46 ಮಿಲಿಯನ್ ಫಾಲೋಯರ್ಸ್ ಸಿಕ್ಕರೆಂದು ಟಾಪ್ ಲೆಸ್ ಆದ ನಟಿ: ಸಿನಿಮಾ ಇಲ್ಲ, ಈಗ ಬಟ್ಟೆ ಕೂಡಾ ಇಲ್ಲ ಎಂದ ನೆಟ್ಟಿಗರು
ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ರೇಸ್ 3 ಮತ್ತು ಕಿಕ್ ಸಿನಿಮಾಗಳಲ್ಲಿ ನಟಿಸಿದ ನಟಿ ಜಾಕ್ವೆಲಿನಾ ಫರ್ನಾಂಡೀಸ್ ತನ್ನ ಹಾಟ್ ಮತ್ತು ಬೋಲ್ಡ್ ಲುಕ್ ಗಳಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಜಾಕ್ವೆಲಿನಾ ಮೂಲತಃ ಶ್ರೀಲಂಕಾ ಮೂಲದವರು, ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮೇಲೂ ಆಕೆ ಹೆಚ್ಚು ಜನಪ್ರಿಯತೆ ಪಡೆದಿದ್ದು ಮಾತ್ರ ಸಲ್ಮಾನ್ ಖಾನ್ ಸಿನಿಮಾ ನಂತರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಜಾಕ್ವೆಲಿನಾ ಫ್ಯಾನ್ ಫಾಲೋಯಿಂಗ್ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೂಡಾ ಇದೆ ಎನ್ನುವುದಕ್ಕೆ ಈ ನಟಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿರುವ ಹಿಂಬಾಲಕರನ್ನು ನೋಡಿದಾಗಲೇ ತಿಳಿಯುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಜಾಕ್ವೆಲಿನಾ ಹೆಚ್ಚು ಸಕ್ರಿಯರಾಗಿರುವುದು ಕೂಡಾ ವಾಸ್ತವ.

ಜಾಕ್ವೆಲಿನಾ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರ ಹಿಂಬಾಲಕರ ಸಂಖ್ಯೆ 4 ಕೋಟಿ 60 ಲಕ್ಷ ದಾಟಿದ್ದು, ಜಾಕ್ವೆಲಿನಾ ಗೆ ಇರುವ ಜನಪ್ರಿಯತೆಗೆ ಇದೊಂದು ಉದಾಹರಣೆ ಎಂದು ನಾವು ಹೇಳಬಹುದು. ತನ್ನ ಫಾಲೋಯರ್ಸ್ ಈ ಮಟ್ಟದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಜಾಕ್ವೆಲಿನಾ ಕೂಡಾ ಅಭಿಮಾನಿಗಳ ದಿಲ್ ಖುಷ್ ಮಾಡುವುದಕ್ಕೆ ತಮ್ಮ ಹೊಸ ಫೋಟೋ ಗಳನ್ನು ಶೇರ್ ಮಾಡಿದ್ದು, ಈ ಫೋಟೋಗಳು ವೈರಲ್ ಆಗುತ್ತಾ ಸಾಗಿವೆ. ಜಾಕ್ವೆಲಿನಾ ತನ್ನ ಫಾಲೋಯರ್ಸ್ ಗೆ ಧನ್ಯವಾದಗಳನ್ನು ಹೇಳುವ ಸಲುವಾಗಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಮೂರು ಹಾ ಟ್ ಫೋಟೋಗಳನ್ನು ಹಂಚಿಕೊಂಡು ಜಾಕ್ವೆಲಿನಾ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ಜಾಕ್ವೆಲಿನಾ ಶೇರ್ ಮಾಡಿರುವ ಫೋಟೋಗಳಲ್ಲಿ ಆಕೆ ಬಿಳಿಯ ಪ್ಯಾಂಟ್ ಧರಿಸಿ ಗುಲಾಬಿ ಹೂಗುಚ್ಛವನ್ನು ಹಿಡಿದಿರುವುದನ್ನು ನೋಡಬಹುದು. ಏನು ಬಿಳಿ ಪ್ಯಾಂಟ್, ಹೂ ಗುಚ್ಛ ಮಾತ್ರ? ಮೇಲೆ ಯಾವ ಡ್ರೆಸ್ ಹಾಕಿದ್ರು ಅನ್ನೋ ಪ್ರಶ್ನೆ ಮಾಡಿರಬಹುದು. ಅದಕ್ಕೆ ಉತ್ತರ ಇಲ್ಲೇ ಇದೆ. ಅದನ್ನು ಯಾಕೆ ನಾವು ಹೇಳಲಿಲ್ಲ ಎಂದರೆ ಜಾಕ್ವೆಲಿನಾ ಅಭಿಮಾನಿಗಳಿಗಾಗಿ ಟಾಪ್ ಲೆಸ್ ಫೋಟೋ ಶೇರ್ ಮಾಡಿದ್ದಾರೆ. ಹೌದು ಸರಿಯಾಗಿ ಓದಿದ್ರಿ, ಜಾಕ್ವೆಲಿನಾ ಅಭಿಮಾನಿಗಳಿಗೆ ಖುಷಿ ನೀಡಲು ಟಾಪ್ ಲೆಸ್ ಆಗಿ ಫೋಸ್ ಕೊಟ್ಟು ಗಮನ ಸೆಳೆದಿದ್ದಾರೆ. ಜಾಕ್ವೆಲಿನಾ ಎ ದೆ ಯ ಭಾಗದಲ್ಲಿ ಹೂ ಗುಚ್ಛ ಹಿಡಿದು ಫೋಸ್ ನೀಡಿದ್ದಾರೆ.

