Viral Video: ತನ್ನ ಪುಟ್ಟ ಮಗನಿಗೆ ಸಂಗೀತ ಅಭ್ಯಾಸ ಮಾಡಿಸುತ್ತಿರುವ ತಂದೆ; “ಮಗು ಆ ವ್ಯಕ್ತಿಯ ತಂದೆ” ಎಂದ ಅಮಿತಾಭ್ ಬಚ್ಚನ್!
ಬಾಲಿವುಡ್ ನ ಶೆಹೆನ್ಶಾ ಎಂದೇ ಖ್ಯಾತ ನಾಮರಾದವರು, ಬಾಲಿವುಡ್ ಮಾತ್ರವೇ ಅಲ್ಲದೇ ಭಾರತೀಯ ಸಿನಿಮಾ ರಂಗದ ದಂತಕಥೆಯಾಗಿರುವ ನಟ ಅಮಿತಾಬ್ ಬಚ್ಚನ್. ವಯಸ್ಸು ಅವರ ನಟನಾ ಜೀವನಕ್ಕೆ ಯಾವುದೇ ಅಡ್ಡಿಯಾಗಿಲ್ಲ. ವಯಸ್ಸು ಏರಿದಂತೆ ವೈವಿದ್ಯಮಯ ಪಾತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಿನಿ ರಂಗದಲ್ಲಿ ದಶಕಗಳಿಂದಲೂ ಕೂಡಾ ಬೇಡಿಕೆಯ ನಟನಾಗಿ ತನ್ನದೇ ಆದ ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವೇ ಅಲ್ಲದೇ ಕಿರುತೆರೆಯ ಮೇಲೆ ಜಾದೂ ಮಾಡಿದ ನಟ ಅಮಿತಾಬ್ ಬಚ್ಚನ್ ಅವರು. ದೇಶದಲ್ಲಿ ಬಹುದೊಡ್ಡ ಹೆಸರನ್ನು ಮಾಡಿ, ಜನಪ್ರಿಯತೆಯ ಅಗ್ರಪಂಕ್ತಿಯಲ್ಲಿ ಇರುವ ಕ್ವಿಜ್ ಶೋ ಕೌನ್ ಬನೇಗಾ ಕರೋಡ್ ಪತಿ ಯ ನಿರೂಪಕನಾಗಿ ಅಮಿತಾಬ್ ಮತ್ತೊಂದು ಇತಿಹಾಸವನ್ನು ಕಿರುತೆರೆಯಲ್ಲಿ ರಚಿಸಿದ್ದಾರೆ.
ಹೀಗೆ ಸಿನಿಮಾ, ಜಾಹೀರಾತು ಹಾಗೂ ಕಿರುತೆರೆಯಲ್ಲಿ ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಲೇ ಇರುವ ಅಮಿತಾಬ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲೂ ಕೂಡಾ ಆ್ಯಕ್ಟೀವ್ ಆಗಿದ್ದಾರೆ. ಟ್ವಿಟರ್ ನಲ್ಲಿ ಅಮಿತಾಬ್ ಅವರು ಆಗಾಗ ವೈರಲ್ ವೀಡಿಯೋಗಳನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಜನರ ಗಮನವನ್ನು ಸೆಳೆಯುತ್ತಾರೆ. ಅಮಿತಾಬ್ ಅವರು ಶೇರ್ ಮಾಡುವ ವೀಡಿಯೋಗಳು ಕೂಡಾ ಅಲ್ಪ ಸಮಯದಲ್ಲೇ ವೈರಲ್ ಆಗಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳನ್ನು ಕೂಡಾ ಪಡೆಯುತ್ತಾ ಚರ್ಚೆಯನ್ನು ಹುಟ್ಟುಹಾಕುತ್ತದೆ. ಅಮಿತಾಬ್ ಬಚ್ಚನ್ ಅವರು ಈಗ ಅಂತಹುದೇ ಒಂದು ಆಕರ್ಷಕ ವೈರಲ್ ವೀಡಿಯೋ ಶೇರ್ ಮಾಡಿದ್ದಾರೆ.
