ದುಬೈ ಬೀಚ್ ಮೇಲೆ ಎಂಜಾಯ್ ಮಾಡುತ್ತಿರುವ ಚಹಲ್ ಮತ್ತು ಧನಾಶ್ರೀ; ‘ಬ್ರೋ ಈ ಸಲ ಕಪ್ ಗೆದ್ದು ಬನ್ನಿ’ ಎಂದ ಫ್ಯಾನ್ಸ್!
ಸೋಶಿಯಲ್ ಮೀಡಿಯಾದ ಡ್ಯಾನ್ಸಿಂಗ್ ಸೆನ್ಸೇಷನ್ ಎನಿಸಿರುವ, ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಅವರ ಭಾವೀ ಪತ್ನಿ ಧನಾಶ್ರೀ ವರ್ಮಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸುದ್ದಿಯಾಗಿದ್ದರೆ ಎಂದ ಕೂಡಲೇ ಧನಾಶ್ರೀ ವರ್ಮಾ ರ ಹೊಸ ಡಾನ್ಸಿಂಗ್ ವೀಡಿಯೋ ವೈರಲ್ ಆಯ್ತಾ ಎನ್ನಬೇಡಿ. ಏಕೆಂದರೆ ಈ ಬಾರಿ ವೈರಲ್ ಆಗಿರುವುದು ವೀಡಿಯೋ ಅಲ್ಲ, ಬದಲಿಗೆ ತಮ್ಮ ಭಾವೀ ಪತಿ ಯಜ್ವೇಂದ್ರ ಚಹಲ್ ಜೊತೆ ಕಳೆದ ಕೆಲವು ಸಂತಸದ ಕ್ಷಣಗಳ ಫೋಟೋಗಳು. ಹೌದು ಧನಾಶ್ರೀ ವರ್ಮಾ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಗಳನ್ನು ನೋಡಲು ದುಬೈ ತಲುಪಿದ್ದಾರೆ. ಅಲ್ಲಿ ಪಂದ್ಯದ ವೇಳೆ ತಮ್ಮ ಭಾವೀ ಪತಿ ಯಜ್ವೇಂದ್ರ ಚಹಲ್ ಅವರನ್ನು ಆಟಕ್ಕೆ ಹುರಿದುಂಬಿಸುತ್ತಿದ್ದಾರೆ ಧನಾಶ್ರೀ ವರ್ಮಾ. ಈ ನಡುವೆ ಬಿಡುವಿನ ವೇಳೆಯಲ್ಲಿ ಬೀಚ್ ನಲ್ಲಿ ಧನಾಶ್ರೀ ಹಾಗೂ ಯಜ್ವೇಂದ್ರ ಅವರು ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.
ಬೀಚ್ ನಲ್ಲಿ ತಾನು ಮತ್ತು ಭಾವೀ ಪತಿ ತೆಗೆದುಕೊಂಡ ಫೋಟೋಗಳನ್ನು ಧನಾಶ್ರೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿವೆ. ಫೋಟೋಗಳನ್ನು ನೋಡುತ್ತಿರುವ ಅಭಿಮಾನಿಗಳು ಧನಾಶ್ರೀ ವರ್ಮಾ ಹಾಗೂ ಯಜ್ವೇಂದ್ರ ಚಹಲ್ ಅವರ ಜೋಡಿಯನ್ನು ಹಾಡಿ ಹೊಗಳಿದ್ದರೆ, ಇನ್ನೂ ಕೆಲವರು ಕ್ರಿಕೆಟಿಗ ಯಜ್ವೇಂದ್ರ ಅವರಿಗೆ ಕ್ರಿಕೆಟ್ ಪಂದ್ಯ ಗೆದ್ದು ಬನ್ನಿ ಸಲಹೆಯನ್ನು ಕೂಡಾ ನೀಡುತ್ತಿದ್ದಾರೆ. ಧನಾಶ್ರೀ ಯಜ್ವೇಂದ್ರ ಜೊತೆಗಿರುವ ಫೋಟೋವನ್ನು ಹಂಚಿಕೊಂಡು, “ಜೀವನದಲ್ಲಿ ಕೆಲವೊಂದು ವಿಷಯಗಳು ಹೀಗೆ ಮುಳುಗುವ ಸೂರ್ಯನ ಹಾಗೆ ಬಹಳ ಸುಂದರವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ. ಧನಾಶ್ರೀ ಅವರು ಹಂಚಿಕೊಂಡ ಈ ಫೋಟೋಗೆ ಅಭಿಮಾನಿಗಳ ಕಡೆಯಿಂದ ಪ್ರತಿಕ್ರಿಯೆಗಳು ಬರಲು ಆರಂಭಿಸಿದೆ ಕೂಡಾ.
