Viral Video: ಫಿಟ್ನೆಸ್ ವೀಡಿಯೋ ಮೂಲಕ ಜನರ ಗಮನ ಸೆಳೆದ ಮಲ್ಲಿಕಾ ಶೆರಾವತ್: ಮದುವೆ ಮಾಡಿಕೊಳ್ಳಿ ಎಂದ ಅಭಿಮಾನಿಗಳು

ಬಾಲಿವುಡ್ ಅಂಗಳದಲ್ಲಿ ಅದೆಷ್ಟೋ ಜನ ನಟಿಯರು ಹೆಸರು ಮಾಡಿದರು, ಅನೇಕ ಸಿನಿಮಾಗಳಲ್ಲಿ ನಟಿಸಿದರು, ಸ್ಟಾರ್ ನಟಿಯರಾದರು‌. ಆದರೆ ಮಾಡಿದ್ದು ಬೆರಳೆಣಿಕೆಯ ಸಿನಿಮಾಗಳಾದರೂ ಕೂಡಾ ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಸಿನಿ ಪಯಣ ಮಾಡಿದ ನಟಿ, ತನ್ನ ಹಾಟ್ ಮತ್ತು ಬೋಲ್ಡ್ ಲುಕ್ ನಿಂದ ಪಡ್ಡೆಗಳ ನಿದ್ದೆಗೆಡಿಸಿದ ನಟಿ ಎಂದರೆ ಅದು ಮಲ್ಲಿಕಾ ಶೆರಾವತ್. ಹೌದು ಒಂದು ಕಾಲದಲ್ಲಿ ಬಾಲಿವುಡ್ ನ ಸೆ ಕ್ಸ್ ಬಾಂ ಬ್ ಎಂದೇ ಹೆಸರಾದ ಮಲ್ಲಿಕಾ ಶೆರಾವತ್ ನಟನೆಯಲ್ಲಿ, ತನ್ನ ಮಾದಕ ನೋಟದಿಂದ ಹಾಗೂ ಬೋಲ್ಡ್ ಲುಕ್ ಗಳಿಂದಲೇ ಹೆಸರಾದವರು, ಮಲ್ಲಿಕಾ ಸಿನಿಮಾಗಳು ಎಂದರೆ ಹಸಿ ಬಿಸಿ ದೃಶ್ಯಗಳು ಸಾಮಾನ್ಯ ಎನ್ನುವಂತೆ ಒಂದು ಟಾಕ್ ಕೂಡಾ ಇದ್ದದ್ದು ಸುಳ್ಳಲ್ಲ.‌

ಮಲ್ಲಿಕಾ ಶೆರಾವತ್ ಬಾಲಿವುಡ್ ನಲ್ಲಿ ಬಿ ರು ಗಾಳಿ ಎಬ್ಬಿಸಿದ್ದು ಮ ರ್ಡ ರ್ ಸಿನಿಮಾದ ಮೂಲಕ. ಆ ಸಿನಿಮಾದಲ್ಲಿ ಇಮ್ರಾನ್ ಆಶ್ಮಿಯೊಂದಿಗೆ ಚಳಿ ಬಿಟ್ಟು ನಟಿಸಿದ್ದರು ಮಲ್ಲಿಕಾ ಶೆರಾವತ್. ಚುಂಬನ ದೃಶ್ಯಗಳಲ್ಲಿ, ಮಂಚದ ದೃಶ್ಯಗಳಲ್ಲಿ ತುಂಬಾ ಬೋ ಲ್ಡಾಗಿ ನಟಿಸಿದ ಮಲ್ಲಿಕಾ ಆ ಸಿನಿಮಾ ಬಿಡುಗಡೆ ಹೊಂದಿದ ಮೇಲೆ ಬಾಲಿವುಡ್ ನಲ್ಲೊಂದು ಸಂಚಲನ ಸೃಷ್ಟಿಸಿದ್ದು ಕೂಡಾ ಸುಳ್ಳಲ್ಲ. ಮಲ್ಲಿಕಾ ಶೆರಾವತ್ ಆ ಸಿನಿಮಾ ಮೂಲಕ ಒಂದು ಹೊಸ ಬ್ರಾಂಡ್ ಆಗಿ ಬಿಟ್ಟರು‌, ಮಲ್ಲಿಕಾ ಮಾತಿನಲ್ಲಿ ಕೂಡಾ ಬೋಲ್ಡ್ ಹೇಳಬೇಕಾಗಿದ್ದನ್ನು ಬೋಲ್ಡಾಗಿ ಹೇಳುವ ನಟಿ ಎನ್ನುವುದು ಕೂಡಾ ನಿಜ.

