೆ ಆ ಜಾಗದಿಂದಲೇ ಓಟ ಕೀಳುವಷ್ಟು ಭಯ ಇದೆ ಹಾವು ಎಂದರೆ. ಹಾವಿನ ಹೆಸರಿನಂದಲೇ ಭಯಪಡುವ ಜನರ ಕಣ್ಣೆದುರೇನಾದರೂ ನಿಜವಾಗಿಯೂ ಜೀವಂತವಾಗಿರುವ ಹಾವು ಬಂದರೆ ಮುಗಿಯಿತು ಕಥೆ, ಅವರ ಚೀರಾಟ, ಅರಚಾಟ ನೋಡಿ ಹಾವು ಕೂಡಾ ಕಂಗಾಲಾಗಿ ಓಡುವುದು ಖಂಡಿತ‌. ನಮ್ಮಲ್ಲಿ ಹಾವುಗಳು ಎಂದರೆ ಭಯ ಸಹಜವಾಗಿಯೇ ಇದೆ. ಏಕೆಂದರೆ ಅವು ವಿಷ ಜಂತುಗಳು, ಅವು ಕಚ್ಚಿ ಅ ಪಾಯ ಸಂಭವಿಸಿದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಹೋದರೆ ಸಾವು ಖಚಿತ. ಆದ್ದರಿಂದಲೇ ಹಾವೆಂದರೆ ಭ ಯ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗುತ್ತಿದ್ದು ಇದರಲ್ಲಿ ಒಬ್ಬಾತ ತನ್ನ ಕೈಯಲ್ಲೊಂದು ವಿಷಪೂರಿತ ಹಾವನ್ನು ಹಿಡಿದಿದ್ದಾನೆ.

ಹಾವು ಹಿಡಿದುಕೊಂಡಿರುವುದೋ ಒಂದು ಭ ಯವನ್ನು ಹುಟ್ಟಿಸುತ್ತದೆ ಎಂದರೆ ಅಲ್ಲಿ ಇನ್ನೂ ಭ ಯಂ ಕ ರ ಎನ್ನುವಂತೆ ಆ ಹಾವು ಆತನನ್ನು ಕಚ್ಚಿದೆ ಕೂಡಾ. ಇನ್ನು ಹಾವು ಕಚ್ಚಿದ ಕೋ ಪಕ್ಕೆ ಅದರ ಮೇಲೆ ಸೇ ಡನ್ನು ತೀರಿಸಿಕೊಳ್ಳಲು ಆ ಯುವಕ ಮಾಡಿದ ಕೆಲಸವನ್ನು ನೋಡಿದ ಜನರು ಕೂಡಾ ದಿಗ್ಭ್ರಾಂತರಾಗಿದ್ದಾರೆ. ಏಕೆಂದರೆ ತನ್ನನ್ನು ಕಚ್ಚಿದ ಹಾವನ್ನು ಬಿಡದ ಯುವಕ ಅದನ್ನು ಹಿಡಿದಿದ್ದಾನೆ. ಅನಂತರ ಅದನ್ನು ಕೊಂದು, ಅದನ್ನು ಬೇಯಿಸಿ ತಿಂದಿದ್ದಾನೆ. ಹೀಗೆ ಹಾವನ್ನು ಕೊಂ ದು ಅದನ್ನು ಬೇಯಿಸಿ ತಿಂದ ಯುವಕನ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ನೋಡಿದ್ದಾರೆ.

