ತಂದೆ ಕೆಲಸ ಕಳೆದುಕೊಂಡ ನಂತರ ಬೀದಿಗೆ ಬರುವ ಸ್ಥಿತಿಯಲ್ಲಿ ಇದ್ದರು ರೋಹಿತ ಶರ್ಮಾ ಕುಟುಂಬ; ಇಂದು ಕೋಟ್ಯಾಂತರ ರೂಪಾಯಿ ಸಂಪತ್ತಿನ ಮಾಲೀಕರಾಗಿದ್ದಾರೆ!
ಕ್ರಿಕೆಟಿನಲ್ಲಿ ಮೊದಲಿನ ಪರಿಸ್ಥಿತಿ ಇಲ್ಲ. ಈಗ ಎಲ್ಲವೂ ಬದಲಾಗಿದೆ. ಅದರಲ್ಲಿ ಆಡುವ ಅತಿ ಹೆಚ್ಚು ಆಟಗಾರರು ಕಠಿಣ ಪರಿಸ್ಥಿತಿಯಲ್ಲಿ ಬೆಂದು ಬಂದವರಾಗಿದ್ದಾರೆ. ಭಾರತದ ವಿಚಾರ ಮಾಡಲಾಗಿ ಮೊದಲು ಶ್ರೀಮಂತರ ಮಕ್ಕಳು ಕ್ರಿಕೆಟ್ ಆಟದಲ್ಲಿ ಹೆಚ್ಚು ಇರುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ ತಮ್ಮ ಕಠಿಣ ಪರಿಶ್ರಮದ ಬಲದಿಂದ ಮತ್ತು ಜಿದ್ದಿನಿಂದ ಹಳ್ಳಿಯಲ್ಲಿ ಬೆಳೆದು ದೊಡ್ಡವರಾದ ಮಕ್ಕಳು ಸಹಿತ ಕ್ರಿಕೆಟ್ ವಿಶ್ವದಲ್ಲಿ ತಮ್ಮ ಹೆಸರನ್ನು ಮಿನುಗಿಸಿದ್ದಾರೆ. ಬಿಸಿಸಿಐ ಇಂದು ಜಗತ್ತಿನ ಆಟಕ್ಕೆ ಸಂಬಂಧಿಸಿದ ಅತೀ ಶ್ರೀಮಂತ ಸಂಸ್ಥೆಯಾಗಿದೆ. ಕ್ರಿಕೆಟಿನಲ್ಲಿ ಆಡುವ ಆಟಗಾರರಿಗೆ ಮೊದಲಿಗಿಂತಲೂ ಅತಿ ಹೆಚ್ಚು ಸಂಬಳ ನೀಡಲಾಗುತ್ತಿದೆ. ಹೀಗಾಗಿ ಆಟಗಾರರ ಆರ್ಥಿಕ ಪರಿಸ್ಥಿತಿ ವೇಗವಾಗಿ ಸುಧಾರಿಸಲು ಸಹಾಯವಾಗುತ್ತದೆ. ಆಟಗಳಲ್ಲಿ ಒಳ್ಳೆಯ ಸಾಧನೆಗಳನ್ನು ಮಾಡುತ್ತಾ ಹೋದಂತೆ ಜಾಹೀರಾತು ಕಂಪನಿಗಳು ಸಹಿತ ತಮ್ಮ ಜಾಹೀರಾತಿನಲ್ಲಿ ಕೆಲಸ ಮಾಡುವುದಕ್ಕಾಗಿ ಆಟಗಾರರಿಗೆ ಹಣದ ಹೊಳೆಯನ್ನೇ ಹರಿಸುತ್ತಾರೆ. ಹೀಗಾಗಿ ಆಟಗಾರರ ಜೀವನ ಮಟ್ಟದಲ್ಲಿ ಆಮೂಲಾಗ್ರ ಬದಲಾವಣೆಗಳಾಗುತ್ತವೆ.
