“ನೀವು ಹಣೆಗೆ ಸಿಂದೂರ ಯಾಕೆ ಹಚ್ಚುತ್ತಿರಾ?” ಎಂಬ ಪ್ರಶ್ನೆಗೆ ರಾಷ್ಟ್ರಪತಿಗಳ ಎದುರೇ ಉತ್ತರ ಕೊಟ್ಟ ರೇಖಾ!

ತಮ್ಮ ಕೌಶಲ್ಯಪೂರ್ಣ ನಟನೆ ಮತ್ತು ಸೌಂದರ್ಯದ ಕಾರಣದಿಂದಾಗಿ ಕಳೆದ ಮೂರು ನಾಲ್ಕು ದಶಕಗಳಿಂದ ಬಾಲಿವುಡ್ ಮೇಲೆ ಪ್ರಭುತ್ವ ಮತ್ತು ಹಿಡಿತ ಸಾಧಿಸಿಕೊಂಡು ಬಂದ ದಕ್ಷಿಣದ ನಟಿ ಎಂದರೆ ರೇಖಾ. ಇಂದಿಗೂ ಅವರ ನಟನೆ ಮತ್ತು ಮಾದಕ ಸೌಂದರ್ಯದ ಅಭಿಮಾನಿಗಳು ದೇಶದ ತುಂಬೆಲ್ಲ ಅಪಾರ ಸಂಖ್ಯೆಯಲ್ಲಿದ್ದಾರೆ. ಜೀವನದಲ್ಲಿ ನಟಿಸಿದ ಚಿತ್ರಗಳಿಗಿಂತ ಅವರು ತಮ್ಮ ಖಾಸಗಿ ಜೀವನದ ಬಗ್ಗೆಯೇ ಹೆಚ್ಚು ಚರ್ಚೆಯಲ್ಲಿ ಇರುತ್ತಾರೆ. ರೇಖಾ ಅವರ ಜೀವನ ರೀಲ್ ಲೈಫ್ ಗಿಂತ ರಿಯಲ್ ಲೈಫ್ ಯಾವಾಗಲೂ ವಿವಾದದ ಮತ್ತು ಚರ್ಚೆಯ ಸಂಗತಿಯಾಗಿದೆ.

80ರ ದಶಕದಿಂದ ಇಲ್ಲಿಯವರೆಗೂ ರೇಖಾ ಅವರು ತಲೆಯ ಮಧ್ಯಭಾಗದಲ್ಲಿ ಸಿಂಧೂರ ತಿಲಕವನ್ನು ಇಟ್ಟು ಕೊಳ್ಳುತ್ತಾರೆ. ಈ ಪ್ರಶ್ನೆ ಅನೇಕ ಸಿನೆಪ್ರೇಮಿಗಳಿಗೆ ಮೇಲಿಂದ ಮೇಲೆ ಕಾಡಿದ್ದೇ ಕಾಡಿದ್ದು. ಬರಿ ಸಿನೆ ಪ್ರೇಮಿಗಳಿಗೆ ಅಷ್ಟೇ ಅಲ್ಲ ಎಷ್ಟೋ ಬಾಲಿವುಡ್ ನಾಯಕರಿಗೂ ಮತ್ತು ರಾಜಕಾರಣಿಗಳಿಗೂ ಸಹಿತ ಈ ಪ್ರಶ್ನೆ ಕಾಡಿತ್ತು. ರಾಜಕಾರಣಿಗಳಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ನೀಲಂ ಸಂಜೀವ ರೆಡ್ಡಿ ಅವರು ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಿದ್ದರು.

1982 ರೇಖಾ ಅವರಿಗೆ ಉಮ್ರಾವ್ ಜಾನ್ ಚಿತ್ರಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತು. ಈ ಕಾರ್ಯಕ್ರಮದಲ್ಲಿ ಪುರಸ್ಕಾರಗಳನ್ನು ವಿತರಣೆ ಮಾಡುವ ಸಮಾರಂಭದಲ್ಲಿ ನೀಲಂ ಸಂಜೀವ ರೆಡ್ಡಿ ಅವರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ನೀಲಂ ಸಂಜೀವ ರೆಡ್ಡಿ ಅವರಿಗೆ ರೇಖಾ ಅವರು ಭೇಟಿಯಾದಾಗ ರೆಡ್ಡಿ ಅವರು ನೇರವಾಗಿ ಈ ಪ್ರಶ್ನೆಯನ್ನು ರೇಖಾ ಅವರಿಗೆ ಕೇಳಿಯೇ ಬಿಟ್ಟರು. ನೀವು ನಿಮ್ಮ ತಲೆಯ ಬೈತಲೆಯಲ್ಲಿ ಸಿಂಧೂರವನ್ನು ಯಾಕೆ ಇಟ್ಟುಕೊಳ್ಳುತ್ತೀರಿ ಎಂದಾಗ ರೇಖಾ ಅವರು ಮೊದಲು ಸ್ತಬ್ದರಾದರು, ಆಮೇಲೆ ಸ್ವಲ್ಪ ಯೋಚಿಸಿ ಹೀಗೆ ಉತ್ತರವನ್ನು ಕೊಟ್ಟರು.

ನಾನು ಯಾವ ಪ್ರದೇಶ ಮತ್ತು ಪಟ್ಟಣದಿಂದ ಬಂದಿದ್ದೇನೆ, ಅಲ್ಲಿ ತಲೆಯ ಮುಂಭಾಗದ ಬೈತಲೆಯಲ್ಲೀ ಸಿಂಧೂರವನ್ನು ಹಚ್ಚಿಕೊಳ್ಳುವ ಪರಂಪರೆ ಮತ್ತು ಫ್ಯಾಶನ್ ಇದೆ ಆದ್ದರಿಂದ ನಾನು ಹಚ್ಚಿಕೊಳ್ಳುತ್ತೆನೆ ಎಂದರು.

80 ರ ದಶಕದಲ್ಲಿ ರೇಖಾ ಮತ್ತು ಅಮಿತಾಭ್ ಅವರ ಅಫೇರ್ಸಗಳ ಚರ್ಚೆ ಉತ್ತುಂಗ ಶಿಖರದ ಮೇಲಿತ್ತು. ಅದಾದ ನಂತರ ಅವರ ಪತಿಯ ನಿಧನದಿಂದಾಗಿ ಸುದ್ದಿಗಳು ರೇಖಾ ಅವರ ಸುತ್ತಲೇ ಸುತ್ತುತ್ತಿದ್ದವು. ಅದೇ ಸಮಯದಲ್ಲಿ ಅಂದರೆ 1980 ರಲ್ಲಿ ರಿಷಿ ಕಪೂರ್ ಮತ್ತು ನೀತು ಸಿಂಗ್ ಅವರ ಮದುವೆಯಲ್ಲಿಯು ರೇಖಾ ಕೊರಳಲ್ಲಿ ಮಾಂಗಲ್ಯ ಮತ್ತು ತಲೆಯಲ್ಲಿ ಸಿಂಧೂರ ತಿಲಕ ವನ್ನಿಟ್ಟ ಆ ಲೂಕ್ ಎಲ್ಲರಿಗೂ ವಿಚಾರ ಮಾಡುವಂತಾಗಿತ್ತು. ಮರುದಿನ ವೃತ್ತಪತ್ರ ಅಂಕಣಗಳಲ್ಲಿಯೂ ಕಪೂರ್ ಮದುವೆಗಿಂತ ರೇಖಾ ಅವರ ಸುದ್ದಿಗಳೇ ಜಾಸ್ತಿಯಾಗಿದ್ದವು.