VIDEO : ಕಾಯಿಯನ್ನು ಒಡೆದು ಅದರಲ್ಲಿರುವ ತಿರುಳನ್ನು ತಿನ್ನಲು ಮಂಗ ಮಾಡಿದ ಸಾಹಸ ಹೇಗಿದೆ ವಿಡಿಯೊ ನೋಡಿ

ಕೆಲಸ ಯಾವುದೇ ಆಗಲೀ ಒಂದು ಸಲ ಅದು ನಮ್ಮಿಂದ ಸಾಧ್ಯ ಆಗ್ಲಿಲ್ಲ ಅಂತ ಸುಮ್ಮನೆ ಕೈ ಕಟ್ಟಿ ಕೂರಬಾರ್ದು, ಬದಲಿಗೆ ಆ ಕಾರ್ಯ ಮಾಡೋವಾಗ ನಾವೇನು ತಪ್ಪು ಮಾಡಿದ್ವಿ, ಎಲ್ಲಿ ಏನು ಬದಲಾವಣೆ ಮಾಡಿದ್ರೆ ನಮ್ಮ ಕೆಲಸ ಮತ್ತೊಮ್ಮೆ ಮಾಡಿದಾಗ ಸರಿ ಆಗುತ್ತೆ ಅನ್ನೋ ಆಲೋಚನೆ ಮಾಡಬೇಕು. ಮರಳಿ ಯತ್ನವ ಮಾಡು ಅನ್ನೋ ಹಾಗೇ ನಮ್ಮಿಂದ ಅದು ಸಾಧ್ಯ ಆಗೋವರೆಗೂ ಅದನ್ನು ಬಿಡಬಾರದು.

ಹಾಗೆ ಮಾಡೋ ಕೆಲಸವನ್ನು ಸಂಪೂರ್ಣ ಮಾಡದೇ ನನ್ನಿಂದ ಆಗಲ್ಲ ಬಿಡು ಅಂತ ಬೇರೊಂದು ಕೆಲಸ ಮಾಡೋಕೆ ಹೋದಾಗ ಅಲ್ಲಿ ಕೂಡಾ ಮತ್ತೆ ಇಂತದ್ದೇ ಪರಿಸ್ಥಿತಿ ಎದುರಾಗಲ್ಲ ಅನ್ನೋ ಗ್ಯಾರಂಟಿ ಇರೋದಿಲ್ಲ. ಆದ್ರಿಂದ ಹಿಡಿದ ಕೆಲಸವನ್ನು ಪಟ್ಟು ಬಿಡದೇ ಮಾಡಲೇಬೇಕು, ಅದರಲ್ಲಿ ಜಯವನ್ನು ಸಾಧಿಸಲೇಬೇಕು‌.

ಮಾಡೋ ಕೆಲಸ ಸಣ್ಣದೋ, ದೊಡ್ಡದೋ ಎಂದು ಯಾವತ್ತೂ ಗಮನಿಸಬಾರದು. ಅದನ್ನು ಹೇಗೆ ಸಕ್ಸಸ್ ಮಾಡಬೇಕು ಅನ್ನೋ ಆಲೋಚನೆ ನಮ್ಮದಾಗಬೇಕು. ಹೀಗೆ ಮತ್ತೆ ಯತ್ನವ ಮಾಡು ಅನ್ನೋ ನೀತಿಯನ್ನು ಸಾರೋ ಒಂದು ಅಂದವಾದ, ನಗೆ ಹುಟ್ಟಿಸುತ್ತಲೇ ನೀತಿಯನ್ನು ಕೂಡಾ ಹೇಳೋ ಒಂದು ವೀಡಿಯೋ ನೆಟ್ಟಿಗರನ್ನು ಬಹಳಷ್ಟು ರಂಜಿಸಿದೆ.

ನೆಟ್ಟಿಗರನ್ನು ಮೆಚ್ಚಿಸಿದ್ದರ ಜೊತೆಗೆ ಒಂದು ಪಾಠವನ್ನು ಹೇಳಿದ್ದು ಸತ್ಯ. ಇಲ್ಲಿ ನಮಗೆ ಜೀವನದಲ್ಲಿ ಪ್ರಯತ್ನ ಮತ್ತೆ ಮತ್ತೆ ಮಾಡಬೇಕು ಅನ್ನೋದನ್ನು ಹೇಳೋರು ಯಾರು ಅಂತೀರಾ? ಅದು ಒಂದು ಮಂಗ. ಹೌದು ಮಂಗವೊಂದು ತಾನು ತಂದ ಕಾಯೊಂದನ್ನು ಒಡೆದು ತಿನ್ನಲು ಮಾಡಿದ ಪ್ರಯತ್ನ ಅಬ್ಬಾ ಹ್ಯಾಟ್ಸಾಫ್ ಎನ್ಲೇಬೇಕು ನಾವು.

ವೈಲ್ಡ್ ಲೈಫ್ ವೀಡಿಯೋ ದಲ್ಲಿ ರೆಕಾರ್ಡ್ ಆಗಿರೋ ಈ ವೀಡಿಯೋದಲ್ಲಿ ಕೋತಿಯೊಂದು ಎಲ್ಲಿಂದಲೋ ಒಂದು ಕಾಯಿಯನ್ನು ಎತ್ತಿಕೊಂಡು ಬರುತ್ತೆ. ಕಾಯಿಯನ್ನು ಒಡೆದು ಅದರಲ್ಲಿ ಇರುವ ತಿರುಳನ್ನು ತಿನ್ನಬೇಕು. ಕೋತಿ ಆಗ ಅದನ್ನು ನಾವು ತೆಂಗಿನಕಾಯಿಯನ್ನು ಒಡೆಯುವಂತೆ ಒಡೆಯಲು ಸತತ ಪ್ರಯತ್ನ ಮಾಡುತ್ತದೆ. ಆದರೆ ಅದರ ಪ್ರಯತ್ನ ಮಾತ್ರ ಸಫಲ ಆಗೋಲ್ಲ.

