‘ಇಂಥ’ ವಾಸ್ತುದೋಷಗಳಿಂದಲೇ ಮನೆಯಲ್ಲಿ ವಾದ-ವಿವಾದಗಳು ಆಗೋದು! ಒಂದ್ಸರಿ ಚೆಕ್ ಮಾಡಿ ‘ಈ’ ದೋಷಗಳು ನಿಮ್ಮ ಮನೆಯಲ್ಲಿ ಇಲ್ಲ ತಾನೇ..?
ಜಗತ್ತಿನ ಪ್ರತಿಯೊಂದು ವ್ಯಕ್ತಿ ನೆಮ್ಮದಿಯ, ಶಾಂತಿಯ ಜೀವನವನ್ನು ಬಾಳಬೇಕೆಂದು ನಿರೀಕ್ಷಿಸುತ್ತಾನೆ ಆಶಿಸುತ್ತಾನೆ. ವ್ಯಕ್ತಿ ಇಂದು ಶ್ರೀಮಂತನಿರಲಿ, ಬಡವನಾಗಿರಲಿ ಜೀವನದಲ್ಲಿ ಶಾಂತಿ ಸಮಾಧಾನ ನೆಮ್ಮದಿ ಇವು ಆರೋಗ್ಯ ಭರೀತ ಜೀವನಕ್ಕೆ ತುಂಬಾ ಪ್ರಾಮುಖ್ಯವಾಗಿವೆ. ಕೆಲವೊಮ್ಮೆ ನಾವು ಎಷ್ಟೇ ಕಾಳಜಿ ವಹಿಸಿದರೂ ಮನೆಯಲ್ಲಿರುವ ಸದಸ್ಯರ ನಡುವೆ ವಾಗ್ವಾದಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಕುಟುಂಬದ ಸದಸ್ಯರಲ್ಲಿ ಮನಸ್ತಾಪಗಳು ಉಂಟಾಗುತ್ತವೆ. ಅವು ಹಾಗೆಯೇ ಹೆಚ್ಚಾಗುತ್ತಾ ಹೋಗುತ್ತವೆ ಅದರಲ್ಲಿ ಕಡಿಮೆಯಾಗುವುದಿಲ್ಲ. ಇದರಿಂದ ಮನೆಯ ವಾತಾವರಣ ಯಾವಾಗಲೂ ಉದ್ವಿಗ್ನತೆಯಿಂದಲೇ ಕೂಡಿರುತ್ತದೆ.
ಇದರ ಹಿಂದೆ ಅನೇಕ ಕಾರಣಗಳು ಇರುತ್ತವೆ. ಮನಸ್ಥಿತಿ ಸರಿಯಾಗಿ ಇಲ್ಲದಿರುವುದು, ಆರೋಗ್ಯ ಸರಿಯಾಗಿ ಇಲ್ಲದಿರುವುದು, ಹಣದ ತಾಪತ್ರಯ, ನೌಕರಿಯಲ್ಲಿ ಸರಿಯಾಗಿ ಕೆಲಸ ಮಾಡಿದರೂ ಸಂಬಳ ಸರಿಯಾಗಿ ದೊರೆಯದೆ ಇರುವದು, ಮಕ್ಕಳ ನಡತೆ ಸರಿಯಾಗಿ ಇಲ್ಲದಿರುವುದು. ಹೀಗೆ ಇನ್ನೂ ಅನೇಕ ಕಾರಣಗಳಿರಬಹುದು. ಆದರೆ ಈ ಮೇಲಿನ ಅಂಶಗಳೆಲ್ಲವೂ ಚೆನ್ನಾಗಿ ಇದ್ದರೂ ಮನೆಯಲ್ಲಿ ಸತತವಾಗಿ ಕದನ, ಜಗಳ, ಕೋಪ, ತಾಪ ನಡೆಯುತ್ತಿದ್ದರೆ ಇದಕ್ಕೆ ವಾಸ್ತುದೋಷವು ಒಂದು ಕಾರಣವಿರುತ್ತದೆ, ಇದರ ಕಡೆಗೆ ಯಾರೂ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದ ಕೆಲವು ಋಣಾತ್ಮಕ ಶಕ್ತಿಗಳ ಅಥವಾ ವಿಚಾರಗಳ ಪ್ರಭಾವ ಮನೆಯೊಳಗೆ ಆಗುತ್ತಿರುತ್ತದೆ. ಅಂತ ಯಾವ ಸಂಗತಿಗಳು ಮನೆಯಲ್ಲಿ ಋಣಾತ್ಮಕ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡಿಕೊಳ್ಳುವ.