ಮಲ್ಲಿಕಾ ಬಾಲಿವುಡ್ ನಲ್ಲಿ ಕೆಲಸ ಮಾಡುತ್ತಲೇ ಜಾಕಿಚಾನ್ ಜೊತೆಗೆ ಮಿತ್ ಸಿನಿಮಾ, ಹಾವಿನ ಕಥಾನಕವುಳ್ಳ ಹಿಸ್ ಸಿನಿಮಾ ಹಾಗೂ ಕಮಲಹಾಸನ್ ಜೊತೆ ದಶಾವತಾರಂ ಗಳಂತಹ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ.‌ ಆದರೂ ಬಾಲಿವುಡ್ ಹಾಲಿವುಡ್ ಎಂಬುದರಲ್ಲಿ ಆಯ್ಕೆ ಮಾಡುವಲ್ಲಿ ಬಹುಶಃ ಆಕೆ ಎಡವಿದರೇನೋ? ಅತ್ತ ಹಾಲಿವುಡ್ ನಲ್ಲಿ ಕೂಡಾ ಕ್ಲಿಕ್ ಆಗಲಿಲ್ಲ ಮಲ್ಲಿಕಾ, ಇತ್ತ ಬಾಲಿವುಡ್ ನಲ್ಲಿ ಕೂಡಾ ಮಲ್ಲಿಕಾ ಬೇಡಿಕೆ ಕುಗ್ಗಿ ಹೋಯಿತು. ಬಾಲಿವುಡ್ ನಲ್ಲೂ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ ಆಕೆ. ಮಲ್ಲಿಕಾ ಒಂದೆರಡು ಐಟಂ ಸಾಂಗ್ ಮಾಡಿದರು, ಅದರಲ್ಲಿ ಜಲೇಬಿ ಬಾಯಿ ಹಾಡು ಜನಪ್ರಿಯವಾಗಿ ಜನರ ಗಮನ ಸೆಳೆದಿತ್ತು.

ಪ್ರಸ್ತುತ ಮಲ್ಲಿಕಾ ಬೆಳ್ಳಿತೆರೆಯ ಮೇಲೆ ಕಾಣಿಸುವುದು ಆಗೊಮ್ಮೆ, ಈಗೊಮ್ಮೆ ಕೆಲವೊಮ್ಮೆ ಇಲ್ಲವೇ ಇಲ್ಲ ಎನ್ನುವ ಹಾಗೆ ಆಗಿದೆ. ಅಮೆರಿಕಾದಲ್ಲೇ ಕೆಲವು ವರ್ಷಗಳಿದ್ದ ನಟಿ ಅಲ್ಲಿ ಮನೆ ಬಾಡಿಗೆ ಕಟ್ಟಿಲ್ಲವೆಂಬ ವಿಷಯಕ್ಕೆ ಸುದ್ದಿಯಾಗಿದ್ದರು‌. ಇದೆಲ್ಲದರ ನಡುವೆ ಮಲ್ಲಿಕಾ ಸೋಶಿಯಲ್ ಮೀಡಿಯಾ ದಲ್ಲಿ ಸಕ್ರಿಯವಾಗಿದ್ದು, ತನ್ನ ಅಂದವಾದ ಫೋಟೋ ಗಳನ್ನು, ವೀಡಿಯೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ದಿಲ್ ಖುಷ್ ಮಾಡುತ್ತಲೇ ಇರುತ್ತಾರೆ. ತನ್ನ ಫಿಟ್ನೆಸ್ ವೀಡಿಯೋಗಳನ್ನು ಹಂಚಿಕೊಳ್ಳುವ ಮಲ್ಲಿಕಾ ಅವರ ವೀಡಿಯೋಗಳಿಗೆ ಲಕ್ಷ ಲಕ್ಷ ವೀಕ್ಷಣೆಗಳು ಕೂಡಾ ದೊರೆಯುತ್ತವೆ.

ಅಂತದ್ದೇ ಒಂದು ಫಿಟ್ನೆಸ್ ವೀಡಿಯೋ ಶೇರ್ ಮಾಡಿರುವ ಮಲ್ಲಿಕಾ ಹೈ ಇಂಟೆನ್ಸಿಟಿ ವರ್ಕೌಟ್ ನನಗೆ ಬಹಳ ಪ್ರಿಯವಾದ ಅಭ್ಯಾಸ, ಇದು ಫುಲ್ ಬಾಡಿಗೆ ಸೂಕ್ತ, ಒಂದು ಮಸಲ್ ಗ್ರೂಪ್ ಗಲ್ಲ ಎಂದು ಬರೆದುಕೊಂಡಿದ್ದಾರೆ. ಮಲ್ಲಿಕಾ ಶೇರ್ ಮಾಡಿದ ಈ ವೀಡಿಯೋವನ್ನು ಈಗಾಗಲೇ ಎರಡು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಅವರ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು ಮಲ್ಲಿಕಾರ ಫೇಮಸ್ ಹಾಡು ಭೀಗೇ ಹೋಂಟ್ ತೆರಾ ಹಾಡಿನ ಸಾಲು ಹಾಕಿ ಬೇಗ ಮದುವೆ ಆಗಿ ಎಂದಿದ್ದಾರೆ. ಇನ್ನೊಬ್ಬರು ಈ ಮನೋಹರಿಯ ಫೋಟೋ ನೋಡಿ ಮನ ಪುಳಕಿತವಾಯಿತು ಎಂದು ಬರೆದು ಕೊಂಡಿದ್ದಾರೆ.