ಊಟ ಮಾಡಿದೆಯಾ? ಪಂದ್ಯದ ವೇಳೆ ಅನುಷ್ಕಾಗೆ ವಿರಾಟ್ ಕೇಳಿದ ವಿಡಿಯೋ ವೈರಲ್! ನೋಡಿ Video
ಏನೇ ಆಗಲಿ ನಮ್ಮ RCB ತಂಡ ಸದ್ಯ ಹಿಂದಿಗಿಂತಲೂ ಒಳ್ಳೆಯ ಫಾರ್ಮದಲ್ಲಿದೆ. ಮತ್ತು ವಿರಾಟ್ ಅವರ ನೇತೃತ್ವದಲ್ಲಿ ನಮ್ಮೆಲ್ಲರ ಆಸೆಯಂತೆ ಈ ಸಲ ಕಪ್ ನಮ್ದೆ ಆದರೆ ನಮಗಿಂತಲೂ ಖುಷಿ ಮಾತ್ಯಾರು ಇರುವದಿಲ್ಲ ಈ ಜಗದಲ್ಲಿ. ಸದ್ಯ ಐಪಿಎಲ್ 13 ನೇ ಆವೃತ್ತಿಯಲ್ಲಿ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ಒಂದು ಗೆಲುವಿನ ಅವಶ್ಯಕತೆ ಇದೆ. ಇಂದು ಮುಂಬಯಿ ವಿರುದ್ಧದ ಆಟದಲ್ಲಿ ಗೆಲುವು ದಾಖಲಿಸಿದಲ್ಲಿ ಮುಂದಿನ ದಾರಿ RCB ಸುಲಭವಾಗಲಿದೆ.
ಸದ್ಯ ವಿರಾಟ್ ಅವರ ಜೊತೆಗೆ ಅವರ ಪತ್ನಿಯೂ ಜೊತೆಯಲ್ಲೇ ಇದ್ದಾರೆ. ಪ್ರತಿ ಪಂದ್ಯದಲ್ಲಿಯೂ ಅನುಷ್ಕಾ ಅವರು ತಮ್ಮ ಪತಿಯ ಜೊತೆಗಿದ್ದು ವಿರಾಟ್ ಅವರಿಗೆ ಚೀಯರ್ ಮಾಡುತ್ತಿದ್ದಾರೆ.
ಏತನ್ಮಧ್ಯೆ, ವಿರಾಟ್ ಅವರು ಒಂದು ಒಳ್ಳೆಯ ಪತಿ ಮತ್ತು ಜವಾಬ್ದಾರಿಯುತ ತಂದೆಯಾಗುತ್ತಿದ್ದಾರೆ ಎಂದು ತಿಳಿಸಿಕೊಡುವ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ಅವರು ಮೈದಾನದಲ್ಲಿ ಆಡುತ್ತಿರುವಾಗಲೂ ತಮ್ಮ ಪತ್ನಿಯ ಊಟದ ಬಗ್ಗೆಯ ಕಾಳಜಿ ಕೈ ಸನ್ನೆಯಿಂದ ಮಾಡಿ ಕೇಳುತ್ತಿರುವ ದೃಶ್ಯವಾಗಿದೆ. ಈ ದೃಶ್ಯವು ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಮತ್ತು ಇದಕ್ಕೆ ಚೆನ್ನಾಗಿ ಸ್ಪಂದಿಸಿದ್ದಾರೆ.
ವಿಡಿಯೋ ನೋಡಿ
ಕೆಲವು ದಿನಗಳ ಹಿಂದೆಯೇ RCB ಯ ಇನ್ನೊಬ್ಬ ಆಟಗಾರರಾದ ಎಲ್ಲರ ಪ್ರೀತಿಯ AB ಡಿವಿಲಿಯರ್ಸ್ ಅವರು ವಿರುಷ್ಕಾ ಅವರ ಸುಂದರ ರೊಮ್ಯಾಂಟಿಕ್ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋಗೆ ನೆಟ್ಟಿಗರು ಇನ್ಸ್ಟಾಗ್ರಾಂ ನಲ್ಲಿ ಭರ್ಜರಿಯಾಗಿ ಪ್ರೋತ್ಸಾಹಿಸಿದ್ದರು.