ಸದ್ಯ ಯುಎಇಯಲ್ಲಿ ಐಪಿಎಲ್ ಕದನ ಜೋರಾಗಿ ನಡೆದಿದೆ. ಎಲ್ಲ ತಂಡಗಳು ಐಪಿಎಲ್ ಮುಕುಟವನ್ನು ತಮ್ಮ ಮುಡಿಗೇರಿಸಿಕೊಳ್ಳಲು ಹೋರಾಟ ನಡೆಸುತ್ತಿವೆ. ಇದರಲ್ಲಿ ಮುಂಬೈ ಇಂಡಿಯನ್ಸ ತಂಡದ ನಾಯಕರಾದ ರೋಹಿತ್ ಶರ್ಮಾ ಅವರು ಸಹ ತಮ್ಮ ತಂಡದ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಯಶಸ್ಸಿನ ಶಿಖರದ ಮೇಲಿರುವ ರೋಹಿತ್ ಶರ್ಮಾ ಅವರ ಜೀವನ ಅನೇಕ ಸಂಘರ್ಷಗಳಿಂದ ಕೂಡಿತ್ತು. ತಂದೆಯ ನೌಕರಿ ಹೋದನಂತರ ಮನೆಯ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಅಂತ ಪರಿಸ್ಥಿತಿಗಳಿಂದ ಮಾರ್ಗವನ್ನು ತೆಗೆದು ಸಮಸ್ಯೆಗಳನ್ನು ಎದುರಿಸುತ್ತಾ ಇಂದು ಕ್ರಿಕೆಟಿನಲ್ಲಿ ತಮ್ಮ ಹೆಸರನ್ನು ಯಶಸ್ವಿಯನ್ನಾಗಿಸಿದ್ದಾರೆ.

ನಾಗಪುರದಲ್ಲಿ ಜನ್ಮಸಿದ ರೋಹಿತ್ ಶರ್ಮಾ ಅವರಿಗೆ ತೆಲುಗು ಭಾಷೆಯು ಚೆನ್ನಾಗಿ ಮಾತನಾಡಲು ಬರುತ್ತದೆ.
30 ಏಪ್ರಿಲ್ 1987 ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ರೋಹಿತ್ ಶರ್ಮಾ ಅವರು ಜನಿಸಿದ್ದಾರೆ. ತಂದೆ ಗುರುನಾಥ್ ಶರ್ಮಾ ನೌಕರಿ ಮಾಡುತ್ತಿದ್ದರೆ ತಾಯಿ ಪೂರ್ಣಿಮಾ ಶರ್ಮಾ ಮನೆ ನೋಡಿಕೊಳ್ಳುತ್ತಿದ್ದರು. ತಾಯಿಯು ವಿಶಾಖಪಟ್ಟಣದವರಾಗಿದ್ದರಿಂದ ರೋಹಿತ್ ಶರ್ಮಾ ಅವರು ತೆಲುಗು ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ತಮ್ಮನಾದ ವಿಶಾಲ್ ಅವರು ಸಹ ರೋಹಿತ್ ಅವರಿಗೆ ಕ್ರಿಕೆಟ್ ಆಡಲು ತುಂಬಾ ಸಪೋರ್ಟ್ ಮಾಡಿದ್ದಾರೆ.
ತಂದೆಯ ನೌಕರಿ ಕಳೆದುಕೊಂಡ ನಂತರ ತುಂಬಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮನೆ ನಡೆಯುತ್ತಿತ್ತು.
ಒಂದು ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ರೋಹಿತ್ ಶರ್ಮಾ ಅವರ ತಂದೆ ಕೆಲಸ ಮಾಡುತ್ತಿದ್ದರು. ಅವರ ಸಂಬಳ ದಲ್ಲಿ ಮನೆಯ ಖರ್ಚನ್ನು ತೂಗಿಸುವುದು ಕಷ್ಟವಾಗಿ ಹೋಗುತ್ತಿತ್ತು. ಈ ಕಾರಣದಿಂದಾಗಿ ರೋಹಿತ್ ಶರ್ಮಾ ಅವರನ್ನು ಮುಂಬೈಯಲ್ಲಿ ಅವರ ಅಜ್ಜನ ಕಡೆಗೆ ಕಳುಹಿಸಲಾಯಿತು. ಕ್ರಿಕೆಟಿನಕಡೆಗಿರುವ ರೋಹಿತ್ ಶರ್ಮಾ ಅವರ ಒಲವನ್ನು ನೋಡಿ ರೋಹಿತ್ ಅವರ ಅಂಕಲ್ ಅವರಿಗೆ ಕೋಚಿಂಗ್ ಆಗಿ ಅಡ್ಮಿಶನ್ ಮಾಡಿದರು. ಮುಂದೆ ಕೆಲವೇ ದಿನಗಳಲ್ಲಿ ಯಾವುದೋ ಕಾರಣದಿಂದ ತಂದೆಯ ನೌಕರಿ ಹೋದದ್ದರಿಂದ ಮನೆಯ ಸಂಪೂರ್ಣ ಜವಾಬ್ದಾರಿಯು ರೋಹಿತ್ ಅವರ ಮೇಲೆ ಬಿತ್ತು.

