ನಿಮ್ಮ ಸ್ವಂತ ಮನೆಯ ಕನಸನ್ನು ಪೂರ್ಣ ಗೊಳಿಸಲು ಓಡೋಡಿ ಬಂದ ಟಾಟಾ; ಕೊಡಲಿದ್ದಾರೆ ಶೇಕಡಾ 4% ಗಿಂತಲೂ ಕಡಿಮೆ ಬಡ್ಡಿ ದರದಲ್ಲಿ ಸಾಲ!
ಪ್ರತಿಯೊಂದು ವ್ಯಕ್ತಿ ತನ್ನ ಸ್ವಂತ ಮನೆಯ ಬಗ್ಗೆ ಕನಸನ್ನು ಹೊತ್ತು ಕೊಂಡಿರುತ್ತಾನೆ. ಅದರಲ್ಲಿ ಹಬ್ಬ ಹರಿದಿನಗಳ ಮುಹೂರ್ತಗಳು ಬಂದರೆ ಸಾಕು ಕಟ್ಟಡ ನಿರ್ಮಾಣದವರ ಜಾಹೀರಾತುಗಳು ಮತ್ತು ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಆಕರ್ಷಿಸಲು ಆಕರ್ಷಕ ಬಡ್ದಿದರಗಳನ್ನು ನಿಗದಿ ಮಾಡುತ್ತವೆ.
ಆದರೆ ಯಾರು ಹಣವಿಲ್ಲದೆ, ಸಾಲದ ಕಾರಣದಿಂದ ಅಥವಾ ಇನ್ಯಾವುದೋ ಬೇರೆ ಕಾರಣದಿಂದ ಮನೆ ಖರೀದಿಸುವ ಅವಸರದಿಂದ ದೂರ ಉಳಿಯುತ್ತಿದ್ದರೆ ಅಂಥವರಿಗಾಗಿ ಸಹಾಯ ಮಾಡಲು ಟಾಟಾ ಗ್ರೂಪ್ ಬಂದಿದೆ. ಟಾಟಾ ಅವರು ಟಾಟಾ ಹೌಸಿಂಗ್ ಲೋನ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಟಾಟಾ ಹೌಸಿಂಗ್ ಲೋನ್ ಅಡಿಯಲ್ಲಿ ಗೃಹಸಾಲದ ವಿಶೇಷ ಯೋಜನೆಯನ್ನು ಲಾಂಚ್ ಮಾಡಿದೆ. ಇದರಲ್ಲಿ ಒಂದು ವರ್ಷಕ್ಕಾಗಿ ಗೃಹ ಸಾಲದ ಮೇಲೆ ಬರೀ 3.99 ಪ್ರತಿಶತ ಬಡ್ಡಿಯನ್ನು ಕೊಡಬೇಕಾಗುವುದು. ಇದರ ಜೊತೆಗೆ ಒಂದು ಒಳ್ಳೆಯ ಆಫರನ್ನು ಸಹ ಬಿಡುಗಡೆ ಮಾಡಿದೆ. ಬುಕಿಂಗ್ ಮಾಡಿದ ಮೇಲೆ ನಿಮ್ಮ ಪ್ರಾಪರ್ಟಿ ಅನುಸಾರವಾಗಿ 25 ಸಾವಿರದಿಂದ 8 ಲಕ್ಷಗಳವರೆಗೆ ಗಿಫ್ಟ್ ವೌಚರ್ ಸಹಿತ ನೀಡಲಾಗುವುದು. ಕಂಪನಿ ಹೇಳಿಕೆಯ ಪ್ರಕಾರ 10% ಹಣವನ್ನು ತುಂಬಿದ ಮೇಲೆ ಹಾಗೂ ಪ್ರಾಪರ್ಟಿಯ ರಿಜಿಸ್ಟ್ರೇಷನ್ ಆದನಂತರ ಈ ವೌಚರ್ ಗಳನ್ನು ಗ್ರಾಹಕರಿಗೆ ನೀಡಲಾಗುವುದು.
RBI ಕೆಲವೇ ದಿವಸಗಳ ಹಿಂದೆ ರೆಪೋ ರೇಟ್ ನಲ್ಲಿ ಕಡಿತ ಮಾಡಿದೆ. ಇದೇ ಆಧಾರದ ಮೇಲೆ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಅಗ್ಗ ಬಡ್ಡಿದರದ ಸೌಲಭ್ಯ ನೀಡುತ್ತಿವೆ. ಈ ಯೋಜನೆಯು 20 ನವೆಂಬರ್ ವರೆಗೆ 10 ಪ್ರಾಜೆಕ್ಟ್ ಗಳಿಗಾಗಿ ಲಭ್ಯವಿದೆ.
ಟಾಟಾ ಅವರ ಈ ಯೋಜನೆ ಅಡಿಯಲ್ಲಿ 3.99 % ಬಡ್ಡಿದರ ಮತ್ತು 8 ಲಕ್ಷಗಳ ವರೆಗೆ ಗಿಫ್ಟ್ ವೌಚರ್ ಈ ಎರಡು ಒಳ್ಳೆಯ ಹಾಗೂ ಲಾಭದ ವೈಶಿಷ್ಟ್ಯಗಳು ಇವೆ. ಹಣದುಬ್ಬರದ ಈ ಸಮಯದಲ್ಲಿ ಸ್ವಂತದ ಮನೆ ಹೊಂದುವುದು ತುಂಬಾ ಕಷ್ಟದ ಕೆಲಸವಾಗಿದೆ. ಇಂಥ ಹಬ್ಬಗಳ ಸಮಯದಲ್ಲಿ ಮನೆ ಖರೀದಿಗಾಗಿ ನೀಡಿರುವ ಈ ಆಫರ್ ಗಳು ಮುದನೀಡುವ ಸಂಗತಿಯಾಗಿವೆ.
ಈ ಹಬ್ಬದ ಸಡಗರಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು HDFC ಬ್ಯಾಂಕುಗಳು ಮನೆ ಖರೀದಿಗಾಗಿ ಮತ್ತು ವಾಹನ ಖರೀದಿಗಾಗಿ ಅಗ್ಗದ ಬಡ್ಡಿದರದ ಸೌಲಭ್ಯಗಳನ್ನು ಕಲ್ಪಿಸುತ್ತವೆ.