1.ಭಗ್ನವಾದ ಮೂರ್ತಿಗಳು:- ಮನೆಯಲ್ಲಿ ಒಡೆದುಹೋದ ಅಥವಾ ಭಗ್ನವಾದ ಮೂರ್ತಿಗಳು ಇರುವುದರಿಂದ ಋಣಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತ ಹೋಗುತ್ತದೆ. ಇಂಥ ಮೂರ್ತಿಗಳು ಮನೆಯಲ್ಲಿದ್ದರೆ ಮೊದಲು ಮೂರ್ತಿಗಳನ್ನು ಸರಿಯಾಗಿ ಹರಿಯುವ ನೀರಿನಲ್ಲಿ ವಿಸರ್ಜಿಸಿ ಆನಂತರ ಅವುಗಳ ಸ್ಥಾನದಲ್ಲಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಿರಿ.
- ನಲ್ಲಿಯಿಂದ ಸತತವಾಗಿ ನೀರು ತೊಟ್ಟಿಕ್ಕುವದು:- ಮನೆಯಲ್ಲಿಯ ನಲ್ಲಿಯಿಂದ ಸತತವಾಗಿ ನೀರು ಹನಿಹನಿಯಾಗಿ ತೊಟ್ಟಿಕ್ಕುತ್ತಿದ್ದರೆ ಮನೆಯಲ್ಲಿ ಇದು ವಾಸ್ತುದೋಷವನ್ನು ತರುತ್ತದೆ. ಇದರಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗಲು ಶುರುವಾಗುತ್ತದೆ. ಅದರ ಪ್ರಾರಂಭ ಜಗಳಗಳಿಂದ ಆಗುತ್ತದೆ.
- ಮುಳ್ಳುಗಳುಳ್ಳ ಗಿಡಗಳು:- ಮನೆಯಲ್ಲಿ, ಮನೆಯ ಗ್ಯಾಲರಿಯಲ್ಲಿ ಹೂಕುಂಡಗಳಲ್ಲಿ, ಮುಳ್ಳುಗಳಿರುವ ಗಿಡಗಳು ಇದ್ದರೆ ಅವು ಮನೆಯಲ್ಲಿ ಋಣಾತ್ಮಕ ಪ್ರಭಾವವನ್ನು ಬೀರಲು ಕಾರಣವಾಗುತ್ತವೆ. ಇಂಥ ವನಸ್ಪತಿಗಳಿರುವ ಮನೆಯಲ್ಲಿ ಹೆಚ್ಚು ಕದನಗಳು ಆಗುತ್ತವೆ. ಇಂಥ ಗಿಡಗಳು ಮನೆಯಲ್ಲಿ ಇದ್ದರೆ, ಮೊದಲು ಅವುಗಳನ್ನು ಮನೆಯಿಂದ ದೂರ ಹಾಕಿ. ಮನೆಯಲ್ಲಿ ಸುಖ ಶಾಂತಿ ಲಭಿಸಲು ಈ ಕೆಲಸ ಮಾಡುವುದು ತುಂಬಾ ಮುಖ್ಯ.