ಈ ಘಟನೆ ನಡೆದಿರುವುದು ಟೆಕ್ಸಾಸ್ ನಲ್ಲಿ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಾಬ್ ಹೆನ್ಸಲರ್ ಹೆಸರಿನ ಯುವಕನನ್ನು ಏಳು ಅಡಿಯ ಹಾವೊಂದು ಆತನ ಕೈ ಮೇಲೆ ಕಚ್ಚಿತ್ತು. ಅದರ ವಿಷ ತೀ ವ್ರ ವಾಗಿದ್ದರಿಂದ ಕೆಲವೇ ಸಮಯದಲ್ಲಿ ಆತನ ಕೈಯಲ್ಲಿ ಬದಲಾವಣೆ ಆಗತೊಡಗಿತ್ತು‌. ಸೂಕ್ತ ಸಮಯದಲ್ಲಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ವಿಷದ ಪರಿಣಾಮ ತಗ್ಗಿಸಿ ಬಾಬ್ ನನ್ನು ಉಳಿಸಲು ಸರ್ವ ಪ್ರಯತ್ನ ಮಾಡಲಾಯಿತು. ಬಾಬ್ ಕೆಲವು ದಿನಗಳು ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡ. ಆದರೆ ತಾನು ಚೇತರಿಸಿಕೊಂಡ ಕೂಡಲೇ ಬಾಬ್ ತನ್ನನ್ನು ಕಚ್ಚಿದ ಹಾವಿನ ಮೇಲೆ ಸೇ ಡು ತೀರಿಸಿಕೊಳ್ಳಲು ನಿರ್ಧಾರ ಮಾಡಿದ.

ಹುಷಾರಾದ ನಂತರ ಬಾಬ್ ಹಾವು ತನ್ನನ್ನು ಕಚ್ಚಿದ ಜಾಗಕ್ಕೆ ಮರಳಿ ಬಂದು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಅನಂತರ ಅದನ್ನು ಕೊಂ ದು ಅದರ ಚರ್ಮ ತೆಗೆದು, ಹಾಲು, ಮಸಾಲೆಗಳನ್ನು ಹಾಕಿ ಅದನ್ನು ಒಂದು ರುಚಿಯಾದ ಆಹಾರದಂತೆ ಸಿದ್ಧಪಡಿಸಿ, ಹಾವಿನ ಆಹಾರ ತಯಾರಿಸುವುದನ್ನು ವೀಡಿಯೋ ಕೂಡಾ ಮಾಡಿಸಿ, ಅದರಲ್ಲಿ ಹಾವಿನ ರೆಸಿಪಿ ಮಾಡುವುದು ಹೇಗೆ ಎಂದು ಕೂಡಾ ವಿವರಣೆಯನ್ನು ನೀಡಿದ್ದಾರೆ. ಅಲ್ಲದೇ ತನಗೆ ಹಾವಿನಿಂದ ಎದುರಾಗಿದ್ದ ಸಮಸ್ಯೆ ಕೂಡಾ ವಿವರಿಸಿದ್ದಾರೆ. ಈ ವೀಡಿಯೋವನ್ನು ಬಾಬ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ

ಹಾವು ಎಂದರೆ ದೂರ ಓಡುವ ಜನರ ಮಧ್ಯೆ ಬಾಬ್ ತನ್ನನ್ನು ಕಚ್ಚಿದ ಹಾವನ್ನು ಹಿಡಿದು, ಕೊಂ ದು ತಿಂದಿರುವ ವಿಷಯ ಅನೇಕರಿಗೆ ವಿಚಿತ್ರ ಎನಿಸಿದೆ. ಹಾವು ಸೇಡು ತೀರಿಸಿಕೊಳ್ಳುವ ಕಥೆಗಳನ್ನು ಕೇಳಿರುವ ನಮಗೆ, ಹಾವಿನ ಮೇಲೆ ಸೇ ಡು ತೀರಿಸಿಕೊಂಡ ಈ ವ್ಯಕ್ತಿ ವಿಚಿತ್ರವಾಗಿ ಕಾಣುವುದು ಮಾತ್ರ ನಿಜ. ಪಾಪ ಆ ಹಾವಿಗೆ ತಾನು ಕಚ್ಚಿದ ವ್ಯಕ್ತಿಯಿಂದಲೇ ತನಗೆ ಸಾ ವು ಎನ್ನುವ ವಿಷಯ ಮೊದಲೇ ಗೊತ್ತಿದ್ದರೆ ಅದು ಇನ್ನೂ ಜೀವಂತವಾಗಿರುತ್ತಿತ್ತೋ ಏನೋ. ಆದರೆ ಬಾಬ್ ನನ್ನು ಕಚ್ಚಿದ ಪರಿಣಾಮ ಅದು ಆತನ ಆಹಾರವಾಗಿ ಹೋಯ್ತು.