ರಣಜಿ ಪಂದ್ಯದಿಂದ ಪ್ರಾರಂಭ, 2007ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಪದಾರ್ಪಣೆ.
ರಣಜಿ ಪಂದ್ಯಗಳಿಂದ ತಮ್ಮ ಕ್ರಿಕೆಟ್ ಕರಿಯರನ್ನು ಪ್ರಾರಂಭಿಸಿದ ರೋಹಿತ್ ಶರ್ಮಾ ಅವರು 2007ರಲ್ಲಿ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಮೊದಲ ಪಂದ್ಯವನ್ನು ಆಡಿದರು. ಮುಂದೆ 2007 ರಲ್ಲಿಯೇ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಸಹಿತ ಆಡಿದರು. ತಮಗೆ ದೊರೆತ ಅವಕಾಶವನ್ನು ಹಾಳುಮಾಡದೆ ಕ್ರಿಕೆಟಿನಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಒಂದಾದ ನಂತರ ಒಂದು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯುತ್ತಾ ಇಂದು ಭಾರತ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಸ್ಪೋರ್ಟ್ಸ್ ಮ್ಯಾನೇಜರ್ ಜೊತೆಗೆ ಲಗ್ನವಾದರು, ಹೀಗೆ ಮಾಡಿದರು ಪ್ರೊಪೋಸ್….
ರೋಹಿತ್ ಶರ್ಮಾ ಅವರು ಸ್ಪೋರ್ಟ್ಸ್ ಮ್ಯಾನೇಜರ್ ರಾದ ರಿತಿಕಾ ಅವರನ್ನು ಪ್ರಪೋಸ್ ಮಾಡುವ ಸಲುವಾಗಿ ತಾವು ಕ್ರಿಕೆಟ್ ಪ್ರಾರಂಭಿಸಿದ ಬೋರಿವಲಿ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಮದುವೆಯ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಅವರು ಸಮ್ಮತಿಸಿದಾಗ 2015 ರಲ್ಲಿ ಅವರ ಜೊತೆಗೆ ಮದುವೆಯಾದರು. ಇವರಿಗೆ ಈಗ ಒಂದು ಮುದ್ದಾದ ಮಗಳು ಇದ್ದಾಳೆ.

ಇಂದು ಕೋಟ್ಯಾವಧಿ ರೂಪಾಯಿಗಳ ಮಾಲೀಕರಾಗಿದ್ದಾರೆ.
ರೋಹಿತ್ ಶರ್ಮಾ ಅವರು ಸದ್ಯ ಕೋಟ್ಯಾವಧಿ ರೂಪಾಯಿಗಳ ಮಾಲೀಕರಾಗಿದ್ದಾರೆ. ಮುಂಬೈಯ ಅತ್ಯುನ್ನತ ಭಾಗವಾದ ವರ್ಲಿ ಯಲ್ಲಿ 30 ಕೋಟಿ ರೂಪಾಯಿಗಳ ಫ್ಲ್ಯಾಟ್ ಇದೆ. 29ನೇ ಮಹಡಿಯಲ್ಲಿರುವ ಈ ಮನೆ 4 ಬೆಡ್ರೂಮ್ ಗಳೊಂದಿಗೆ 5700 ಚದರ ಅಡಿಯಲ್ಲಿ ವ್ಯಾಪಿಸಿದೆ. ರೋಹಿತ್ ಅವರಿಗೆ ಕಾರುಗಳ ಹವ್ಯಾಸವೂ ಇದೆ. ಅವರ ಹತ್ತಿರ 1.40 ಕೋಟಿಯ BMW M5 ಇದೆ. ಇದರ ಹೊರತಾಗಿ ಆಡಿ 6, ಸ್ಕೋಡಾ ಲಾರ ಹೀಗೆ ಅನೇಕ ಕಾರುಗಳಿವೆ. ರೋಹಿತ್ ಶರ್ಮ ಅವರು ತೊಟ್ಟುಕೊಳ್ಳುವ ಕೈಗಡಿಯಾರ Royal Oak Offshore Masato ಕಂಪನಿಯ ದಾಗಿದ್ದು ಇದರ ಬೆಲೆ 25 ಲಕ್ಷ ರೂಪಾಯಿಗಳದ್ದಾಗಿದೆ.