ಎರಡು ಫೋಟೋಗಳನ್ನು ಶೇರ್ ಮಾಡಿ ಅವುಗಳಲ್ಲಿನ ಸಮಾನತೆಯನ್ನು ಗುರುತಿಸಲು ಹೇಳಿದ ಆನಂದ ಮಹಿಂದ್ರಾ; ‘ವಿಚಿತ್ರ’ ಉತ್ತರಗಳನ್ನು ನೀಡಿದ ಯುಜರ್ಸ್!
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರ ಹಾಗೂ ಜನರೊಂದಿಗೆ ಕೂಡಾ ಸಂವಹನ ಮಾಡುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮಾಲೀಕರಾದ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಅನೇಕ ವಿಷಯಗಳನ್ನು ಹಾಗೂ ಸ್ಪೂರ್ತಿದಾಯಕ ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಅವರು ನೆಟ್ಟಿಗರಿಗಾಗಿ ಎರಡು ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಅವರು ಹಂಚಿಕೊಂಡಿರುವ ಫೋಟೋ ಗಳಲ್ಲಿ ಏನು ಸಮಾನತೆ ಇದೆ ಎಂದು ಕೇಳಿದ್ದಾರೆ. ಆನಂದ್ ಮಹೀಂದ್ರಾ ಅವರ ಕೇಳಿರುವ ಈ ಪ್ರಶ್ನೆಗೆ ನೆಟ್ಟಿಗರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಈ ಎರಡೂ ಫೋಟೋಗಳು ಕೂಡಾ ಹಲವು ಕಾರಣಗಳಿಂದ ನೋಡುಗರಿಗೆ ವಿಶೇಷ ಎನಿಸಿದೆ. ಆ ಫೋಟೋಗಳಲ್ಲಿ ಕಾಣುವುದು ಏನು ಅನ್ನೋದಾದ್ರೆ ಮೊದಲನೇ ಫೋಟೋದಲ್ಲಿ ಒಂದು ಮನೆಯ ಛಾವಣಿಯ ಮೇಲೆ ಸೌರ ಶಕ್ತಿ ಸಂಚಾಲಿತ ಗೀಸರ್ ಅನ್ನು ಇಡಲಾಗಿದೆ. ಆದರೆ ವಿಚಿತ್ರ ಎನ್ನುವಂತೆ ಆ ಗೀಸರ್ ನ ಮೇಲೆ ಒಂದು ಶೀಟ್ ಅನ್ನು ನೆರಳು ನೀಡುವಂತೆ ಅದರ ಮೇಲೆ ಅಳವಡಿಸಲಾಗಿದೆ. ಸೂರ್ಯನ ಶಕ್ತಿಯಿಂದ ಕೆಲಸ ಮಾಡುವ ಸೋಲಾರ್ ಗೀಸರ್ ಮೇಲೆ ನೆರಳನ್ನು ಬರುವಂತೆ ಮಾಡಿರುವುದು ವಿಚಿತ್ರವಾಗಿ ಕಂಡಿದೆ.
A friend sent me this pic on the left, of a solar panel on a rooftop. What do you believe it has in common with the pic on the right, which I had tweeted some time ago? pic.twitter.com/A2kXmzzbQk
— anand mahindra (@anandmahindra) October 16, 2020
ಇನ್ನು ಅವರು ಶೇರ್ ಮಾಡಿರುವ ಎರಡನೇ ಪೋಟೋ ದಲ್ಲಿ ಒಂದು ಬಾತ್ ರೂಂ ಅನ್ನು ನಾವು ನೋಡವಹುದು. ಆ ಬಾತ್ ರೂಂ ಬಹಳ ಅಚ್ಚುಕಟ್ಟಾಗಿದೆ ಹಾಗೂ ನೂತನ ಮಾದರಿಯ ಬಾತ್ ರೂಂ ಆಗಿದೆ. ಆದರೆ ಈ ಬಾತ್ ರೂಂ ನಲ್ಲಿ ನೀರು ಹರಿದು ಹೋಗುವಾಗ ನೀರು ಬಾತ್ ರೂಂ ನಿಂದ ಹೊರಗೆ ಹೋಗಬೇಕಾದ ಚರಂಡಿಯನ್ನು ನೆಲದಿಂದ ಅಂದರೆ ಹರಿದು ಬಂದು ಅದರಲ್ಲಿ ಹೋಗುವ ಜಾಗದಲ್ಲಿ ನೆಲದಿಂದ ಎತ್ತರಕ್ಕೆ ಮಾಡಲಾಗಿದೆ. ಅಂದರೆ ಅದರೊಳಗೆ ನೀರು ಹರಿದು ಹೋಗುವುದು ಸಾಧ್ಯವೇ ? ಎನ್ನುವ ಅನುಮಾನ ನಮ್ಮಲ್ಲಿ ಮೂಡಿಸುತ್ತದೆ. ಹೀಗೆ ಇಂತಹ ಎರಡು ವಿಚಿತ್ರ ಫೋಟೋ ಶೇರ್ ಮಾಡಿ ಆನಂದ್ ಮಹೀಂದ್ರಾ ಇದರಲ್ಲಿರುವ ಸಾಮ್ಯತೆ ಏನು ಎಂದಿದ್ದಾರೆ.