ಬಹಳ ಗಟ್ಟಿಯಾಗಿರೋ ಆ ಕಾಯಿಯನ್ನ ಕೈಯಿಂದ ಒಡೆದು ಚೂರ ಮಾಡುವುದು ಅದರಿಂದ ಸಾಧ್ಯ ಇಲ್ಲ ಅಂತ ಕೋತಿಗೆ ಗೊತ್ತಾಗುತ್ತೆ. ತಕ್ಷಣ ತಡಮಾಡದೇ ಅದು ಒಂದು ದೊಡ್ಡ ಕಲ್ಲನ್ನು ತಂದು ಕಾಯಿಯ ಮೇಲೆ ಹಾಕಿ ಒಡೆಯುವ ಪ್ರಯತ್ನ ಕೂಡಾ ಮಾಡುತ್ತೆ ಆದ್ರೆ ಅದು ಕೂಡಾ ಸಕ್ಸಸ್ ಆಗದೆ ಕಾಯಿಯನ್ನು ಎತ್ತಿಕೊಂಡು ಮರದ ಮೇಲೆ ಇಟ್ಟು ಬೇಸರದಿಂದ ಕೊಂಬೆಯ ಮೇಲಿಟ್ಟು ಹೇಗೆ ಇದನ್ನು ಒಡೆಯುವುದು ಎಂದು ಆಲೋಚನೆ ಮಾಡುತ್ತಾ ಇರುತ್ತೆದೆ.

ಆಗ ವೈಲ್ಡ್ ಲೈಫ್ ವೀಡಿಯೊ ಮಾಡಲು ಹೋದವರು ಕ್ಯಾಮರಾ ಅಳವಡಿಸಿರುವ ಒಂದು ಕಲ್ಲಿನಂತ ಗಟ್ಟಿಯಾದ ವಸ್ತುವನ್ನು (ಸ್ಪೈ ರಾಕ್) ಮೇಲಿನಿಂದ ಕೆಳಗೆ ಹಾಕುತ್ತಾರೆ. ಅದನ್ನು ನೋಡಿದ ಮಂಗಕ್ಕೆ ಮತ್ತೆ ಚೈತನ್ಯ ಬಂದಂತೆ ಮರದ ಮೇಲಿಂದ ಓಡೋಡಿ ಬಂದು, ಆ ವಸ್ತುವನ್ನು ತನ್ನ ಬಲವನ್ನೆಲ್ಲಾ ಬಿಟ್ಟು ಎತ್ತಿಕೊಂಡು ಹೋಗುತ್ತದೆ.

ನಂತರ ಇಷ್ಟು ಹೊತ್ತು ಒಡೆಯಲು ವಿಫಲವಾದ ಆ ಕಾಯಿಯನ್ನು ಎತ್ತಿಕೊಂಡು ತಂದು ಒಂದು ಬಂಡೆಯ ಮೇಲಿಟ್ಟು ತಾನು ಎತ್ತಿಕೊಂಡು ಬಂದು ಭಾರೀ ಗಾತ್ರದ ವಸ್ತುವನ್ನು ಕಷ್ಟ ಪಟ್ಟು ಮೇಲೆ ಎತ್ತಿ ಕಾಯಿಯ ಮೇಲೆ ಮತ್ತೆ ಮತ್ತೆ ಹಾಕಿ ಕಾಯಿಯನ್ನು ಒಡೆಯಲು ಯಶಸ್ವಿಯಾಗಿ, ಅದರಲ್ಲಿ ಇದ್ದ ರುಚಿಯಾದ ಪದಾರ್ಥ ತಿನ್ನುತ್ತದೆ.

ವಿಡಿಯೋ ನೋಡಿ…

ನಿಜಕ್ಕೂ ವೀಡಿಯೋ ಮನರಂಜನೆ ನೀಡಿರಬಹುದು ಆದರೆ ಜೊತೆಯಲ್ಲೇ ಅದು ಜೀವನ ಪಾಠವನ್ನು ಕೂಡಾ ನೀಡಿದೆ. ವೀಡಿಯೋ ನೋಡಿದವರು ಮಂಗನಿಗೆ ಸ್ಪೈ ರಾಕ್ ನೆರವಾಯಿತು ಎಂದರೆ, ಕೆಲವರು ಮಂಗನ ಶ್ರಮ ಫಲಿಸಿತು ಎಂದಿದ್ದಾರೆ. ಇನ್ನೂ ಕೆಲವರು ಪಟ್ಟು ಹಿಡಿದರೆ ಹೀಗೆ ಹಿಡಿದು ಕೆಲಸ ಮುಗಿಸಬೇಕು ಎಂದಿದ್ದಾರೆ.

ಇನ್ನೂ ಕೆಲವರು ಮಂಗನು ಕಾಯನ್ನು ಒಡೆಯುವಾಗ ಕಲ್ಲನ್ನು ಎತ್ತಿಹಾಕುವಾಗ ಅದರ ಕಾಲು ಬೆರಳುಗಳಿಗೆ ಎಲ್ಲಿ ತಗುಲಿ ಗಾಯವಾಗುತ್ತೋ ಎಂದು ಭ ಯ ವಾಗಿತ್ತು ಎಂದು ಮಂಗನ ಕಾಳಜಿ ವಹಿಸುತ್ತಾ ಕಾಮೆಂಟ್ ಮಾಡಿದ್ದಾರೆ.
-Team Infotrend