ಪ್ರತಿಕ್ರಿಯೆಯಲ್ಲಿ ನೆಟ್ಟಿಗರೊಬ್ಬರು, ” ಬ್ರೋ ಈ ಬಾರಿಯಾದರೂ ಐಪಿಎಲ್ ಗೆದ್ದು ಬನ್ನಿ ಬೇರೆ ಇನ್ನೇನು ಬೇಡ. ಮುಂದಿನ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆ ಇದೆ, ಅದರಲ್ಲಿ ಗೆದ್ದು ಆರ್ ಸಿ ಬಿ ಯನ್ನು ಎರಡನೇ ಸ್ಥಾನಕ್ಕೆ ತನ್ನಿ” ಎಂದು ಹೇಳಿದ್ದಾರೆ. ಮತ್ತೊಬ್ಬ ಇನ್ಸ್ಟಾಗ್ರಾಂ ಬಳಕೆದಾರರು, “ಸಹೋದರ ಇನ್ನಾದರೂ ಸ್ಲೀಪರ್ ಗಳನ್ನು ಧರಿಸುವುದನ್ನು ನಿಲ್ಲಿಸಿ” ಎನ್ನುವ ಸಲಹೆಯನ್ನು ನೀಡಿದ್ದಾರೆ. ಧನಾಶ್ರೀ ವರ್ಮಾ ಮತ್ತು ಯಜ್ವೇಂದ್ರ ಚಹಲ್ ಅವರು ಬಹಳ ಖುಷಿಯಾಗಿ ಮೋಜು ಮಾಡುತ್ತಾ ಕಳೆದ ದೃಶ್ಯಗಳ ವೀಡಿಯೋ ಒಂದು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಗೆ ಅದು ಖುಷಿ ಕೊಟ್ಟಿದೆ.
ಯಜ್ವೇಂದ್ರ ಚಹಲ್ ಮತ್ತು ಧನಾಶ್ರೀ ವರ್ಮಾ ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಅವರ ನಿಶ್ಚಿತಾರ್ಥದ ಫೋಟೋಗಳು ಕೂಡಾ ವೈರಲ್ ಆಗಿ ದೊಡ್ಡ ಸುದ್ದಿಯಾಗಿತ್ತು. ಯಜ್ವೇಂದ್ರ ತನ್ನ ಕ್ರಿಕೆಟ್ ಕೌಶಲ ಹಾಗೂ ತನ್ನ ಆಟಗಾರಿಕೆಯ ಮೂಲಕ ಜನರ ಗಮನವನ್ನು ಸೆಳೆಯುತ್ತಿದ್ದು, ಅಭಿಮಾನಿಗಳಿಗೆ ಸಂತಸವನ್ನು ನೀಡುತ್ತಿದ್ದಾರೆ. ಇನ್ನು ಧನಾಶ್ರೀ ವರ್ಮಾ ವೃತ್ತಿಯಿಂದ ಡಾಕ್ಟರ್ ಆದರೂ ಕೂಡಾ ಒಬ್ಬ ಡಾನ್ಸರ್, ಕೊರಿಯೋಗ್ರಫರ್ ಆಗಿ ಸಿಕ್ಕಾಪಟ್ಟೆ ಹೆಸರನ್ನು ಮಾಡುತ್ತಿದ್ದು, ಒಬ್ಬ ಜನಪ್ರಿಯ ಯೂಟ್ಯೂಬರ್ ಕೂಡಾ ಆಗಿದ್ದಾರೆ. ಯಜ್ವೇಂದ್ರ ಜೊತೆ ನಿಶ್ಚಿತಾರ್ಥ ಆದ ಮೇಲೆ ಧನಾಶ್ರೀ ಅವರ ಹಿಂಬಾಲಕರ ಸಂಖ್ಯೆ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ.
ಧನಾಶ್ರೀ ವರ್ಮಾ ಬಾಲಿವುಡ್ ನ ಸೂಪರ್ ಹಿಟ್ ಹಾಡುಗಳು ಮಾತ್ರವಲ್ಲದೇ ಪಂಜಾಬಿ ಆಲ್ಬಮ್ ಹಾಡುಗಳಿಗೂ ಕೂಡಾ ತನ್ನದೇ ಆದ ಕೊರಿಯೋಗ್ರಫಿ ಮಾಡಿ, ತಾನೇ ಆ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಆ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಅಲ್ಪ ಕಾಲದಲ್ಲೇ ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆದು ವೀಡಿಯೋಗಳು ವೈರಲ್ ಆಗುತ್ತವೆ. ಅವರ ಡಾನ್ಸ್ ವೀಡಿಯೋಗಳು ಅವರ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ಸದ್ಯಕ್ಕಂತೂ ಧನಾಶ್ರೀ ವರ್ಮಾ ಸೋಶಿಯಲ್ ಮೀಡಿಯಾದ ಡಾನ್ಸಿಂಗ್ ಸೆನ್ಸೇಷನ್ ಆಗಿದ್ದಾರೆ.