ಆನಂದ್ ಮಹೀಂದ್ರಾ ಅವರು ತಾವು ಶೇರ್ ಮಾಡಿದ ಫೋಟೋ ಜೊತೆಗೆ ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ಈ ಛಾವಣಿಯ ಮೇಲಿರುವ ಸೋಲಾರ್ ಪ್ಯಾನಲ್ ನ ಫೋಟೋ ಕಳಿಸಿದ್ದಾರೆ, ಇನ್ನೊಂದು ಫೋಟೋ ನಾನು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದೆ. ಈಗ ನೀವು ಈ ಎರಡೂ ಫೋಟೋ ಗಳನ್ನು ಮತ್ತೊಮ್ಮೆ ನೋಡಿ ಇವರೆಡರಲ್ಲಿ ಏನು ಸಮಾನತೆ ಇದೆ ಅನ್ನೋದನ್ನು ಹೇಳಿರೆಂದು ನೆಟ್ಟಿಗರನ್ನು ಪ್ರಶ್ನೆ ಮಾಡಿದ್ದಾರೆ. ಇನ್ನು ಆನಂದ್ ಮಹೀಂದ್ರಾ ಅವರು ಕೇಳಿದ ಈ ಪ್ರಶ್ನೆಗೆ ನೆಟ್ಟಿಗರು ಕೂಡಾ ಉತ್ತರಗಳನ್ನು ತಮ್ಮ ಪ್ರತಿಕ್ರಿಯೆಗಳ ಮೂಲಕ ನೀಡಿದ್ದಾರೆ.
The solar panels are covered with roof ….so they become useless. And the sink is on a height so the water can't go into it . Both are basically of no use..
— Manas Pawar (@ManasPawar10) October 16, 2020
ಟ್ವಿಟರ್ ಬಳಕೆದಾರರೊಬ್ಬರು ಈ ಎರಡೂ ಫೋಟೋಗಳಲ್ಲಿ ಅವು ನಿಗಧಿತ ಗುರಿ ಸಾಧನೆ ಮಾಡಲು ವಿಫಲವಾಗಿವೆ, ಒಂದು ಕಡೆ ಸೋಲಾರ್ ಪ್ಯಾನೆಲ್ ವಿದ್ಯುತ್ ಉತ್ಪಾದನೆ ಮಾಡಲಾಗದು, ಇನ್ನೊಂದು ಕಡೆ ನೀರು ಚರಂಡಿಯಿಂದ ಹೊರಗೆ ಹೋಗಲಾರದು ಎಂದು ಹೇಳಿದ್ದಾರೆ. ಮತ್ತೊಬ್ಬರು ಎರಡನ್ನೂ ಮಾಡಿದ ಇಂಜಿನಿಯರ್ ಒಬ್ಬರೇ ಇರಬೇಕು ಎಂದಿದ್ದಾರೆ. ಮತ್ತೊಬ್ಬರು ಎರಡನ್ನೂ ಕೂಡಾ ಬಳಸೋಕೆ ಆಗಲ್ಲ ಎಂದಿದ್ದಾರೆ. ಹೀಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿದ್ದು, ಈಗಾಗಲೇ 1.6 ಲಕ್ಷ ದಾಟಿದ ಲೈಕ್ ಗಳು ಫೋಟೋ ಗೆ ಬಂದಿದ್ದರೆ ಸಾವಿರಾರು ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
Same engineer!
— Girish Anand (@GirishAnand) October 16, 2020