ಅಮಿತಾಬ್ ಅವರು ಶೇರ್ ಮಾಡಿರುವ ವೀಡಿಯೋದಲ್ಲಿ ತಂದೆ ಮತ್ತು ಪುಟ್ಟ ಮಗನ ಜೋಡಿ ಹಾರ್ಮೋನಿಯಂ ನುಡಿಸುತ್ತಾ ಸಂಗೀತವನ್ನು ಅಭ್ಯಾಸ ಮಾಡುವುದನ್ನು ನಾವು ನೋಡಬಹುದು. ವೀಡಿಯೋದಲ್ಲಿ ಪುಟ್ಟ ಬಾಲಕ ತನ್ನ ತಂದೆಯೊಂದಿಗೆ ಸ್ವರ ಸೇರಿಸಿ ಹಾಡುತ್ತಿದ್ದಾನೆ. ಅದು ಮಾತ್ರವೇ ಅಲ್ಲದೇ ಬಾಲಕನು ಹಾಡಿನ ಮಧ್ಯೆ ಮಧ್ಯೆ ತನ್ನ ತಂದೆಗೆ ಸರಿಯಾಗಿ ಹಾಡುವಂತೆ ಸೂಚನೆಗಳನ್ನು ಕೂಡಾ ನೀಡುತ್ತಿದ್ದಾನೆ. ಅದು ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲದೇ ಬಾಲಕನು ತಾನೊಬ್ಬನೇ ಕೂಡಾ ಹಾಡುಗಳನ್ನು ಹಾಡುತ್ತಿದ್ದಾನೆ. ಅಮಿತಾಬ್ ಅವರು ವೀಡಿಯೋ ಶೇರ್ ಮಾಡುತ್ತಾ, “ಮಗು ಆ ವ್ಯಕ್ತಿಯ ತಂದೆ” ಎಂದು ಬರೆದುಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಹಂಚಿಕೊಂಡಿರುವ ಈ ವೀಡಿಯೋವನ್ನು ಅವರ ಅಭಿಮಾನಿಗಳು ಬಹಳ ಮೆಚ್ಚಿಕೊಂಡಿದ್ದು, ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅವರು ಆಗಾಗ ಇಂತಹ ವೈರಲ್ ವೀಡಿಯೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರು ಹಂಚಿಕೊಳ್ಳುವ ಈ ವೀಡಿಯೋಗಳು ಕೂಡಾ ಶೇರ್ ಆದ ಅಲ್ಪ ಸಮಯದಲ್ಲೇ ಸುದ್ದಿಯಾಗಿ ಎಲ್ಲರ ಗಮನವನ್ನು ಕೂಡಾ ಸೆಳೆಯುತ್ತದೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಪುಟ್ಟ ಬಾಲಕನ ಪ್ರತಿಭೆಯನ್ನು ಮೆಚ್ಚಿ ಆತನನ್ನು ಹೊಗಳುತ್ತಾ ಕಾಮೆಂಟ್ ಗಳನ್ನು ನೀಡಿದ್ದಾರೆ.
ವಿಡಿಯೋ ನೋಡಿ
T 3694 – Child is the Father of Man ! pic.twitter.com/iO8G9URmUz
— Amitabh Bachchan (@SrBachchan) October 19, 2020
ಅಮಿತಾಬ್ ಅವರ ವೃತ್ತಿಯ ಕಡೆ ನೋಡುವುದಾದರೆ ಪ್ರಸ್ತುತ ಅವರ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ವೈಜಯಂತಿ ಮೂವೀಸ್ ಬ್ಯಾನರ್ ನಲ್ಲಿ ಅಶ್ವಿನ್ ದತ್ ಅವರು ನಿರ್ಮಾಣ ಮಾಡುತ್ತಿರುವ ಭಾರೀ ಬಜೆಟ್ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ತೆರೆಯ ಮೇಲೆ ಅವರು ಕಾಣಿಸಿದ್ದು ಗುಲಾಬೋ ಸಿತಾಬೋ ಸಿನಿಮಾದಲ್ಲಿ. ಅಯಾನ್ ಮುಖರ್ಜೀಯ ಬ್ರಹ್ಮಾಸ್ತ್ರ ಅಮಿತಾಬ್ ಅವರ ಮುಂಬರುವ ಸಿನಿಮಾಗಳಲ್ಲಿ ಒಂದಾಗಿದೆ. ಇದಲ್ಲದೇ ಇಮ್ರಾನ್ ಆಶ್ಮಿಯ ಚೆಹರಾ ಹಾಗೂ ಕ್ರೀಡೆಗಳ ಮೇಲೆ ಆಧಾರಿತ ಜುಂಡ್ ಸಿನಿಮಾಗಳಲ್ಲಿ ಕೂಡಾ ಅಮಿತಾಬ್ ಇದ್ದಾರೆ.