4) ಒಣಗಿದ ಗಿಡಗಳು:- ಮನೆಯಲ್ಲಿ ಚೆನ್ನಾಗಿರುವ ಗಿಡ ಒಮ್ಮೆಲೆ ಒಣಗಲು ಶುರುಮಾಡಿದರೆ, ವಾಸ್ತುದೋಷ ನಿರ್ಮಾಣವಾಗಲು ಪ್ರಾರಂಭವಾಗುತ್ತದೆ. ಈ ಒಣಗುವ ಗಿಡಗಳಿಂದ ಮನೆಯಲ್ಲಿ ಋಣಾತ್ಮಕ ಪ್ರಭಾವವು ಬೆಳೆಯುತ್ತ ಹೋಗುತ್ತದೆ. ಮತ್ತು ಯಾವ ಕಾರಣಗಳಿಲ್ಲದೆ ಚಿಕ್ಕಪುಟ್ಟ ವಿಷಯಗಳ ಮೇಲೆ ದೊಡ್ಡ ಜಗಳಗಳಾಗುತ್ತವೆ. ಆದ್ದರಿಂದ ಮನೆಯಲ್ಲಿಯ ಯಾವುದೇ ಗಿಡಗಳು ಒಣಗಲು ಶುರು ಮಾಡಿದರೆ ಅವುಗಳಿಗೆ ನೀರು ಹನಿಸಿ ಮತ್ತೆ ಪ್ರಫುಲ್ಲಿತವನ್ನಾಗಿ ಮಾಡಿ, ಮತ್ತೆ ಹಚ್ಚಹಸಿರನ್ನಾಗಿಸಿ.
- ಒಡೆದ ಗಾಜು:- ಒಡೆದ ಗಾಜು ಮತ್ತು ಕನ್ನಡಿಗಳು ಮನೆಯಲ್ಲಿದ್ದರೆ ಸಂಬಂಧಗಳಲ್ಲಿ ಬಿರುಕು ಕಾಣಿಸಲು ಶುರುವಾಗುತ್ತದೆ. ಮನೆಯಲ್ಲಿ ಒಡೆದ ಗಾಜನ್ನು ಇಡುವುದು, ಇದು ಒಂದು ಪ್ರಕಾರದ ವಾಸ್ತುದೋಷವಾಗಿದೆ. ಇದರಿಂದ ಮನೆಯಲ್ಲಿ ವಿವಾದ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮನೆಯಲ್ಲಿ ಅಥವಾ ಮನೆಯ ಸದಸ್ಯರಲ್ಲಿ ಕಾರಣವಿಲ್ಲದೆ ಸುಮ್ಮನೆ ಚಿಕ್ಕಪುಟ್ಟ ವಿಷಯಗಳ ಮೇಲೆ ಜಗಳಗಳಾಗುತ್ತಿದ್ದರೆ ಮೇಲೆ ಹೇಳಿದ ವಾಸ್ತು ದೋಷಗಳ ಈ ಪ್ರಕಾರಗಳು ಮನೆಯಲ್ಲಿ ಕಂಡುಬಂದರೆ ಮೊದಲು ಈ ವಸ್ತುಗಳನ್ನು ಮನೆಯಿಂದ ಆಚೆ ಬಿಸಾಕಿಬಿಡಿ. ಇದರಿಂದ ಮನೆಯ ವಾತಾವರಣವು ನೆಮ್ಮದಿಯಾಗಲು ಸಹಾಯವಾಗುತ್ತದೆ.
ವಿಶೇಷ ಸೂಚನೆ:- ಮಿತ್ರರೆ, ಮೇಲೆ ನೀಡಿದ ವಾಸ್ತು ದೋಷದ ಕಾರಣ ಮತ್ತು ಪರಿಹಾರ ಇವುಗಳನ್ನು ಸಾಮಾಜಿಕ ಮತ್ತು ಧಾರ್ಮಿಕ ಮಾನ್ಯತೆಗಳ ಆಧಾರದ ಮೇಲೆ ಕೊಡಲಾಗಿದೆ. ಇದರ ಹಿಂದೆ ಯಾವುದೇ ರೀತಿಯ ಅಂಧ ಶ್ರದ್ಧೆಗಳನ್ನು ಬೆಳೆಸುವ ಮತ್ತು ಹರಡುವಂತಹ ಉದ್ದೇಶಗಳು ಇಲ್ಲವೇ ಇಲ್ಲ. ಆದ್ದರಿಂದ ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು.