ಕಿಮ್ ನಂತರ ಈ ಮಹಿಳೆಯ ಕಡೆಗೆ ಬರಬಹುದು ಉತ್ತರ ಕೊರಿಯಾದ ಸೂತ್ರ! ಹಾಗಾದ್ರೆ ಯಾರಿವಳು ಗೊತ್ತಾ?
ಉತ್ತರ ಕೊರಿಯಾದ ಏಕಚಕ್ರಾಧಿಪತಿ ಕ್ರೂರ ಅಧಿಕಾರಶಾಹಿಯಾದ ಕಿಮ್ ಜಾಂಗ್ ಉನ್ ನ ಪೃಕೃತಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಅನೇಕ ಊಹಾಪೋಹಗಳು ಕೇಳಿ ಬರುತ್ತಿವೆ.ಒಂದು ವೇಳೆ ಆತನ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಮುಂದೆ ಯಾರು ಎನ್ನುವ ಪ್ರಶ್ನೆ ಎಲ್ಲರ ಮುಂದಿದೆ.ಸದ್ಯಕ್ಕೆ ಆ ಚರ್ಚೆಯಲ್ಲಿ ಕಿಮ್ ಯೋ ಜಾಂಗ್ ಈ ಹೆಸರು ಉತ್ತುಂಗದಲ್ಲಿದೆ.
ಕಿಮ್ ಯೋ ಜಾಂಗ್ ಈಕೆ ಕಿಮ್ ಜಾಂಗ್ ಉನ್ ಈತನ ತಂಗಿಯಿದ್ದಾಳೆ.ಇವಳು 26 ಸೆಪ್ಟೆಂಬರ್ 1987 ರಲ್ಲಿ ಜನಿಸಿದ್ದು ಕಿಮ್ ಜಾಂಗ್ ಉನ್ ಗಿಂತಲೂ 4 ವರ್ಷ ಚಿಕ್ಕವಳಿದ್ದಾಳೆ.1996 ರಿಂದ 2000 ಮಧ್ಯದಲ್ಲಿ ಇವಳು ಸ್ವಿಝರ್ಲ್ಯಾಂಡ್ ನ ಬರ್ನ್ ಪಟ್ಟಣದಲ್ಲಿ ಶಿಕ್ಷಣವನ್ನು ಪೂರೈಸಿದಳು.

ಸಾಧಾರಣವಾಗಿ 2014 ರಿಂದ ಅಣ್ಣನ ಜೊತೆ ರಾಜಕೀಯದಲ್ಲಿ ಸಕ್ರಿಯಳಾದಳು. ಕಿಮ್ ಜಾಂಗ್ ಉನ್ ನ ಪ್ರಚಾರ ಪ್ರಮುಖಳೆಂದು ಕೆಲಸ ನೋಡಿಕೊಂಡಿದ್ದಳು. ಹಾಗೆಯೇ ತನ್ನ ಅಣ್ಣ ಕಿಮ್ ನ ಚರಿತ್ರೆ ಯಾವತ್ತೂ ಚೆನ್ನಾಗಿರಬೇಕೆಂದು ಪ್ರಯತ್ನಿಸುತ್ತಿದ್ದಳು.
ಕಿಮ್ ತನ್ನ ತಂಗಿಯ ಕಡೆಗೆ ಕೆಲವೇ ತಿಂಗಳುಗಳ ಹಿಂದೆಯೇ ಮಹತ್ವದ ಜವಾಬ್ದಾರಿಯೊಂದನ್ನು ಒಪ್ಪಿಸಿದ್ದನು. ಇವಳಿಗೆ ಪಾಲಿಟ್ ಬ್ಯುರೋ ದ ಸದಸ್ಯೆಯನ್ನು ಮಾಡಿದ್ದನು.ಇದೇ ಪಾಲಿಟ್ ಬ್ಯುರೋದ ಮಾದ್ಯಮದಿಂದಲೇ ಕಿಮ್ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದ.

ಆದ್ದರಿಂದಲೇ ಕಿಮ್ ಯೋ ಜಾಂಗ್ ಳ ಕಡೆಗೆ ಉತ್ತರ ಕೊರಿಯಾದ ಉತ್ತರಾಧಿಕಾರಿಯಾಗಿ ನೋಡಲಾಗುತ್ತಿದೆ.