ನಟಿಯ ಈ ಫೋಟೋ ಗಳನ್ನು ನೋಡಿದ ನೆಟ್ಟಿಗರು ಕೂಡಾ ವಿಧ ವಿಧವಾದ ರೀತಿಯಲ್ಲಿ ಕಾಮೆಂಟ್ ಗಳನ್ನು ಹಾಕುವ ಮೂಲಕ ಜಾಕ್ವೆಲಿನಾ ಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬರು, ಪಾಪ ಸಿನಿಮಾಗಳು ಸಿಗುತ್ತಿಲ್ಲ, ಹಾಕ್ಕೊಳ್ಳೋಕೆ ಬಟ್ಟೇನೂ ಸಿಗ್ತಾ ಇಲ್ಲ ಆದರೆ 4.6 ಮಿಲಿಯನ್ ಫಾಲೋಯರ್ಸ್ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನು ಹೇಳ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಹೊಗಳುತ್ತಾ ನೀವು ಬಹಳ ಸುಂದರವಾಗಿದ್ದೀರಿ, ಥೇಟ್ ಹೂವಿನ ತರ ಎಂದು ಹೇಳಿದೇ, ಓರ್ವ ನೆಟ್ಟಿಗರು 4.6ಮಿಲಿಯನ್ ಗೆ ಧನ್ಯವಾದಗಳು, 5 ಮಿಲಿಯನ್ ಆಗುವವರೆಗೆ ನನಗೆ ಕಾಯೋದು ಕಷ್ಟವಾಗಿದೆ ಎಂದು ಕಾಲೆಳೆದಿದ್ದಾರೆ.

ಇನ್ನು ಜಾಕ್ವೆಲಿನಾ ವೃತ್ತಿಯ ಬಗ್ಗೆ ಮಾತನಾಡುವುದಾದರೆ ನಟಿ ಸದ್ಯಕ್ಕೆ ತಮ್ಮ ಅ ಟ್ಯಾ ಕ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಜಾಕ್ವೆಲಿನಾ ಜೊತೆಗೆ ನಟ ಜಾನ್ ಅಬ್ರಹಾಂ ಮತ್ತು ರಕುಲ್ ಪ್ರೀತ್ ಸಿಂಗ್ ಕೂಡಾ ಇದ್ದಾರೆ. ಇದಲ್ಲದೇ ಜಾಕ್ವೆಲಿನಾ ಸಾಜಿದ್ ನಾಯ್ಡಾವಾಲಾ ನಿರ್ಮಾಣದ ಕಿಕ್ 2 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಮತ್ತೊಮ್ಮೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಕಿಕ್ 1 ಸಿನಿಮಾದಲ್ಲಿ ಕೂಡಾ ಸಲ್ಮಾನ್ ಖಾನ್ ಗೆ ಜಾಕ್ವೆಲಿನಾ ನಾಯಕಿಯಾಗಿ ನಟಿಸಿದ್ದನ್ನು ನಾವು ಸ್ಮರಿಸಬಹುದು.